Advertisement
ಪ್ರಕೃತಿ ವಿಕೋಪದಿಂದ ತತ್ತರಿಸಿದ ಜೋಡುಪಾಲ, ಅರೆಕಲ್ಲು, ಮೊಣ್ಣಂಗೇರಿ ಗ್ರಾಮಗಳಿಗೆ ಭೇಟಿ ನೀಡಿದ ವಸತಿ ಸಚಿವ ಯು.ಟಿ.ಖಾದರ್, ಸ್ಥಳೀಯ ನಿವಾಸಿಗಳು ಮತ್ತು ಪ್ರಕೃತಿ ವಿಕೋಪದಿಂದ ಸಂತ್ರಸ್ತರ ಅಹವಾಲು ಆಲಿಸಿದರು. ಸರಕಾರದ ಪರಿಹಾರ ಕಾರ್ಯವನ್ನು ಶೀಘ್ರವೇ ಅನುಷ್ಠಾನಕ್ಕೆ ತರುವಂತೆ ಆಗ್ರಹಿಸಿದ ಸಂತ್ರಸ್ಥರು, ಭೂಕುಸಿತ ಪ್ರವಾಹದಿಂದ ಗ್ರಾಮಗಳಲ್ಲಿ ಉಂಟಾದ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು. ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿ ಕೊಡಬೇಕು, ವಾಸದ ಮನೆಗಳಿಗೆ ಹಾನಿ ಸಂಭವಿಸಿದ್ದು ಮನೆಗಳ ದುರಸ್ಥಿಗೂ ಆರ್ಥಿಕ ಸಹಾಯ ಒದಗಿಸಬೇಕು. ನಿರಾ]ತರ ಕೇಂದ್ರದಲ್ಲಿ ಉಳಿದುಕೊಂಡು ಗುರುತಿನ ಚೀಟಿ ಹೊಂದಿರುವ ಕುಟುಂಬಗಳಿಗೂ ಬದುಕು ಕಟ್ಟಿಕೊಳ್ಳಲು ತಲಾ50 ಸಾವಿರ ರೂ. ಅನುದಾನ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದರು.
Related Articles
Advertisement
ಜಿಲ್ಲಾಡಳಿತ ಮನೆ ಕಳೆದುಕೊಂಡ ಅರ್ಹನ್ನು ಗುರುತಿಸಿದೆ. ಅಂತಹ ಕುಟುಂಬಗಳಿಗೆ ಮಾತ್ರ ಮನೆ ನೀಡಲಾಗುತ್ತದೆ. ಆಶ್ರಯ ಮನೆ ಯೋಜನೆಯನ್ನು ದುರುಪಯೋಗ ಮಾಡಲು ಹವಣಿಸಿದರೆ, ಅಂತಹ ವ್ಯಕ್ತಿಗಳ ವಿರುದ್ದ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರವೇ ಸೂಕ್ತ ಕ್ರಮಕೈಗೊಳ್ಳುತ್ತದೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಸ್ಪಷ್ಟಪಡಿಸಿದರು.
ವಾಸಕ್ಕೆ ಯೋಗ್ಯಮತ್ತು ಯೋಗ್ಯವಲ್ಲದ ಪ್ರದೇಶಗಳನ್ನು ಗುರುತಿಸುವ ಕಾರ್ಯ ಜಿಲ್ಲಾಡಳಿತದಿಂದ ನಡೆಯುತ್ತಿದೆ. ಅಪಾಯಕಾರಿ ಪ್ರದೇಶಗಳ ನಿವಾಸಿ ಗಳಿಗೂ ಬೇರೆ ಕಡೆ ಮನೆ ನಿರ್ಮಿಸುವ ಕಾರ್ಯವೂ ಆಗಲಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.
ಮಡಿಕೇರಿ – ಮಂಗಳೂರು ಹೆದ್ದಾರಿಯನ್ನು ಎಲ್ಲಾ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸುವ ಕುರಿತು ಹೆದ್ದಾರಿ ಪ್ರಾಧಿಕಾರಿದ ಅಧಿಕಾರಿಗಳು ಮತ್ತು ಲೋಕೋಪಯೋಗಿ ಸಚಿವ ರೇವಣ್ಣ ಜತೆ ಚರ್ಚಸಲಾಗಿದೆ. ಶಿರಾಡಿಘಾಟ್ ಮತ್ತು ಚಾರ್ಮಾಡಿ ಘಾಟ್ ರಸ್ತೆಯಲ್ಲೂ ಅಗತ್ಯ ಮುಂಜಾಗ್ರತ ಕ್ರಮಕೈಗೊಂಡು ಪ್ರಯಾಣಿಕರ ವಾಹನ ಸಂಚಾರಕ್ಕೆ ಅನುವು ಮಾಡುವ ಕುರಿತು ಹಾಸನ ಮತ್ತು ಮಂಗಳೂರು ಜಿಲ್ಲಾಧಿಕಾರಿಗಳೊಂದಿಗೂ ಚರ್ಚಸಲಾಗಿದೆ ಎಂದು ಖಾದರ್ ಅವರು ತಿಳಿಸಿದರು.
ಅಧಿಕಾರಿಗಳು ಗುತ್ತಿಗೆದಾರದಿಂದ ಮಾಹಿತಿಬಳಿಕ ಭೂಕುಸಿತ ಮತ್ತು ಪ್ರವಾಹ ಪರಿಸ್ಥಿತಿಯಿಂದ ಹಾನಿಗೀಡಾದ ಸ್ಥಳಗಳು ಮತ್ತು ರಸ್ತೆಗಳ ಸ್ಥಿತಿಗತಿಗಳನ್ನು ಸಚಿವ ಯು.ಟಿ.ಖಾದರ್ ವೀಕ್ಷಿಸಿದರು. ಮಡಿಕೇರಿ -ಜೋಡುಪಾಲ ರಸ್ತೆ ದುರಸ್ಥಿಯನ್ನು ಪರಿಶೀಲಿಸಿದ ಸಚಿವ ಖಾದರ್ ಸ್ಥಳದಲ್ಲಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಗುತ್ತಿಗೆದಾರದಿಂದ ಮಾಹಿತಿ ಪಡೆದುಕೊಂಡರು. ಮಾತ್ರವಲ್ಲದೆ ತಿರುವುಗಳು, ದುರಸ್ಥಿಪಡಿಸಿದ ರಸ್ತೆಗಳ ಎರಡೂ ಬದಿಯಲ್ಲಿ ವೇಗದ ಮಿತಿ, ಅಪಾಯ ಸ್ಥಳಗಳ ಸೂಚನಾ ಫಲಕ ಅಳವಡಿಸಬೇಕೆಂದು ಸೂಚಿಸಿದರು.