Advertisement

15 ಲ.ರೂ.ವರೆಗಿನ ಭ್ರಷ್ಟಾಚಾರದ ದೂರನ್ನು ತರಲೇಬೇಡಿ: ಸಂಸದ

12:16 AM Dec 29, 2021 | Team Udayavani |

ಹೊಸದಿಲ್ಲಿ: ಮಧ್ಯಪ್ರದೇಶದ ರೇವಾ ಕ್ಷೇತ್ರದ ಬಿಜೆಪಿ ಸಂಸದ ಜನಾರ್ದನ ಮಿಶ್ರಾ ವಿವಾದವೊಂದಕ್ಕೆ ಸಿಲುಕಿದ್ದಾರೆ. ಅವರು ಮಾಡಿದ ತಮಾಷೆಯೊಂದನ್ನು ವಿಪಕ್ಷಗಳು ಗಂಭೀರವಾಗಿ ಪರಿಗಣಿ ಸಿವೆ. ಮಾಧ್ಯಮಗಳ ಪಾತ್ರದ ಕುರಿತು ವಿಚಾರ ಸಂಕಿರಣವೊಂದರಲ್ಲಿ ಭಾಗವಹಿಸಿದ್ದ ಅವರು; “ಸರಪಂಚರು (ಗ್ರಾಮ ಮುಖ್ಯಸ್ಥರು) ಭ್ರಷ್ಟಾಚಾರವೆಸಗಿ ದ್ದಾ ರೆಂದು ಆರೋಪಿಸಿ ಜನರು ನನ್ನ ಬಳಿ ಬರುತ್ತಾರೆ.

Advertisement

ಆಗ ನಾನು ತಮಾಷೆ ಯಾಗಿ, ಭ್ರಷ್ಟಾಚಾರದ ಪ್ರಮಾಣ 15 ಲಕ್ಷ ರೂ.ವರೆಗೆ ಇದ್ದರೆ ನನ್ನ ಬಳಿ ಬರಲೇಬೇಡಿ, ಅದಕ್ಕೂ ಹೆಚ್ಚಿದ್ದರೆ ಮಾತ್ರ ಬನ್ನಿ ಎಂದು ಹೇಳುತ್ತೇನೆ.

ಇದನ್ನೂ ಓದಿ:ಚೀನಾ ಗಡಿಭಾಗದಲ್ಲಿ 27 ರಸ್ತೆ ನಿರ್ಮಾಣಕ್ಕೆ ಚಾಲನೆ : ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

ಆ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸಲು 7 ಲಕ್ಷ ರೂ. ವ್ಯಯಿಸಿರು ತ್ತಾನೆ, ಮತ್ತೆ ಅಧ್ಯಕ್ಷನಾಗಲು ಇನ್ನೂ 7 ಲಕ್ಷ ರೂ. ಖರ್ಚು ಮಾಡಿರುತ್ತಾನೆ. ಬಾಕಿ 1 ಲಕ್ಷ ರೂ. ಹಣದುಬ್ಬರವನ್ನು ಅವಲಂಬಿಸಿ ರುತ್ತದೆ’ ಎಂದು ಹೇಳಿ ದ್ದರು. ಅದು ವೈರಲ್‌ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next