ವಿಧಾನಸಭೆ: ವಾಣಿಜ್ಯ ಬ್ಯಾಂಕ್‌ಗಳಿಗೆ ಉದ್ಯಮಿಗಳು ವಂಚಿಸಿರುವ ಘಟನೆ ಪ್ರಸ್ತಾಪಿಸಿ ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ, ರೈತರು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಪಡೆದಿರುವ ಸಾಲ ಕಟ್ಟುವುದಿಲ್ಲವೆಂದು ಹೇಳಬೇಕು ಎಂದರು.
ಸಾಲಮನ್ನಾ ವಿಚಾರ ಚರ್ಚೆ ಸಂದರ್ಭ, ವಿದೇಶಗಳಿಗೆ ಪರಾರಿಯಾಗಿರುವ ಉದ್ಯಮಿಗಳಿಂದ ವಸೂಲು ಮಾಡುವವರೆಗೂ ನಾವು ಕಟ್ಟುವುದಿಲ್ಲ ಎಂದು ರೈತರು ಪಣ ತೊಡಬೇಕೆಂದರು. ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್, ವಾಣಿಜ್ಯ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿದ್ದಕ್ಕೆ ಮಧ್ಯಪ್ರವೇಶಿಸಿದ ಅವರು, ನನಗೂ ಮಾತನಾಡಲು ಅವಕಾಶ ನೀಡುವಂತೆ ಕೋರಿದರು. ಸ್ಪೀಕರ್ ಪೀಠದಲ್ಲಿದ್ದ ಹಿರಿಯ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರತಿಪಕ್ಷ ನಾಯಕರು ಮಾತನಾಡುತ್ತಿದ್ದಾರೆ. ಆ ಮೇಲೆ ಅವಕಾಶ ಕೊಡುತ್ತೇನೆ ಎಂದರು.
ನಂತರ ತಮ್ಮ ಸರದಿ ಬಂದಾಗ ಮಾತನಾಡಿದ ರಾಜಣ್ಣ, ರೈತರು ಪ್ರಾಮಾಣಿಕವಾಗಿ ಸಾಲ ಕಟ್ಟುತ್ತಿದ್ದಾರೆ. ಆದರೆ, ಅವರ ಮೇಲೆಯೇ ಬ್ಯಾಂಕ್ ಗಳು ಕ್ರಮ ಕೈಗೊಳ್ಳುತ್ತವೆ.
ಉದ್ಯಮಿಗಳು ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಗಳಿಗೆ ಪರಾರಿಯಾಗುತ್ತಿದ್ದಾರೆ. ಅವರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ,ಪರಾರಿಯಾಗಿರುವ ಉದ್ಯಮಿಗಳಿಂದ ಬಾಕಿ ವಸೂಲು ಮಾಡುವವರೆಗೂ ನಾವು ಪಡೆದಿರುವ ಸಾಲ ಕಟ್ಟುವುದಿಲ್ಲ ಎಂದು ನಮ್ಮ ರೈತರು ನೇರವಾಗಿಯೇ ಬ್ಯಾಂಕ್‌ಗಳ ಅಧಿಕಾರಿಗಳಿಗೆ
ಹೇಳಬೇಕಿದೆ ಎಂದರು.