Advertisement

ಭೂಮಿಯ ಸಮೀಪಕ್ಕೆ “ಸ್ವಾನ್‌’ಧೂಮಕೇತು !

08:31 AM May 17, 2020 | Sriram |

ಉಡುಪಿ: ಸ್ವಾನ್‌ ಹೆಸರಿನ ಧೂಮಕೇತು ಭೂಮಿಯ ಸಮೀಪಕ್ಕೆ ಬರುತ್ತಿದ್ದು, ಸೂರ್ಯೋ ದಯಕ್ಕೆ ಮುನ್ನ ನೋಡುವ ಅವಕಾಶವಿದೆ.
1980ರ ದಶಕದಲ್ಲಿ ಹ್ಯಾಲಿ ಧೂಮಕೇತು ವೀಕ್ಷಣೆಗೆ ಸಿಕ್ಕಿತ್ತು. ಇನ್ನೊಮ್ಮೆ ಅದು ಭೂಮಿಯ ಬಳಿ ಬರುವುದು 2061ಕ್ಕೆ. ಈಗ ಸ್ವಾನ್‌ ಧೂಮಕೇತುವನ್ನು ನೋಡುವ ಅವಕಾಶ ನಮಗಿದೆ. ಇದು ಸೂರ್ಯನ ಅತೀ ಸಮೀಪಕ್ಕೆ ಈ ವರ್ಷದ ಮೇ 28ರಂದು ಬರಲಿದೆ.
ಈ ಧೂಮಕೇತು ಸೂರ್ಯೋದಯಕ್ಕೆ ಮುನ್ನ ಒಂದೂವರೆ ತಾಸು ಕಾಣಿಸುತ್ತದೆ. ಉಡುಪಿ-ಮಂಗಳೂರಿನಂಥ ಸ್ಥಳಗಳಲ್ಲಿ ಪ್ರತೀ ದಿನ ಮುಂಜಾನೆ 4 ಗಂಟೆಯ ಸುಮಾರಿಗೆ ಕಾಣಿಸಲಿದ್ದು, ವಿವಿಧ ರಾಶಿಗಳ ಬಳಿ ತನ್ನದೇ ಮಾರ್ಗದಲ್ಲಿ ಚಲಿಸುತ್ತದೆ.

Advertisement

ಮೇ 20 ವೀಕ್ಷಣೆ ಸುಲಭ
ಮೇ 20ರಂದು ಈ ಧೂಮಕೇತುವನ್ನು ನೋಡಲು ಒಳ್ಳೆಯ ದಿನ. ಆ ದಿನ ಇದು ಪಾರ್ಥ ರಾಶಿಯ ಎರಡನೇ ಅತಿ ಪ್ರಕಾಶಮಾನವಾದ ಆಲ್‌ಗೋಲ್‌ ನಕ್ಷತ್ರದ ಬಳಿ ಹಾದುಹೋಗುತ್ತದೆ. ಈ ನಕ್ಷತ್ರವನ್ನು ಗುರುತಿಸಲು ಮತ್ತು ಧೂಮಕೇತುವನ್ನು ಕಂಡುಹಿಡಿಯಲು ಸಹಾಯ ಮಾಡುವ ಹಲವು ಸ್ಕೈ ಮ್ಯಾಪ್‌ ಅಪ್ಲಿಕೇಶನ್‌ಗಳು ಲಭ್ಯವಿವೆ. ಧೂಮಕೇತು ಮೇ 22ರ ತನಕ ಇದೇ ಹೊಳಪಿನಲ್ಲಿ ಉಳಿಯುತ್ತದೆ.

ಬೆಳಗ್ಗಿನ ಜಾವ ಗೋಚರ
ಸ್ವಾನ್‌ ಹೆಸರಿನ ಧೂಮಕೇತು ಈ ಬಾರಿ ಗೋಚರಕ್ಕೆ ಬರುತ್ತಿದೆ. ಬೆಳಗ್ಗಿನ ಜಾವ ಸುಮಾರು 4ರಿಂದ 4.30ರ ಅವಧಿಯ ವೇಳೆ ಇದು ಕಾಣಸಿಗುತ್ತಿದೆ. ಸೂರ್ಯನ ಹತ್ತಿರಕ್ಕೆ ಹೋದಂತೆ ಗೋಚರವಾಗುತ್ತಿದೆ.
– ಎ.ಪಿ. ಭಟ್‌, ಖಗೋಳಶಾಸ್ತ್ರಜ್ಞರು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next