Advertisement

ಐಐಟಿ ಪ್ರವೇಶಿಸಿದ ಬುಡಕಟ್ಟು ಹುಡುಗರು

07:00 AM Jan 22, 2018 | Team Udayavani |

ರಾಯು³ರ: ಜೀವನ ಕಲ್ಲು ಮುಳ್ಳಿನ ಹಾಸಿಗೆಯಾಗಿದ್ದರೂ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಐಐಟಿ ಪ್ರವೇಶ ಮಾಡುವಲ್ಲಿ ಛತ್ತೀಸ್‌ಗಢದ ಬುಡಕಟ್ಟು ಗ್ರಾಮದ ಇಬ್ಬರು ಯುವಕರು ಯಶಸ್ವಿಯಾಗಿದ್ದಾರೆ. ಕುಡೆಕೆಲಾ ಮತ್ತು ಜಾಗ್‌ಗ್ರಾಮ್‌ನ ಬಡ ಕುಟುಂಬಗಳಿಂದ ಬಂದಿರುವ ದೀಪಕ್‌ ಕುಮಾರ್‌ ಮತ್ತು ನಿತೇಶ್‌ ಪೈಂಕ್ರಾ ಅವರು ಈಗ ಪ್ರತಿಷ್ಠಿತ ಐಐಟಿ ದೆಹಲಿಗೆ ಪ್ರವೇಶ ಪಡೆದಿದ್ದು, ತಮ್ಮ ಕನಸನ್ನು ನನಸಾಗಿಸುವತ್ತ ಹೆಜ್ಜೆಯಿಟ್ಟಿದ್ದಾರೆ.

Advertisement

 ಜಾಶ್‌ಪುರ್‌ ಜಿಲ್ಲಾಡಳಿತದ ನೆರವು ಕೂಡ ನಮ್ಮ ಈ ಸಾಧನೆಗೆ ಸಾಥ್‌ ನೀಡಿತು ಎಂದು ಈ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಬುಡಕಟ್ಟು ಸಮುದಾಯದಲ್ಲಿನ ಅನೇಕ ವಿದ್ಯಾರ್ಥಿಗಳು ಕಲಿಕೆಯಲ್ಲಿ ಮುಂದಿದ್ದು, ಬಡತನದ ಕಾರಣಕ್ಕೆ ಕನಸನ್ನು ಈಡೇರಿಸಿಕೊಳ್ಳಲಾಗುತ್ತಿಲ್ಲ. ಅದನ್ನು ಅರಿತು ನಾವು ಛತ್ತೀಸ್‌ಗಢದ ಡಿಸ್ಟ್ರಿಕ್ಟ್ ಮಿನರಲ್‌ ಫ‌ಂಡ್‌(ಡಿಎಂಎಫ್) ನೆರವು ಪಡೆದು ವಿದ್ಯಾಭ್ಯಾಸದಲ್ಲಿ ಮುಂದಿರುವ ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಶುಕ್ಲಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next