Advertisement

ಕಾಮರ್ಸ್‌ ಲ್ಯಾಬ್‌

07:20 AM May 11, 2018 | |

ಅಂದು ನಮ್ಮ ಕಾಲೇಜಿನ ಪ್ರಿನ್ಸಿಪಾಲರು ತರಗತಿಗೆ ಬಂದು ನಮ್ಮಲ್ಲಿ ಪ್ರಶ್ನಿಸಿದರು, “”ಯಾರಾದರೂ ಕಾಮರ್ಸ್‌ ಲ್ಯಾಬ್‌ ಬಗ್ಗೆ ಕೇಳಿದ್ದೀರಾ?” ಎಂದು. ಆಗ ನಾವೆಲ್ಲ ಅಂದುಕೊಂಡೆವು, “”ನಾವು ಕೇವಲ ವಿಜ್ಞಾನಕ್ಕೆ ಸಂಬಂಧಪಟ್ಟ ಲ್ಯಾಬ್‌ ಬಗ್ಗೆ ಕೇಳಿದ್ದೇವೆ. ಇದೇನು ಕಾಮರ್ಸ್‌ ಲ್ಯಾಬ್‌ ಎಂದರೆ? ಅದು ಹೇಗಿರಬಗುದು?” ಹೀಗೆ ಕೆಲವು ಪ್ರಶ್ನೆಗಳು ನಮ್ಮೊಳಗೇ ಮೂಡಿದವು.

Advertisement

ಆಗ ನಮ್ಮ ಸರ್‌ ನಮಗೆ ಈ ಕುರಿತು ವಿವರಣೆ ನೀಡಿದರು, “”ಅವರು ಇದೇ ಕಾರ್ಯಕ್ರಮವನ್ನು ತಾನು ಈ ಹಿಂದೆ ಸೇವೆ ಸಲ್ಲಿಸಿದ ಕಾಲೇಜಿನಲ್ಲಿ ನಡೆಸಿದ್ದರಂತೆ. ಈ ಕಾರ್ಯಕ್ರಮದ ಎಲ್ಲಾ ಜವಾಬ್ದಾರಿಯನ್ನು ಫೈನಲ್‌ ಇಯರ್‌ ವಿದ್ಯಾರ್ಥಿಗಳಾದ ನೀವೇ ನಡೆಸಿಕೊಡಬೇಕು. ಇದಕ್ಕೆ ಬೇಕಾದ ಎಲ್ಲಾ ರೀತಿಯ ಸಹಾಯ ನಾನು ನಿಮಗೆ ಮಾಡುತ್ತೇನೆ” ಎಂದರು.

 ಸರ್‌ ನಮಗೆ ಒಂದು ತಿಂಗಳ ಮುಂಚಿತವಾಗಿಯೇ ಈ ಕಾರ್ಯಕ್ರಮದ ಬಗ್ಗೆ ಸೂಚನೆ ನೀಡಿದ್ದರು. ಕಾಮರ್ಸ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನಾವು ಸಂಗ್ರಹಿಸಿ ಅದನ್ನು ಪ್ರದರ್ಶಿಸಬೇಕಾಗಿತ್ತು. ಈ ಲ್ಯಾಬ್‌ಗ ಬೇಕಾದ ಎಲ್ಲಾ ದಾಖಲೆಗಳ ವಿವರಗಳನ್ನು ಸರ್‌ ನಮಗೆ ತಿಳಿಸಿಕೊಟ್ಟರು. ನಮ್ಮ ತರಗತಿಯ ಎಲ್ಲಾ ವಿದ್ಯಾರ್ಥಿನಿಯರನ್ನು ಹಲವು ತಂಡಗಳಾಗಿ ವಿಂಗಡಿಸಿದರು. ಎಲ್ಲಾ ತಂಡಕ್ಕೂ ಒಂದೊಂದು ವಿಷಯ ನೀಡಲಾಯಿತು. ಬ್ಯಾಂಕಿಂಗ್‌, ಇನ್ಶೂರೆನ್ಸ್‌, ಬಾಂಡ್ಸ್‌, ಶೇರ್, ಮ್ಯಾನೇಜೆ¾ಂಟ್‌ ಥಿಂಕರ್ಸ್‌, ಕಂಪೆನಿ ಡಾಕ್ಯುಮೆಂಟ್ಸ…, ಟಾಪ್‌ ಸಿಇಒಗಳು- ಹೀಗೆ ಹಲವಾರು ವಿಷಯಗಳನ್ನು ಪ್ರತಿ ತಂಡಕ್ಕೂ ನೀಡಲಾಯಿತು. ಇವುಗಳಲ್ಲಿ ನಮಗೆ ಸಿಕ್ಕಿದ ವಿಷಯ ಕಂಪೆನಿ ಡಾಕ್ಯುಮೆಂಟ್ಸ್

ನಮ್ಮ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನಾವು ಸಂಗ್ರಹಿಸಲು ಶುರುಮಾಡಿದೆವು. ಲ್ಯಾಬ್‌ಗ ಬೇಕಾದ ಶೇ. 50ರಷ್ಟು ದಾಖಲೆಗಳನ್ನು ಸರ್‌ ಮುಂಚಿತವಾಗಿಯೇ  ಸಂಗ್ರಹಿಸಿ ಇಟ್ಟಿದ್ದರು. ಅವುಗಳನ್ನು ಸಹ ಅವರು  ನಮಗೆ ಪ್ರದರ್ಶನಕ್ಕಾಗಿ ನೀಡಿದರು. ಮುಂದೆ ನಾವು ಸಂಗ್ರಹಿಸಿದ ಎಲ್ಲಾ ದಾಖಲೆಗಳನ್ನು ಡ್ರಾಯಿಂಗ್‌ ಶೀಟ್‌ಗೆ ಅಂಟಿಸಿ ಎಲ್ಲಾ ಸಿದ್ಧತೆ ಮಾಡಿಕೊಂಡೆವು. ನೋಡನೋಡುತ್ತಿದಂತೆ  ಕಾಮರ್ಸ್‌ ಲ್ಯಾಬ್‌ನ ದಿನ ಬಂದೇ ಬಿಟ್ಟಿತು.

ಎರಡು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಿತು.  ನಮ್ಮ ಕಾಲೇಜಿನ ಎಲ್ಲ ಪದವಿ ಹಾಗೂ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಲ್ಯಾಬ್‌ನ ವೀಕ್ಷಣೆಗೆ ಬಂದಿದ್ದರು. ನಾವು ಅವರಿಗೆ ಎಲ್ಲಾ ದಾಖಲೆಗಳ ಬಗ್ಗೆ ವಿವರಣೆ ನೀಡಿದೆವು. ಈ ಹಿಂದೆ ಕಾಲೇಜಿನಲ್ಲಿ ನಡೆದ ಅಷ್ಟೂ ಕಾರ್ಯಕ್ರಮಗಳಲ್ಲಿ ಈ ಕಾರ್ಯಕ್ರಮ ಒಂದು ವಿಭಿನ್ನ ಅನುಭವ ಎಂದರೆ ತಪ್ಪಾಗಲಾರದು. ಕಾಮರ್ಸ್‌ ಲ್ಯಾಬ್‌ನ ಬಗ್ಗೆ ಯಾವುದೇ ಅರಿವಿಲ್ಲದ ನಮಗೆ ಹಾಗೂ ಇತರ ಎಲ್ಲಾ ವಿದ್ಯಾರ್ಥಿಗಳಿಗೆ ತುಂಬಾ ಸದುಪಯೋಗವಾಯಿತು. 

Advertisement

ಸುಶ್ಮಿತಾ ಪೂಜಾರಿ, ದ್ವಿತೀಯ ಎಂ.ಕಾಂ.
ಡಾ. ಜಿ ಶಂಕರ್‌ ಸರಕಾರಿ ಮಹಿಳಾ ಕಾಲೇಜು, ಉಡುಪಿ.

 

Advertisement

Udayavani is now on Telegram. Click here to join our channel and stay updated with the latest news.

Next