Advertisement
ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸರಕಾರ ಪ್ರತಿಯೊಂದು ಕ್ರಿಯಾ ಯೋಜನೆಗಳು ಸಮರ್ಪಕವಾಗಿ ಜನರಿಗೆ ದೊರೆಯಬೇಕು. ಸಬೂಬುಗಳನ್ನು ಹೇಳಿಕೊಂಡು ಕೆಲಸದ ಗತಿಯನ್ನು ಕುಂಠಿತಗೊಳಿಸದಿರಿ ಎಂದು ಅಧಿಕಾರಿ ಗಳಿಗೆ ಕಿವಿಮಾತು ಹೇಳಿದರು.
Related Articles
Advertisement
ತಾಲೂಕಿನಲ್ಲಿ ಒಟ್ಟು 18 ಗ್ರಾಮಗಳಲ್ಲಿ ನಂದನವನ ಮತ್ತು ಬಡಾಕೆರೆಯಲ್ಲಿ ಸ್ಮಶಾನಗಳಿಗೆ ಜಾಗ ನಿಗದಿಯಾಗಿಲ್ಲ. ಉಳಿದ ಕಡೆ ಸ್ಥಳ ಮೀಸಲಿರಿಸಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಒಟ್ಟು 25,000 ರೈತರಿದ್ದಾರೆ. ಅದರಲ್ಲಿ 5,000 ಡಾಟಾ ಎಂಟ್ರಿ ಮುಗಿದಿದೆ ಎಂದರು.
ಸರ್ವರ್ ಸಮಸ್ಯೆಯಿಂದ ವಿಳಂಬವಾಗಿದೆ ಎಂದಾಗ ಸಂಸದರು ಜಿಲ್ಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ನಿಗದಿತ ದಿನದೊಳಗೆ ರೈತರಿಗೆ ಸಿಗುವಂತೆ ಕ್ರಮ ಕೈಗೊಳ್ಳಲು ತಿಳಿಸಿದರು.
ಕೊಲ್ಲೂರು ಪ್ರವಾಸಿ ಮಂದಿರವನ್ನು ಆಧುನಿಕ ಅನುಕೂಲಕ್ಕೆ ತಕ್ಕಂತೆ ವಿನ್ಯಾಸ ಮಾಡಲು ಅಧಿಕಾರಿಗಳಿಗೆ ತಿಳಿಸಿದರು.
ಹೆದ್ದಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸಂಸದರು:
ಬೈಂದೂರು ಕ್ಷೇತ್ರದಲ್ಲಿ ಬಹುತೇಕ ಬಹುತೇಕ ಕಡೆಗಳಲ್ಲಿ ಹೆದ್ದಾರಿ ಸಮಸ್ಯೆ ಸಾರ್ವಜನಿಕರಿಗೆ ಕಿರಿಕಿರಿಯಾಗಿ ಪರಿಣಮಿಸಿದೆ. ಹೆದ್ದಾರಿ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸದಿರುವುದನ್ನು ನಾನು ಸಹಿಸುವುದಿಲ್ಲ. ಕಳೆದ ಬಾರಿ ಸಂಸದರ ಸಭೆಯಲ್ಲಿ ನಡೆದ ಯಾವುದೇ ಬದಲಾವಣೆಗೆ ಈ ವರೆಗೆ ಚಾಲನೆ ನೀಡಿಲ್ಲ.ಶಿರೂರಿನಲ್ಲಿ ಟೋಲ್ಗೇಟ್ ಆರಂಭ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಸರ್ವಿಸ್ ರೋಡ್‌ಗಳನ್ನು ನಿರ್ಮಿಸಿಲ್ಲ. ಹೀಗಾಗಿ ಸರ್ವಿಸ್ ರೋಡ್‌ಗಳನ್ನು ಪೂರ್ಣಗೊಳಿಸದೆ ಟೋಲ್ ಪ್ರಕ್ರಿಯೇ ಆರಂಭಿಸಿದರೆ ಜನರ ಬೆಂಬಲಕ್ಕೆ ನಿಂತು ಹೋರಾಡಬೇಕಾಗುತ್ತದೆ. ಟೋಲ್ ಸುತ್ತ ಸ್ಥಳೀಯರಿಗೆ ರಿಯಾಯಿತಿ ಕೊಡುವ ಕುರಿತು ಬೇಡಿಕೆ ಬಂದಿದ್ದು ಮುಂಚಿತವಾಗಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ,ರಾಜ್ಯದ ವಿಪಕ್ಷ ನಾಯಕರ ಆಪ್ತ ಕಾರ್ಯದರ್ಶಿ ರಾಜಪ್ಪ, ಕುಂದಾಪುರ ಡಿ.ವೈ.ಎಸ್.ಪಿ. ಬಿ.ಪಿ. ದಿನೇಶ್ ಕುಮಾರ್, ಬಿಜೆಪಿ ಮಂಡಲದ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಬಿಜೆಪಿ ಮುಖಂಡ ದೀಪಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.