Advertisement

ಹೋಗಿ ಬನ್ನಿ !

08:42 PM Apr 11, 2019 | Team Udayavani |

ಬೀಳ್ಕೊಡುವುದೆಂದರೆ ಕೇವಲ ಔಪಚಾರಿಕ ಸಮಾರಂಭವಲ್ಲ. ಅದು ಕಿರಿಯರು ಹಿರಿಯರಿಗೆ ಮುಂದಿನ ಬದುಕಿನ ಮೊದಲ ಹೆಜ್ಜೆಯನ್ನು ಹಾರೈಸುವ ಸುಸಂದರ್ಭ. ಈವರೆಗೆ ನಮ್ಮ ಕಾಲೇಜು ಬದುಕಿನಲ್ಲಿ ಶುಭ ಹಾರೈಸಿದ ನಮ್ಮ ಸೀನಿಯರ್‌ಗಳ ಉಜ್ವಲ ಭವಿಷ್ಯಕ್ಕಾಗಿ ಹಾರೈಸುವ ಸುಸಂದರ್ಭ.

Advertisement

ಕಾಲೇಜಿಗೆ ಸೇರುವ ಆರಂಭದಲ್ಲಿ ನಮಗೆ ಕಿರಿಯರೆಂಬ ಕೀಳರಿಮೆ ಇತ್ತು. ಅದನ್ನು ಹೋಗಲಾಡಿಸಿದವರು ಸೀನಿಯರ್ಸ್‌. ಸದಾ ಉತ್ಸಾಹದಿಂದ ಎಲ್ಲರನ್ನೂ ಹುರಿದುಂಬಿಸುತ್ತಿದ್ದರು. ಕಾಲೇಜು ಕ್ಯಾಂಪಸ್‌ನಲ್ಲಿ ಒಂದು ಉತ್ತಮ ಸೌಹಾರ್ದ ವಾತಾವರಣವನ್ನು ಸೃಷ್ಟಿಸಿದ‌ರು. ಅಧ್ಯಾಪಕರ ರೀತಿಯೇ ಉತ್ತಮ ಮಾರ್ಗದರ್ಶಕರಾಗಿದ್ದರು. ಸೀನಿಯರ್‌ ಎಂಬ ಬಿಗುಮಾನವಿಲ್ಲದೆ ಎಲ್ಲರ ಜೊತೆಗೂ ಸೇರಿಕೊಳ್ಳುತ್ತಿದ್ದರು. ಕಾಲೇಜಿನ ಯಾವುದೇ ಕಾಂಪಿಟೇಷನ್‌ ನಡೆದರೂ ಎಲ್ಲರನ್ನೂ ಭಾಗವಹಿಸುವಂತೆ ಪ್ರೇರೇಪಿಸುತ್ತಿದ್ದರು. ಯಾವುದೇ ಸಮಸ್ಯೆಗಳಿದ್ದರೂ ಕೂಡ ಹೆಗಲು ಕೊಡುತ್ತಿದ್ದರು. ಪ್ರತಿಯೊಂದು ವಿಭಾಗದ ಹಿರಿಯರು ಕೂಡ ನಮ್ಮ ಎಲ್ಲಾ ಕೆಲಸಗಳನ್ನು ಪ್ರೋತ್ಸಾಹಿಸುತ್ತಿದ್ದರು.

ಆದರೆ, ಅವರನ್ನು ಬೀಳ್ಕೊಡುವಾಗ ಕಣ್ಣೀರು ಹಾಕುತ್ತೇವೆ. ಆದರೇನು ಮಾಡುವುದು. ಹಿರಿಯರನ್ನು ಬೀಳ್ಕೊಡಲೇಬೇಕು. ಸೀನಿಯರ್‌ಗಳೇ, ನಿಮಗೆಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸುತ್ತೇವೆ.

ಪ್ರಜ್ವಲ್‌ ಅಮೀನ್‌
ಪ್ರಥಮ ಪತ್ರಿಕೊದ್ಯಮ ಎಂಜಿಎಂ ಕಾಲೇಜು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next