Advertisement

ಸಮಗ್ರ ವೈದ್ಯಕೀಯ ಪದ್ಧತಿ ಆಚರಣೆಗೆ ಬರುತ್ತಿಲ್ಲ

01:14 PM Apr 17, 2017 | |

ದಾವಣಗೆರೆ: ಪರಿಣಾಮಕಾರಿ ಚಿಕಿತ್ಸೆಗೆ ಎಲ್ಲಾ ವೈದ್ಯ ಪದ್ಧತಿಗಳನ್ನು ಒಟ್ಟಿಗೆ ಅನುಸರಿಸಲು ಕಾನೂನಿನಲ್ಲಿ ಅವಕಾಶ ಇದ್ದರೂ ಭಾರತದಲ್ಲಿ ಸಾಧ್ಯವಾಗುತ್ತಿಲ್ಲ ಎಂದು ಬೆಂಗಳೂರು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಕುಲಸಚಿವ ಪ್ರೊ| ಒ.ವಿ. ನಂದಿಮಠ ಹೇಳಿದ್ದಾರೆ.

Advertisement

ಬಾಪೂಜಿ ಎಂಬಿಎ ಸಭಾಂಗಣದಲ್ಲಿ ನ್ಯಾಷನಲ್‌ ಇಂಟಿಗ್ರೇಟೆಡ್‌ ಮೆಡಿಕಲ್‌ ಅಸೋಸಿಯೇಷನ್‌ನ 69ನೇ ದಿನಾಚರಣೆ, ಪದಗ್ರಹಣ, ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಸಮಗ್ರ ವೈದ್ಯಕೀಯ ಪದ್ಧತಿ ಅಳವಡಿಸಿಕೊಂಡಲ್ಲಿ ಇನ್ನೂ ಪರಿಣಾಮಕಾರಿ ಚಿಕಿತ್ಸೆ ಸಾಧ್ಯ ಇದೆ.

ಆದರೆ, ನಮ್ಮ ದೇಶದಲ್ಲಿ ಸಮಗ್ರ ವೈದ್ಯ ಪದ್ಧತಿ ಇನ್ನೂ  ಆಚರಣೆಗೆ ಬರುತ್ತಿಲ್ಲ ಎಂದರು. ಅಮೇರಿಕಾದಲ್ಲಿನ ವೈದ್ಯರು ಇಂದು ಆಯುರ್ವೇದ, ಯುನಾನಿ, ಹೋಮಿಯೋಪತಿ, ಅಲೋಪತಿ, ಟಿಬೆಟ್‌, ಚೀನಾ ಹೀಗೆ ಎಲ್ಲಾ ರೀತಿಯ ವೈದ್ಯ ಪದ್ಧತಿಗಳನ್ನು ಬಳಸಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ.

ಅವರಿಗೆ ರೋಗಿ ಗುಣಮುಖ ಆಗುವುದು ಮುಖ್ಯವಾಗಿದೆ. ಕಾನೂನು ತೊಡಕು ಕುರಿತು ಅವರು ಆಲೋಚಿಸುವುದಿಲ್ಲ. ಆದರೆ, ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ನಮ್ಮ ರಾಜ್ಯದಲ್ಲಿ ಇಂತಹ ಸಮಗ್ರ ವೈದ್ಯ ಪದ್ಧತಿ ಅನುಸರಣೆಗೆ ಅವಕಾಶ ಸಿಗುತ್ತಿಲ್ಲ. ಇದಕ್ಕೆ ಕಾರಣ ಸರ್ಕಾರದ ನಿರಾಸಕ್ತಿ ಎಂದು ಅಭಿಪ್ರಾಯಪಟ್ಟರು.

ವೈದ್ಯಕೀಯ ಕಾನೂನಿನಲ್ಲಿ ಸಮಗ್ರ ವೈದ್ಯಕೀಯ ಪದ್ಧತಿ ಅಳವಡಿಸಿಕೊಳ್ಳಲು ಅವಕಾಶ ಇದೆ. ಆಯುರ್ವೇದ ಸೇರಿದಂತೆ ಇತರೆ ಸ್ಥಳೀಯ, ಅನುಮೋದಿತ ವೈದ್ಯಕೀಯ ಪದ್ಧತಿ ಅಡಿ ಚಿಕಿತ್ಸೆ ನೀಡುವವರು ಕೆಲ ಸಂದರ್ಭಗಳಲ್ಲಿ ಅಲೋಪತಿ ಪದ್ಧತಿ ಅಳವಡಿಸಿಕೊಳ್ಳಬೇಕು. ಅಲೋಪತಿ ಪದ್ಧತಿಯವರು ಇತರೆ ಪದ್ಧತಿಯನ್ನೂ ಬಳಸಿಕೊಳ್ಳಬಹುದು.

Advertisement

ಮಹಾತ್ಮ ಗಾಂಧೀಜಿಯವರು ಸಹ ಎಲ್ಲಾ ರೀತಿಯ ವೈದ್ಯಕೀಯ ಪದ್ಧತಿಯನ್ನು ಒಂದೇ ಸೂರಿನಡಿ ತರಬೇಕು ಎಂದಿದ್ದರು. ಆದರೆ, ಇದುವರೆಗೆ ನಮ್ಮ ದೇಶದ ಕೆಲ ರಾಜ್ಯಗಳಲ್ಲಿ ಮಾತ್ರ ಈ ಪದ್ಧತಿ ಜಾರಿಗೆ ಬಂದಿದೆ. ಎಲ್ಲಾ ಕಡೆ ಸಮಗ್ರ ಪದ್ಧತಿ ಅಳವಡಿಕೆ ಆಗಿಲ್ಲ ಎಂದು ತಿಳಿಸಿದರು. 

ಅಲೋಪತಿಗೆ ಭಾರತೀಯ ವೈದ್ಯಕೀಯ ಮಂಡಳಿ ಇರುವಂತೆ, ಆಯುರ್ವೇದ, ಹೋಮಿಯೊಪತಿ, ಯುನಾನಿ ಪದ್ಧತಿಗಳಿಗೂ ಸ್ವಾಯತ್ತ ಸಂಸ್ಥೆಗಳಿವೆ. ವೈದ್ಯಕೀಯ ಶಿಕ್ಷಣ ಹೇಗಿರಬೇಕು? ಹೇಗೆ ಓದಬೇಕು? ಎಂಬುದನ್ನು ಈ ಸಂಸ್ಥೆಗಳೇ ನಿರ್ಧರಿಸಲು ಅಧಿಧಿಕಾರವಿದೆ. ಆದರೆ, ಎಲ್ಲೂ ಒಟ್ಟಾಗಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿಲ್ಲ.

ಈ ಎಲ್ಲ ಸಂಸ್ಥೆಗಳನ್ನು ಒಳಗೊಂಡ ಸಂಘಟನೆಗಳಿದ್ದು, ಅವುಗಳ ಅಭಿಪ್ರಾಯ ಸಂಗ್ರಹಿಸಿ ಸಮಗ್ರ ಪಠ್ಯಪುಸ್ತಕ ರಚನೆಗೆ ಯತ್ನಿಸಬೇಕಿದೆ ಎಂದು ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿ, ಸಾನ್ನಿಧ್ಯ ವಹಿಸಿ ಮಾತನಾಡಿದ ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ವೈದ್ಯರನ್ನು ದೇವರೆಂದೇ ಕರೆಯಲಾಗುತ್ತದೆ.

ರೋಗಿಯು ವೈದ್ಯರಿಗೆ ಸದಾ ಕೃತಜ್ಞನಾಗಿ ಇರುತ್ತಾನೆ. ವೈದ್ಯರೂ ಸಹ ತಮ್ಮ ಕರ್ತವ್ಯ ನಿಭಾಹಿಸಿ, ರೋಗಿಯನ್ನು ಗುಣಪಡಿಸುತ್ತಾನೆ. ವೈದ್ಯ ವೃತ್ತಿಯವರಿಗೆ ವೈಯುಕ್ತಿಕ ಜೀವನ ಇರುವುದೇ ಇಲ್ಲ. ಪ್ರತಿ ನಿತ್ಯ ರೋಗಿಯ ಯೋಗಕ್ಷೇಮಕ್ಕಾಗಿ ತನ್ನ ಸ್ವಂತ ಜೀವನ ಮರೆಯುತ್ತಾನೆ ಎಂದರು. ನಿಮಾ ರಾಜ್ಯಾಧ್ಯಕ್ಷ ಡಾ| ಆರ್‌.ಜಿ. ಬೂಸನೂರು ಮಠ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಯು. ಸಿದ್ದೇಶ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಧಿ ಕಾರಿ ಡಾ| ತ್ರಿಪುಲಾಂಬಾ, ಅಶ್ವಿ‌ನಿ ಆಯುರ್ವೇದ ಮೆಡಿಕಲ್‌ ಕಾಲೇಜು ಅಧ್ಯಕ್ಷ ಡಾ| ಎಂ.ಎನ್‌. ಹಿರೇಮಠ, ತಪೋವನ ಆಯುರ್ವೇದ ಮೆಡಿಕಲ್‌ ಕಾಲೇಜು ಅಧ್ಯಕ್ಷ ಶಶಿಕುಮಾರ್‌, ಡಾ| ಎಂ.ಎನ್‌.ಜ್ಞಾನೇಶ್ವರ್‌, ಡಾ| ಬಿ.ಎಂ. ಯೋಗೇಂದ್ರಕುಮಾರ್‌ ಇತರರು ಇದ್ದರು.    

Advertisement

Udayavani is now on Telegram. Click here to join our channel and stay updated with the latest news.

Next