Advertisement

ಮೀ ಟೂ ವಿಚಾರವಾಗಿ ನೋ ಕಾಮೆಂಟ್‌: ಜಯಮಾಲಾ

07:00 AM Oct 23, 2018 | |

ಶಿವಮೊಗ್ಗ: ದೇಶಾದ್ಯಂತ ಸಂಚಲನ ಮೂಡಿಸಿರುವ ಮೀ ಟೂ ವಿಚಾರವಾಗಿ ಕಾಮೆಂಟ್‌ ಮಾಡಲ್ಲ. ನನಗೆ ಗೊತ್ತಿಲ್ಲದೇ ಇರೋ ವಿಷಯದ ಬಗ್ಗೆ ಮಾತಾಡಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಹೇಳಿದರು. 

Advertisement

ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮೀ ಟೂ ಅಂದರೆ ಏನ್ರೀ ಅದು ಎಂದರು. ಚುನಾವಣೆ, ನನ್ನ ಇಲಾಖೆ, ಅಂಗನವಾಡಿ ಮಕ್ಕಳ ಬಗ್ಗೆ ಯೋಚಿಸುತ್ತಿದ್ದೇನೆ. ಸಿನಿಮಾ ಕ್ಷೇತ್ರದಲ್ಲಿ  ಏನಾಗ್ತಿದೆ ನಂಗೆ ಗೊತ್ತಿಲ್ಲ. ಮೀ ಟೂ ಬಗ್ಗೆಯೂ ನನಗೆ ಏನೂ ಗೊತ್ತಿಲ್ಲ. ಪ್ರತಿಕ್ರಿಯೆ ಬೇಕೇ ಬೇಕು ಎಂದರೆ  ಸದ್ಯ ಆರೋಪ ಮಾಡಿರುವ ಹಾಗೂ ಆರೋಪ ಹೊತ್ತಿರುವ ಇಬ್ಬರಲ್ಲೂ ಕೇಳಿ ತಿಳಿದುಕೊಂಡು ಹೇಳುವೆ ಎಂದರು. 

ಶಬರಿಮಲೆ ವಿಷಯವಾಗಿ ಮಾತನಾಡಿ, ಕೋರ್ಟ್‌ ತೀರ್ಪನ್ನು ಶಿರಸಾವಹಿಸಿ ಸ್ವಾಗತಿಸುವೆ. ಮಹಿಳೆಯರು ಶಬರಿಮಲೆಗೆ ಹೋಗುವುದು ತಮ್ಮ ಕಷ್ಟ ಸುಖಗಳನ್ನು ದೇವರಲ್ಲಿ ಹೇಳಿಕೊಳ್ಳಲು. ಬೇರ್ಯಾವುದೇ ಉದ್ದೇಶವಿರುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next