Advertisement

ಕ್ವಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಟಿ20: ಬಿಸಿಸಿಐ ಸ್ವಾಗತ

11:29 PM Jun 16, 2021 | Team Udayavani |

ಹೊಸದಿಲ್ಲಿ : ಕ್ವಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಮಹಿಳಾ ಟಿ20 ಕ್ರಿಕೆಟ್‌ ಪಂದ್ಯಾವಳಿ ಆಯೋಜನೆ ಮಾಡಿರುವುದನ್ನು ಬಿಸಿಸಿಐ ಸ್ವಾಗತಿಸಿದೆ. ಕ್ರೀಡಾಕೂಟ ಮುಂದಿನ ವರ್ಷ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿದ್ದು, ಜುಲೈ 29ರಿಂದ ಆಗಸ್ಟ್‌ 7ರ ವರೆಗೆ ಎಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಸ್ಪರ್ಧೆ ನಡೆಯಲಿದೆ.

Advertisement

8 ತಂಡಗಳ ಗ್ರೂಪ್‌ ಪಂದ್ಯಗಳು ಆಗಸ್ಟ್‌ 4ರ ವರೆಗೆ ನಡೆಯಲಿವೆ. ಸೆಮಿಫೈನಲ್‌ ಮುಖಾಮುಖೀ ಆ. 6ರಂದು, ಫೈನಲ್‌ ಮತ್ತು ಕಂಚಿನ ಪದಕದ ಪಂದ್ಯಗಳು ಆ. 7ರಂದು ನಡೆಯಲಿವೆ.

ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿರುವ ತಂಡಗಳೆಂದರೆ ಭಾರತ, ನ್ಯೂಜಿಲ್ಯಾಂಡ್‌, ಆಸ್ಟ್ರೇಲಿಯ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ಪಾಕಿಸ್ಥಾನ, ಶ್ರೀಲಂಕಾ ಮತ್ತು ವೆಸ್ಟ್‌ ಇಂಡೀಸ್‌.

ಇದನ್ನೂ ಓದಿ :ಸಹಕಾರ ಬ್ಯಾಂಕಿಗೆ 512.54 ಕೋಟಿ ರೂ. ವಂಚನೆ : ಮಹಾರಾಷ್ಟ್ರದ ಮಾಜಿ ಶಾಸಕ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next