Advertisement

ಮೆಟ್ರೋಗೆ ಬಂತು ಕಾಮನ್‌ ಮೊಬಿಲಿಟಿ ಗೇಟ್‌

12:31 AM Jan 29, 2020 | Lakshmi GovindaRaj |

ಬೆಂಗಳೂರು: ಬಹುನಿರೀಕ್ಷಿತ ಕಾಮನ್‌ ಮೊಬಿಲಿಟಿ ಕಾರ್ಡ್‌ ಪರಿಚಯಿಸುವ ಕಾರ್ಯಕ್ಕೆ “ನಮ್ಮ ಮೆಟ್ರೋ’ದಲ್ಲಿ ಸಿದ್ಧತೆ ನಡೆದಿದ್ದು, ಈಗಾಗಲೇ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಈ ಸಂಬಂಧ ಅಗತ್ಯವಿರುವ ಏಕೀಕೃತ ದರ ಸಂಗ್ರಹ ದ್ವಾರಗಳನ್ನು ಅಳವಡಿಸಲಾಗಿದೆ.

Advertisement

ಈಗಾಗಲೇ ಇರುವ ಆಟೋಮೆಟಿಕ್‌ ಫೇರ್‌ ಕಲೆಕ್ಷನ್‌ ಗೇಟ್‌ (ಎಎಫ್ಸಿ) ಪಕ್ಕದಲ್ಲೇ “ಸ್ವಾಗತ್‌’ ಎಂಬ ಒಂದು ಜೋಡಿ ಏಕೀಕೃತ ದರ ಸಂಗ್ರಹ ದ್ವಾರಗಳನ್ನು ಬೈಯಪ್ಪನಹಳ್ಳಿಯಲ್ಲಿ ಅಳವಡಿಸ ಲಾಗಿದೆ. ಆದರೆ, ತಾಂತ್ರಿಕವಾಗಿ ಜೋಡಣೆ ಮಾಡಿ ಕಾರ್ಯಾಚರಣೆಗೊಳ್ಳಲು ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ. ಬರುವ ಹಣಕಾಸು ವರ್ಷದಿಂದ ಇದರ ಪ್ರಾಯೋಗಿಕ ಸೇವೆ ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು ಬೆಂಗಳೂರು ರೈಲು ನಿಗಮ (ಬಿಎಂಆರ್‌ಸಿಎಲ್‌) ಮೂಲಗಳು ತಿಳಿಸಿವೆ.

ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿ., (ಬಿಇಎಲ್‌) ಹಾಗೂ ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಆಫ್ ಅಡ್ವಾನ್ಸ್‌$x ಕಂಪ್ಯೂಟಿಂಗ್‌ (ಸಿಡಿಎಸಿ) ಸಹಯೋಗದಲ್ಲಿ ಈ ಗೇಟ್‌ಗಳು ಪೂರೈಕೆಯಾಗಿವೆ. ಈ ದ್ವಾರಗಳ ಸೇವೆ ಆರಂಭಗೊಂಡ ನಂತರ ಪ್ರಯಾಣಿಕರು ದೇಶದ ಯಾವುದೇ ಮೆಟ್ರೋದಲ್ಲಿ ಬಳಸುವ ಕಾರ್ಡ್‌ ಗಳನ್ನು “ನಮ್ಮ ಮೆಟ್ರೋ’ದಲ್ಲಿ ತೋರಿಸಿ ಸಂಚರಿಸಬಹುದು. ಬಿಎಂಟಿಸಿಯೂ ಈ ಸೇವೆಯನ್ನು ಅಳವಡಿಸಿಕೊಂಡರೆ, ಅದಕ್ಕೂ ಈ ಕಾರ್ಡ್‌ ಬಳಸಬಹುದಾಗಿದೆ. ಆದರೆ, ಇದಕ್ಕೆ ಬಿಎಂಟಿಸಿಯು ಇಟಿಎಂ ಅಪ್‌ಗ್ರೇಡ್‌ ಮಾಡಿಕೊಳ್ಳಬೇಕಾಗುತ್ತದೆ.

ಪ್ರಸ್ತುತ ದೆಹಲಿ ಮೆಟ್ರೋದಲ್ಲಿ ಈ ಕಾಮನ್‌ ಮೊಬಿಲಿಟಿ ಕಾರ್ಡ್‌ ಪ್ರಾಯೋಗಿಕವಾಗಿ ಪರಿಚಯಿಸಲಾಗಿದೆ. ಈ ಗೇಟ್‌ಗಳ ಸಾಫ್ಟ್ವೇರ್‌, ವಿನ್ಯಾಸ ಎಲ್ಲವೂ ದೇಶೀಯವಾಗಿದೆ. ಆದರೆ, ಅದಕ್ಕೆ ಬಳಸುವ ಚಿಪ್‌ ಮಾತ್ರ ಹೊರದೇಶದ್ದಾಗಿದೆ.

ಮೊಬಿಲಿಟಿ ಕಾರ್ಡ್‌ ಕಾರ್ಯ ಹೇಗೆ?: ಮೆಟ್ರೋದಲ್ಲಿ ಈಗಿರುವ ಕಾಂಟ್ಯಾಕ್ಟ್ಲೆಸ್‌ ಸ್ಮಾರ್ಟ್‌ ಕಾರ್ಡ್‌ ಕ್ಲೋಸ್‌ ಲೂಪ್‌ ವ್ಯವಸ್ಥೆ ಹೊಂದಿದೆ. ಅಂದರೆ, ಆ ಕಾರ್ಡ್‌ ಅನ್ನು ಆಟೋಮೆಟಿಕ್‌ ಫೇರ್‌ ಗೇಟ್‌ನಲ್ಲಿ ಸ್ವೆ„ಪ್‌ ಮಾಡಿದಾಗ, ಕಡಿತಗೊಳ್ಳುವ ಹಣ ನೇರವಾಗಿ ಬಿಎಂಆರ್‌ಸಿಎಲ್‌ ಖಾತೆಗೆ ಜಮೆ ಆಗುತ್ತದೆ. ಹಾಗಾಗಿ, ಅದನ್ನು ಬೇರೆ ಸಾರಿಗೆ ವ್ಯವಸ್ಥೆಯಲ್ಲಿ ಬಳಕೆ ಮಾಡಲು ಬರುವುದಿಲ್ಲ.

Advertisement

ಆದರೆ, ನ್ಯಾಷನಲ್‌ ಕಾಮನ್‌ ಮೊಬಿಲಿಟಿ ಕಾರ್ಡ್‌ ಓಪನ್‌ ಲೂಪ್‌ ವ್ಯವಸ್ಥೆ ಹೊಂದಿದೆ. ಅದನ್ನು ಯಾವುದೇ ಸಾರಿಗೆ ವ್ಯವಸ್ಥೆಯಲ್ಲಿ ಬಳಕೆ ಮಾಡಿದರೂ, ಒಂದೇ ಖಾತೆಗೆ ಹಣ ಜಮೆ ಆಗುತ್ತದೆ. ಅಲ್ಲಿಂದ ಆಯಾ ಸಂಸ್ಥೆಗೆ ಹೋಗುತ್ತದೆ. ಈ ಸಂಬಂಧ ಬ್ಯಾಂಕ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಮೂಲಗಳ ಪ್ರಕಾರ ಸದ್ಯ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಕಾಮನ್‌ ಮೊಬಿಲಿಟಿ ಕಾರ್ಡ್‌ ಅನ್ನು ಪ್ರಾಯೋಗಿಕವಾಗಿ ಪರಿಚಯಿಸುವ ಕೆಲಸ ನಡೆದಿದೆ. ಮಾರ್ಚ್‌ ಅಂತ್ಯಕ್ಕೆ ಎಲ್ಲ ಸಿದ್ಧತೆಗಳು ಪೂರ್ಣಗೊಳ್ಳಲಿದ್ದು, ಏಪ್ರಿಲ್‌ನಿಂದ ಪ್ರಯಾಣಿಕರ ಸೇವೆಗೆ ಇದು ಲಭ್ಯವಾಗಲಿದೆ.
-ಅಜಯ್‌ ಸೇಠ್, ವ್ಯವಸ್ಥಾಪಕ ನಿರ್ದೇಶಕರು, ಬಿಎಂಆರ್‌ಸಿಎಲ್‌

Advertisement

Udayavani is now on Telegram. Click here to join our channel and stay updated with the latest news.

Next