Advertisement

ಬರಲಿದೆ ಸ್ಮಾರ್ಟ್‌ ಸ್ಪೀಡ್‌ ವಾರ್ನಿಂಗ್‌ ಸಿಸ್ಟಂ

11:00 AM Oct 18, 2021 | Team Udayavani |

ಹೊಸದಿಲ್ಲಿ: ಹೆದ್ದಾರಿ ಮತ್ತು ರಸ್ತೆಗಳಲ್ಲಿ ಸಾಗುವ ವಾಹನಗಳ ಚಾಲಕರಿಗೆ ಆ ರಸ್ತೆಯ ಸ್ಥಿತಿಗತಿಗಳು ಹಾಗೂ ರಸ್ತೆಗಳಿರುವ ಭೌಗೋಳಿಕ ಸನ್ನಿವೇಶಗಳಿಗೆ ಅನುಸಾರವಾಗಿ ಯಾವ ವೇಗದಲ್ಲಿ ಸಾಗಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿ ಅವರನ್ನು ಎಚ್ಚರಿಸುವ “ಸ್ಮಾರ್ಟ್‌ ಸ್ಪೀಡ್‌ ವಾರ್ನಿಂಗ್‌ ಸಿಸ್ಟಂ’ ಎಂಬ ಹೊಸ ಬಗೆಯ ತಂತ್ರಜ್ಞಾನವನ್ನು ವಿವಿಧ ಐಐಟಿಗಳ ಸಂಶೋಧಕರು ಸಿದ್ಧಪಡಿಸುತ್ತಿದ್ದಾರೆ.

Advertisement

ಏನಿದು ತಂತ್ರಜ್ಞಾನ?: ಇದೊಂದು ಡಿಸ್‌ಪ್ಲೇ ಪರಿಕರ ವಾಗಿದ್ದು ಇದನ್ನು ವಾಹನಗಳಲ್ಲಿ ಅಳವಡಿಸಲಾಗುತ್ತದೆ. ಇದು ವಾಹನ ಸಾಗುತ್ತಿರುವ ರಸ್ತೆಯ ಗುಣಮಟ್ಟ ಹಾಗೂ ಆ ಭೌಗೋಳಿಕ ಪ್ರದೇಶದಲ್ಲಿನ ಜನರು, ವಾಹನ ಸಂಚಾರ ಹಾಗೂ ಇನ್ನಿತರ ಮಾಹಿತಿಗಳನ್ನು ಆಧಾರಿಸಿ, ಆ ನಿರ್ದಿಷ್ಟ ರಸ್ತೆಯಲ್ಲಿ ಯಾವ ವೇಗದಲ್ಲಿ ವಾಹನವನ್ನು ಚಲಾಯಿಸಬೇಕು ಎಂದು ಡಿಸ್‌ಪ್ಲೇ ಪರದೆಯಲ್ಲಿ ಸೂಚಿಸುತ್ತದೆ. ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ವಾಹನ ಸಾಗುತ್ತಿದ್ದರೆ ಚಾಲಕರಿಗೆ ಆ ಬಗ್ಗೆ ಅಲರ್ಟ್‌ ನೀಡುತ್ತದೆ.

ಇದನ್ನೂ ಓದಿ:ಐಪಿಎಲ್‌ ಇಲೆವೆನ್‌: ಕೆ.ಎಲ್‌. ರಾಹುಲ್‌ ಕೀಪರ್‌

ಎಲ್ಲ ವಾಹನಗಳಿಗೂ ಸೂಕ್ತವಾಗಿ ಅಳವಡಿಸಬಹುದಾದ ಆಕಾರದಲ್ಲಿ ಈ ಡಿಸ್‌ಪ್ಲೇ ಪರದೆಯನ್ನು ರೂಪಿಸಲಾಗುತ್ತದೆ.ಕೇಂದ್ರದ ಉದ್ದೇಶಕ್ಕೆ ಐಐಟಿಗಳ ಸಾಥ್‌: ದೇಶದಲ್ಲಿ ವಾರ್ಷಿಕವಾಗಿ ಸಂಭವಿಸುವ ಒಟ್ಟು ಅಪಘಾತಗಳಲ್ಲಿ ಶೇ. 70ರಷ್ಟು ಅಪಘಾತಗಳು ಅತೀ ವೇಗದ ಚಾಲನೆ ಯಿಂದಲೇ ಸಂಭವಿಸುತ್ತಿರುವುದನ್ನು ಮನಗಂಡಿರುವ ಕೇಂದ್ರ ರಸ್ತೆ, ಸಾರಿಗೆ, ಹೆದ್ದಾರಿ ಸಚಿವಾಲಯ, ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸಲಾಗುವ ಡಿಸ್‌ಪ್ಲೇ ಪಲಕಗಳಲ್ಲಿ ಮೂಡುವ ಸಂದೇಶದ ಮೂಲಕ ಎಚ್ಚರಿ ಸುವ ವ್ಯವಸ್ಥೆ ಯನ್ನು ದೇಶದ ಎಲ್ಲೆಡೆ ಅಳವಡಿಸಲು ನಿರ್ಧರಿಸಿತ್ತು. “ಸ್ಮಾರ್ಟ್‌ ಸ್ಪೀಡ್‌ ವಾರ್ನಿಂಗ್‌ ಸಿಸ್ಟಂ’ ತಂತ್ರಜ್ಞಾನವನ್ನು ಸಿದ್ಧಪಡಿಸಲು ಐಐಟಿ ಗುವಾಹಾಟಿ ಹಾಗೂ ಐಐಟಿ ಬಾಂಬೆಯ ತಜ್ಞರು ಶ್ರಮಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next