Advertisement

ಹಾಸ್ಯ ಕೇಂದ್ರಿತ “ಎಂತದು ಮಾರಾಯ್ರೆ’

09:57 PM Jul 16, 2019 | mahesh |

ಸಾಹಿತ್ಯದಲ್ಲಿ ಹಲವು ಪ್ರಕಾರಗಳಿವೆ. ಅದರಲ್ಲಿ ಹಾಸ್ಯವೂ ಒಂದು. ಹಾಸ್ಯವನ್ನೇ ಕೇಂದ್ರವಾಗಿಟ್ಟುಕೊಂಡು ಅನೇಕ ಪುಸ್ತಕಗಳು ಬಂದಿವೆ. ಆದರೆ ಹಾಸ್ಯ ಕೃತಿಗಳಲ್ಲಿ ಹೆಚ್ಚಿನವು ನಗಿಸಬೇಕು ಎನ್ನುವ ಪ್ರಯತ್ನಗಳನ್ನು ಮಾಡುತ್ತವೆಯೇ ಹೊರತು ಅದು ನಗು ಸೃಷ್ಠಿಸುವುದರಲ್ಲಿ ವಿಫ‌ಲವಾಗುತ್ತದೆ. ಆದರೆ ಹಾಸ್ಯ ಸಾಹಿತಿಯೆಂದೇ ಪ್ರಸಿದ್ಧಿಯಾಗಿರುವ ಭುವನೇಶ್ವರಿ ಹೆಗಡೆ ಅವರು “ಎಂತದು ಮಾರಾಯ್ರೆ’ ಹಾಸ್ಯ ಕೃತಿಯಲ್ಲಿ ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ರಸವತ್ತಾಗಿ ಓದುಗರನ್ನು ತಲುಪಿಸಿದ್ದಾರೆ.

Advertisement

ಘಟನೆ: 1: ಭುವನೇಶ್ವರಿ ಅವರು ಮಂಗಳೂರಿಗೆ ಉಪನ್ಯಾಸಕರಾಗಿ ಬಂದು ಸೇರಿದಾಗ ಇಲ್ಲಿನ ಬಸ್‌ ಪಯಣದ ಬಗ್ಗೆ ಹಾಸ್ಯರೂಪವಾಗಿ ಕಟ್ಟಿಕೊಟ್ಟದ್ದು. ಎಲ್ಲಿಯೂ ಇದು ಉತ್ಪ್ರೇಕ್ಷೆ ಎನಿಸದೆ ಪ್ರತಿಯೊಬ್ಬ ಓದುಗನಿಗೂ ತನ್ನದೇ ಅನುಭವ ಎನ್ನುವಂತೆ ಹಾಸ್ಯದ ಮಿಶ್ರಣವಿದೆ. ಪ್ರತಿದಿನ ಹೋಗುವ ಬಸ್ಸಿನಲ್ಲಿ ನಡೆಯುವ ಘಟನೆಯನ್ನೂ ಅಷ್ಟೊಂದು ಸೂಕ್ಷ್ಮವಾಗಿ ಗಮನಿಸಿ ಹಾಸ್ಯ ರೂಪ ಕೊಟ್ಟಿರುವುದು ಲೇಖಕಿಯ ಹಾಸ್ಯ ಪ್ರಜ್ಞೆಯನ್ನು ಎತ್ತಿ ತೋರಿಸುತ್ತದೆ.

ಘಟನೆ: 2: ಲೇಖಕಿಯ ಬಾಲ್ಯದಲ್ಲಿ ನಡೆದ ಹುಲಿ ಬೇಟೆಯ ಭಯಾನಕ ಪ್ರಸಂಗವನ್ನು ಒಂದು ಹಾಸ್ಯದ ರೀತಿಯಲ್ಲಿ ಕಟ್ಟಿಕೊಟ್ಟದ್ದು ನಿಜಕ್ಕೂ ಅದ್ಭುತ.ಯಾವುದೋ ಪ್ರಾಣಿಗೆ ಹಾಕಬೇಕಿದ್ದ ಉರುಳಿಗೆ ಹುಲಿ ಬಿದ್ದದ್ದು ಮತ್ತು ಆ ಹುಲಿಯನ್ನು ಕಂಡು ಇವರು ಆ ಸಂದರ್ಭಕ್ಕೆ ಪ್ರತಿಕ್ರಿಯಿಸಿದ ರೀತಿ ಓದುವವನ ಕಣ್ಣಂಚು ಬಿಡದೆ ಒಂದೇ ಗುಟುಕಲ್ಲಿ ಓದಿಸುತ್ತದೆ.

ಘಟನೆ: 3: ಬ್ಯಾಂಕಿನಲ್ಲಿ ನಡೆದ ಒಂದು ಅಚಾತುರ್ಯ ಸನ್ನಿವೇಶವನ್ನೂ ವಿಶೇಷ ರೀತಿಯಲ್ಲಿ ಅವರು ತಮ್ಮದೇ ಹಾಸ್ಯ ಶೈಲಿಯಲ್ಲಿ ವಿವರಿಸುವಾಗ ಆ ಸಂದರ್ಭವನ್ನೂ ನಮಗೆ ಪ್ರತ್ಯಕ್ಷ ಅನುಭವವಾಗುವಂತೆ ಬರೆದು ಉಣಬಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

- ದಿಶಾ ಅಡ್ಯಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next