Advertisement

ಒಮ್ಮೆ ಆದರೂ ನೋಡ ಬನ್ನಿ ಹಂಪಿ

10:12 PM Jan 15, 2020 | Sriram |

ಹಂಪಿ ಎಂದೊಡನೆ ಎಲ್ಲರಿಗೂ ಅದರ ಗತ ವೈಭವ ಒಂದು ಬಾರಿ ಕಣ್ಣ ಮುಂದೆ ಬರದೇ ಇರಲಾರದು. 1336 ರಿಂದ 1556 ರವರೆಗಿನ ಸುಮಾರು ಎರಡರಿಂದ ಎರಡೂವರೆ ಶತಮಾನಗಳ ಕಾಲ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದ್ದು. ಶ್ರೀ ಕೃಷ್ಣ ದೇವರಾಯನ ವೈಭವ ಅರಳಿದ್ದೂ ಅಲ್ಲಿಯೇ. ಅಂದಿನ ವೈಭವದ ಇತಿಹಾಸವನ್ನು ನೋಡಲು ಇಂದೂ ಹಂಪಿಗೆ ಲಕ್ಷಾಂತರ ಮಂದಿ ಪ್ರವಾಸಿಗರು ಬರುತ್ತಾರೆ. ವಿದೇಶಿಯರಿಗೂ ಲೆಕ್ಕವಿಲ್ಲ. ನಮ್ಮ ಚರಿತ್ರೆಯನ್ನು ತಿಳಿಯಲು ಒಳ್ಳೆಯ ಅವಕಾಶ ಸಹ.

Advertisement

ಹಂಪಿಯು ವಿಶ್ವ ಪಾರಂಪರಿಕಾ ತಾಣವಾಗಿ ಗುರುತಿಸಲ್ಪಟ್ಟಿದೆ. ಯುನೆಸ್ಕೋ ಗುರುತಿಸಿರುವ ಹಲವಾರು ಪಾರಂಪರಿಕಾ ತಾಣಗಳಲ್ಲಿ ಇದೂ ಒಂದು. ಇಡೀ ಹಂಪಿಯ ವೈಭವವನ್ನು ಕಣ್ತುಂಬಿಕೊಳ್ಳಲು ಕನಿಷ್ಠ ಮೂರು ದಿನಗಳಾದರೂ ಬೇಕು. ಸಾಸಿವೆ ಕಾಳು ಗಣೇಶ, ಉಗ್ರ ನರಸಿಂಹ ಹಜಾರ ರಾಮನ ಗುಡಿ.ಹೀಗೆ ಹೀಗೆ ಸಾಲು ಸಾಲಾಗಿ ಕಥನ ಬಿಚ್ಚಿಕೊಳ್ಳುತ್ತದೆ. ಸಾಮಾನ್ಯವಾಗಿ ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಇಲ್ಲಿನ ಹವಾಮಾನವೂ ಹಿತಕರವಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next