Advertisement

ಮತ ಹಾಕಲು ವೀಲ್‌ಚೇರ್‌ನಲ್ಲಿ ಬಂದರು

11:36 PM Apr 23, 2019 | Team Udayavani |

ಸಾಗರ: ಲೋಕಸಭಾ ಚುನಾವಣೆ ಸಂದರ್ಭ ಆಯೋಗ ವ್ಯವಸ್ಥೆ ಮಾಡಿದ ವೀಲ್‌ಚೇರ್‌ನ ಪರಮಾವ ಧಿ ಪ್ರಯೋಜನವನ್ನು ಮತದಾರರು ಮಾಡಿಕೊಂಡ ದೃಶ್ಯ ಮಂಗಳವಾರ ತಾಲೂಕಿನ ಹಲವು ಮತಗಟ್ಟೆಗಳಲ್ಲಿ ಕಂಡು ಬಂದಿದೆ.

Advertisement

ಕುಗ್ವೆ, ಕೆರೆಕೊಪ್ಪ, ನಂದಿತಳೆ ಸೇರಿದಂತೆ ತಾಲೂಕಿನ ಹಲವು ಮತಗಟ್ಟೆಗಳಲ್ಲಿ ವ್ಯವಸ್ಥೆ ಸದುಪಯೋಗವಾಗಿದೆ. ಅಲ್ಲದೆ, ಸಾರ್ವಜನಿಕರ ಮೆಚ್ಚುಗೆಗೆ ಸಹ ಪಾತ್ರವಾಗಿದೆ. ತಾಲೂಕಿನ ನಂದಿತಳೆಯ ಮತಗಟ್ಟೆ ಕೇಂದ್ರವೊಂದರಲ್ಲಿಯೇ ನರದೌರ್ಬಲ್ಯದ ಸಮಸ್ಯೆಯಿಂದ ಬಳಲುತ್ತಿರುವ ಒಂದೇ ಕುಟುಂಬದ 9 ಮಂದಿ ವೀಲ್‌ ಚೇರ್‌ ಸೌಲಭ್ಯ ಬಳಸಿಕೊಂಡಿದ್ದಾರೆ.

ತಾಲೂಕಿನ ನೆಲ್ಲಿಕೊಪ್ಪದ 88 ವರ್ಷದ ಕಮಲಮ್ಮ ಸಹ ವೀಲ್‌ ಚೇರ್‌ ಸೌಲಭ್ಯ ಬಳಸಿಕೊಂಡು ಮತಗಟ್ಟೆ ಕೇಂದ್ರ 129ರಲ್ಲಿ ತಮ್ಮ ಮತ ಚಲಾಯಿಸಿದರು. ಈ ಸಂದರ್ಭ ಅವರ ಪುತ್ರ ನಾಗಭೂಷಣ ಸಹಕರಿಸಿದರು. ಬೂತ್‌ನಲ್ಲಿ ಖಾಸಗಿ ಬಸ್‌ ಚಾಲಕ ಕರ್ತವ್ಯದ ನಡುವೆಯೇ ಬಸ್‌ ನಿಲ್ಲಿಸಿಕೊಂಡು, ಮತದಾನ ಮಾಡಿದ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next