ಬೆಂಗಳೂರು: ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಟ್ವಿಟರ್‌ನಲ್ಲಿ ವಾಗ್ಧಾಳಿ ನಡೆಸಿದೆ. ಅಮಿತ್ ಶಾ ಅವರೇ, ತಾವು ತಿಂಗಳಿಗೊಮ್ಮೆ ಕರ್ನಾಟಕಕ್ಕೆ ಬರುವುದು ಪೇಮೆಂಟ್ ವಸೂಲಿಗಾಗಿಯೇ ಎಂದು ಪ್ರಶ್ನಿಸಿದೆ.
ಸರಣಿ ಟ್ವಿಟ್ ಮಾಡಿರುವ ಕಾಂಗ್ರೆಸ್, ಅಮಿತ್ ಶಾ ಅವರೇ , ಕರ್ನಾಟಕವನ್ನು ಯಾರು ಎಟಿಎಂ ಮಾಡಿಕೊಂಡಿದ್ದು ಎಂಬುದನ್ನು ನಿಮ್ಮದೇ ಪಕ್ಷದ ಯತ್ನಾಳ್ ಹೇಳಿದ್ದಾರೆ ಕೇಳಿ.
ಮುಖ್ಯಮಂತ್ರಿ ಹುದ್ದೆಯನ್ನು 2,500 ಕೋಟಿ ರೂ.ಗೆ ಮಾರಿಕೊಂಡಿದ್ದು ಯಾರು, ನಿರಾಣಿಗೆ ಪೇಮೆಂಟ್ ಕೋಟಾದಲ್ಲಿ ಮಂತ್ರಿಗಿರಿ ಕೊಟ್ಟವರು ಯಾರು ಎಂದು ಪ್ರಶ್ನಿಸಿದೆ.
ವೃದ್ಧಾಶ್ರಮಗಳಿಗಾಗಿ 400 ಕೋಟಿ ರೂ. ನಿಧಿ ಸ್ಥಾಪಿಸುತ್ತೇವೆಂದು ಕರ್ನಾಟಕ ಫಾರ್ ಬಿಜೆಪಿ ಭರವಸೆ ನೀಡಿತ್ತು. ಆದರೆ ಅಧಿಕಾರಕ್ಕೆ ಏರಿದ್ದೇ ತಡ, ಬಿಜೆಪಿಯ ಗಮನವೆಲ್ಲಾ ಲೂಟಿ ಬಗ್ಗೆ ಇದೆಯೇ ಹೊರತು, ತಾವು ನೀಡಿದ ಭರವಸೆಗಳ ಬಗ್ಗೆ ಅಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಎಲ್ಲಿ ನಿಮ್ಮ 400 ಕೋಟಿ ರೂ., ಎಲ್ಲಿ ವೃದ್ಧಾಶ್ರಮ? ಈ ಬಗ್ಗೆ ನಿಮ್ಮ ಹತ್ತಿರ ಉತ್ತರ ಇದೆಯ ಎಂದು ಕೆಣಕಿದೆ.