Advertisement

ಬರಲಿದೆ ಸಿದ್ದು ಕಾಮ್‌ಕೀ ಬಾತ್‌

06:00 AM Oct 03, 2017 | Team Udayavani |

ಬೆಂಗಳೂರು: ರಾಜ್ಯ ಸರ್ಕಾರದ ಕಾರ್ಯಾನುಷ್ಠಾನದ ಬಗ್ಗೆ ಜನ ಸಾಮಾನ್ಯರಿಗೆ ತಿಳಿಸಲು “ಕಾಮ್‌ ಕೀ ಬಾತ್‌’ ಯೋಜನೆ ರೂಪಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಗಾಂಧಿ ಜಯಂತಿ ಹಾಗೂ ಲಾಲ್‌ ಬಹದ್ದೂರ್‌ ಶಾಸ್ತ್ರೀ ಅವರ ಜನ್ಮದಿನದ ಅಂಗವಾಗಿ ಸೋಮವಾರ ವಿಧಾನಸೌಧದ ಆವರಣದಲ್ಲಿರುವ ಗಾಂಧೀಜಿ ಹಾಗೂ ಲಾಲ್‌ ಬಹದ್ದೂರ್‌ ಶಾಸ್ತ್ರೀಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯ ಸರ್ಕಾರದ ಸಾಧನೆಯನ್ನು ಮಾತುಗಳ ಮೂಲಕ ಜನತೆಗೆ ತಿಳಿಸಲು ಪ್ರಧಾನಿ ನರೇಂದ್ರ ಮೋದಿಯವರ ಮನ್‌ ಕೀ ಬಾತ್‌ಗೆ ಪರ್ಯಾಯವಾಗಿ ಪ್ರಾಸಬದ್ಧ ವಾಕ್ಯ ಹುಡುಕಿ ಕಾಮ್‌ ಕೀ ಬಾತ್‌ ಎಂದು ಹೆಸರಿಟ್ಟಿದ್ದೇವೆ. ಇದು ಕೇವಲ ಮನದ ಮಾತಲ್ಲ. ಸಾಧನೆ ಹಾಗೂ ಕಾರ್ಯದ ಅನುಷ್ಠಾನದ ಮಾತು ಎಂದು ವಿವರಿಸಿದರು.

ಈ ಮೂಲಕ ಕನ್ನಡಕ್ಕೆ ಪ್ರಾಧಾನ್ಯತೆ ಕಡಿಮೆ ಮಾಡಲಾಗುತ್ತಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಕಾರ್‌, ಬಸ್‌ ಮೊದಲಾದ ಇಂಗ್ಲಿಷ್‌ ಪದಗಳಿಗೆ ಕನ್ನಡದಲ್ಲಿ ಪರ್ಯಾಯ ಪದವಿಲ್ಲ. ಕುವೆಂಪು ಹೇಳಿರುವಂತೆ ಇಂಗ್ಲಿಷ್‌ ಪದದ ಕೊನೆಯಲ್ಲಿ “ಉ’ಕಾರ ಸೇರಿಸಿದರೆ ಅದು ಕನ್ನಡ ಪದವಾಗುತ್ತದೆ. ಹೀಗೆ ಜನ ಸಾಮಾನ್ಯರನ್ನು ಸುಲಭದಲ್ಲಿ ತಲುಪುವ ಉದ್ದೇಶದಿಂದ ಮನ್‌ಕೀ ಬಾತ್‌ಗೆ ಪರ್ಯಾಯವಾಗಿ ಕಾಮ್‌ ಕೀ ಬಾತ್‌ ಆರಂಭಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next