ನಾವು ವ್ಯಾಯಾಮ ಮಾಡುವಾಗ ಜಿಮ್‌ನಲ್ಲಿ, ನಾಲ್ಕುಗೋಡೆಗಳ ನಡುವೆ ಮಾಡುವುದಕ್ಕಿಂತ ತೆರೆದ ಬಯಲಿನಲ್ಲಿ, ಸ್ವಾಬಾವಿಕ ಗಾಳಿ ಬೀಸುವ ಕಡೆಗಳಲ್ಲಿ ಮಾಡಿದರೆ ಒಳಿತು. ಸೂರ್ಯನ ಬೆಳಕು ಮತ್ತು ಯಥೇತ್ಛವಾಗಿ ಗಾಳಿ, ಬೆಳಕು ಬರುವ ಕಡೆಯಲ್ಲಿ ವ್ಯಾಯಾಮ ಮಾಡುವುದು ಒಳಿತು. ಪಾರ್ಕ್‌ಗಳಲ್ಲಿ, ಸಮುದ್ರತೀರದಲ್ಲಿ, ಟೆರೆಸ್‌ನಲ್ಲಿ ವ್ಯಾಯಾಮ ಮಾಡಿದರೆ ಒಳ್ಳೆಯದು. ಇಂಥ ಜಾಗಗಳನ್ನು ವ್ಯಾಯಾಮ ಮಾಡಲು ಆಯ್ಕೆ ಮಾಡಿಕೊಳ್ಳುವುದರಿಂದ ನಮ್ಮ ಮನಸು ಉಲ್ಲಸಿತವಾಗಿರುತ್ತದೆ. ಅಲ್ಲದೇ ಮನಸಿನ ಮೇಲಾಗುವ ಅತೀವ ಒತ್ತಡವೂ ಕಡಿಮೆಯಾಗುತ್ತದೆ.
ಮನಸಿಗೆ ಶಕ್ತಿ ಬರುತ್ತದೆ ಹಸಿರಿನ ನಡುವೆ ವ್ಯಾಯಾಮ ಮಾಡುವುದರಿಂದ, ಒಳ್ಳೆಯ ಗಾಳಿ ದೊರೆಯುತ್ತದೆ. ಹಸಿರು, ಪಕ್ಷಿಗಳು, ಸೂರ್ಯನ ಬೆಳಕು ನಮ್ಮ ಮೇಲೆ ಬಿದ್ದಷ್ಟು ನಮ್ಮ ಮನಸು ಪ್ರಶಾಂತ ಸ್ಥಿತಿಗೆ ತಲುಪಿ, ಮನಸಿನಲ್ಲಿರುವ
ಚಿಂತೆ, ಒತ್ತಡಗಳೆಲ್ಲಾ ದೂರವಾಗಿ ಬಿಡುತ್ತವೆ.
ಹೊರಗಿನ ಸ್ವತ್ಛಗಾಳಿಯನ್ನು ಸೇವಿಸುವುದರಿಂದ ನಮ್ಮ ರೋಗನಿರೋಧಕ ಶಕ್ತಿಯು ಅಧಿಕವಾಗಿ, ಮಾನಸಿಕ ಹಾಗೂ ಶಾರೀರಿರ ವ್ಯಾದಿಗಳು ನಮ್ಮಿಂದ ದೂರ ಸರಿಯುತ್ತವೆ. ಇದು ನಮ್ಮನ್ನು ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಲವಲವಿಕೆಯಿಂದ ಇರುವಂತೆ ಮಾಡುತ್ತದೆ.
ನಿಮ್ಮ ಸ್ನಾಯುಗಳು ಗಟ್ಟಿಗೊಳ್ಳುತ್ತವೆ ಜಿಮ್‌ಪರಿಕರಗಳನ್ನು ಬಳಸಿ ಸ್ನಾಯುಗಳಿಗೆ ವ್ಯಾಯಾಮ ಒದಗಿಸುವುದಕ್ಕಿಂಥ, ಮರಳು, ಮಣ್ಣು, ಹುಲ್ಲುಗಳ ಮೇಲೆ ಮಲಗಿ, ಎದ್ದು, ಬಗ್ಗಿ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹಕ್ಕೆ ಒಂದು ಸಮತೋಲನ ಗುಣ ರೂಢಿಗತವಾಗುತ್ತದೆ. ಆ ಮೂಲಕ ನಮ್ಮ ಸ್ನಾಯುಗಳು ಗಟ್ಟಿಯಾಗುತ್ತವೆ.
ದೇಹ ಅರಳುತ್ತದೆ ಎಸಿ ರೂಮಿನಲ್ಲಿ ಜಿಮ್ ಮಾಡುವುದರಿಂದ ದೇಹ ಸ್ವಾಭಾವಿಕವಾಗಿ ಉಸಿರಾಡುತ್ತಿದ್ದರೂ ಅದೆ ಎಸಿ ಕೇಂದ್ರಿತ ಗಾಳಿಯನ್ನು ಉಸಿರಾಡುತ್ತಾ ಇರಬೇಕಾಗುತ್ತದೆ. ಅದರ ಬದಲಿಗೆ ನ್ಯಾಚುರಲ್ ಗಾಳಿಯಲ್ಲಿ ವ್ಯಾಯಾಮ ಮಾಡುತ್ತಿದ್ದರೇ, ನಿಮ್ಮ ದೇಹ ಸ್ವತ್ಛ, ನಿರ್ಮಲ ಗಾಳಿಯನ್ನು ಅಸ್ವಾದಿಸುತ್ತಾ ಹೂವಿನಂತೆ ಅರಳುತ್ತಾ ಹೋಗುತ್ತದೆ.
ಚೌಕಟ್ಟಿಗಳಿಲ್ಲದೆ ವ್ಯಾಯಾಮ ಮಾಡಬಹುದು ಕೈ ತಾಕೀತು, ಕಾಲು ಸಿಕ್ಕಿ ಹಾಕಿಕೊಂಡೀತು ಎಂಬ ಭಯವಿಲ್ಲದೇ ಫ್ರೀ ಹ್ಯಾಂಡ್ ವ್ಯಾಯಾಮ, ಎಲ್ಲಾ ವಿಧದ ವ್ಯಾಯಾಮಗಳನ್ನು ಆರಾಮವಾಗಿ, ನಿಶ್ಚಿಂತೆಯಿಂದ ಮಾಡಬಹುದು.