Advertisement

137 ನಗರಗಳಲ್ಲಿ ಗೊಂದಲವಿಲ್ಲದೆ ನಡೆದ ಕಾಮೆಡ್‌-ಕೆ ಪ್ರವೇಶ ಪರೀಕ್ಷೆ

06:55 AM May 14, 2018 | Team Udayavani |

ಬೆಂಗಳೂರು: ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿರುವ ಸೀಟುಗಳ ಪ್ರವೇಶಕ್ಕೆ ಭಾನುವಾರ ರಾಜ್ಯದ 24 ನಗರಗಳು ಸೇರಿ ದೇಶದ 137 ನಗರಗಳಲ್ಲಿ ಕಾಮೆಡ್‌-ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆದಿದೆ.

Advertisement

ಕಾಮೆಡ್‌-ಕೆ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಅಭ್ಯರ್ಥಿಗಳಲ್ಲಿ ರಾಜ್ಯದ 108 ಕೇಂದ್ರಗಳಲ್ಲಿ 21,889 ವಿದ್ಯಾರ್ಥಿಗಳು ಮತ್ತು ದೇಶದ ಬೇರೆ ರಾಜ್ಯಗಳ ಪರೀಕ್ಷಾ ಕೇಂದ್ರದಲ್ಲಿ 62,306 ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಪರೀಕ್ಷೆ ಬರೆದಿದ್ದಾರೆ.

ರಸಾಯನಶಾಸ್ತ್ರ ವಿಷಯ ಸುಲಭವಾಗಿತ್ತು. ಒಂದು ಪ್ರಶ್ನೆ ಮಾತ್ರ ಮುದ್ರಣ ದೋಷದಿಂದ ತಪ್ಪಾಗಿತ್ತು. ಭೌತಶಾಸ್ತ್ರ
ಪ್ರಶ್ನೆಪತ್ರಿಕೆ ಕೂಡ ಸುಲಭವಾಗಿತ್ತು. ಗಣಿತ ಸ್ವಲ್ಪ ಕಷ್ಟ ಇತ್ತು ಎಂದು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.

ಪಶ್ಚಿಮ ಬಂಗಾಳದ ವಿದ್ಯಾರ್ಥಿಯೊಬ್ಬ ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್‌ ಬಳಕೆ ಮಾಡಿದ್ದ ಹಿನ್ನೆಲೆಯಲ್ಲಿ ಡಿಬಾರ್‌ ಮಾಡಲಾಗಿದೆ. ಬೆಂಗಳೂರಿನ 48 ಪರೀಕ್ಷಾ ಕೇಂದ್ರಗಳ ಪೈಕಿ 5 ಕೇಂದ್ರಗಳಲ್ಲಿ ತಾಂತ್ರಿಕ ಕಾರಣದಿಂದ ವಿದ್ಯಾರ್ಥಿಗಳು ಲಾಗಿನ್‌ ಮಾಡುವುದು ತಡವಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಪರೀಕ್ಷಾ ಸಮಯವನ್ನು ವಿಸ್ತರಿಸಲಾಗಿದೆ ಎಂದು ಕಾಮೆಡ್‌-ಕೆ ಪ್ರಕಟಣೆ ತಿಳಿಸಿದೆ.

ತಾತ್ಕಾಲಿಕ ಸರಿ ಉತ್ತರಗಳನ್ನು ಮೇ 17ರಂದು ಕಾಮೆಡ್‌-ಕೆ ವೆಬ್‌ಸೈಟ್‌ https://www.comedk.org ನಲ್ಲಿ
ಪ್ರಕಟಿಸಲಿದೆ.ಅಂತಿಮ ಸರಿ ಉತ್ತರಗಳನ್ನು ಮೇ 25ರಂದು ಪ್ರಕಟಿಸಲಿದೆ. 

Advertisement

ಮೇ 28ರಂದು ಸ್ಕೋರ್‌ ಕಾರ್ಡ್‌ ದೊರೆಯಲಿದ್ದು, ವಿದ್ಯಾರ್ಥಿಗಳು ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ಕಾಮೆಡ್‌-ಕೆ ಕಾರ್ಯಕಾರಿಕಾರ್ಯದರ್ಶಿ ಡಾ.ಎಸ್‌.ಕುಮಾರ್‌  ಮಾಹಿತಿ ನೀಡಿದರು.

ಸಿಎಲ್‌ಎಟಿ ಪರೀಕ್ಷೆ
ಶಾಂತಿಯುತ ಕಾಮೆಡ್‌-ಕೆ ಮಾದರಿಯಲ್ಲೇ ಕಾನೂನು ಕೋರ್ಸ್‌ಗಳ ಪ್ರವೇಶಕ್ಕೆ ನ್ಯಾಷನಲ್‌ ಯೂನಿವರ್ಸಿಟಿ ಆಫ್‌
ಅಡ್ವಾನ್ಸ್‌ ಲೀಗಲ್‌ ಸ್ಟಡೀಸ್‌ ಆಯೋಜಿಸಿದ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ(ಸಿಎಲ್‌ಎಟಿ) ಕೂಡ
ಭಾನುವಾರ ಶಾಂತಿಯುತವಾಗಿ ನೆರವೇರಿದೆ. ದೇಶದಲ್ಲಿ ಇರುವ 17 ಕಾನೂನು ವಿಶ್ವವಿದ್ಯಾಲಯಗಳ ಸೀಟಿನ ಪ್ರವೇಶಕ್ಕೆ ನಡೆಸುವ ಸಿಎಲ್‌ ಎಟಿ 2018ನೇ ಸಾಲಿನ ಪರೀಕ್ಷೆಗೆ 63 ಪರೀಕ್ಷಾ ಕೇಂದ್ರದಲ್ಲಿ 59,000
ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದಾರೆ ಎಂದು ಆಡಳಿತ ಮಂಡಳಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next