Advertisement
ಆಸಿಯಾನ್ ಬಿಸಿನೆಸ್ ಫೋರಂ ಉದ್ದೇಶಿಸಿ ಮಾತನಾಡಿದ ಅವರು, ಸದ್ಯ ಭಾರತದಲ್ಲಿ ಹೂಡಿಕೆಗೆ ಪೂರಕವಾಗಿ ಉದ್ಭವವಾಗಿರುವ ಸನ್ನಿವೇಶಗಳ ಬಗ್ಗೆ ವಿವರಣೆ ನೀಡಿದ್ದಾರೆ. ಈಗ ಭಾರತದಲ್ಲಿ ಹೂಡಿಕೆ ಮಾಡುವುದು ಸುಲಭ. ಹಿಂದಿನ ಅಡೆತಡೆಗಳನ್ನು ತೆಗೆದು ಹಾಕಿದ್ದೇವೆ. ಯಾವುದೇ ಭಯವಿಲ್ಲದೇ ಹೂಡಿಕೆ ಮಾಡಬಹುದು ಬನ್ನಿ ಎಂದು ಉದ್ದಿಮೆದಾರರಿಗೆ ಆಹ್ವಾನ ನೀಡಿದ್ದಾರೆ.
Related Articles
Advertisement
ಆದರೂ ಚೀನಾಗೆ ಈ ವ್ಯೂಹದ ಬಗ್ಗೆ ಅಂಜಿಕೆ ಶುರುವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಈ ನಾಲ್ಕೂ ದೇಶಗಳ ಮಿಲಿಟರಿ ಶಕ್ತಿ ಒಂದಾದರೆ, ಅದು ಇಡೀ ಜಗತ್ತಿಗೇ ಅಂಜಿಕೆ ತರುವಂಥದ್ದಾಗಿದೆ. ಇಂಡೋ-ಫೆಸಿಫಿಕ್‌ನ ಖದರ್ ಬೇರೆಯಾಗುತ್ತದೆ. ಚೀನಾ ಈ ನಾಲ್ಕು ದೇಶಗಳೊಂದಿಗೆ ವ್ಯಾಪಾರ-ವಹಿವಾಟು ನಡೆಸುತ್ತಿದೆ. ಆಗ ಈ ನಾಲ್ಕು ದೇಶಗಳು ಒಟ್ಟಾಗಿ ಚೀನಾ ಮೇಲೆ ಪ್ರಭಾವ ಬೀರಿ ಸಮಚಿತ್ತದ ವ್ಯಾಪಾರ-ವಹಿವಾಟು ನಡೆಸುವಂತೆ ಮಾಡಬಹುದು. ಅಲ್ಲದೆ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಈ ದೇಶಗಳು ತೊಡಕಾಗಬಹುದು. ಭಾರತದ ಬಗ್ಗೆ ಡೋನಾಲ್ಡ್ ಟ್ರಂಪ್ ಮೆಚ್ಚುಗೆ
ಆಸಿಯಾನ್ ಶೃಂಗದ ಅಂಗವಾಗಿ ಮನಿಲಾಗೆ ಬಂದಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ. ಈಗಾಗಲೇ ಭಾರತ ಮತ್ತು ಮೋದಿ ಆಡಳಿತವನ್ನು ಕೊಂಡಾಡುತ್ತಿರುವ ಟ್ರಂಪ್, ಈ ಬಾರಿಯೂ ಅದೇ ಮಾತುಗಳನ್ನು ಉಚ್ಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮೋದಿ ಅವರು, ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ಗಟ್ಟಿಗೊಳ್ಳುತ್ತಿದೆ. ಟ್ರಂಪ್ ಅವರು ಎಲ್ಲೇ ಹೋಗಲಿ, ಅಲ್ಲಿ ಭಾರತವನ್ನು ಹೊಗಳಿ ಬರುತ್ತಿದ್ದಾರೆ. ಇದು ನಮ್ಮ ಎರಡು ದೇಶಗಳ ನಡುವಿನ ಗಟ್ಟಿ ಬಾಂಧವ್ಯವನ್ನು ಸಾದರಪಡಿಸುತ್ತಿದೆ. ನಾವು ಕೂಡ ಅಮೆರಿಕ ಹಾಗೂ ಇಡೀ ಜಗತ್ತು ಭಾರತದಿಂದ ಏನನ್ನು ನಿರೀಕ್ಷೆ ಮಾಡುತ್ತಿದೆಯೋ ಅದನ್ನು ಪೂರೈಸಲು ಸಿದ್ಧರಿದ್ದೇವೆ ಎಂದು ಹೇಳಿದರು. ಬಳಿಕ ಮಾತನಾಡಿದ ಟ್ರಂಪ್ ಅವರು, ಮೋದಿ ಅವರನ್ನು ಒಬ್ಬ ಅತ್ಯುತ್ತಮ ಸ್ನೇಹಿತ ಮತ್ತು ಉತ್ತಮ ಜೆಂಟಲ್‌ಮೆನ್ ಎಂದು ಬಣ್ಣಿಸಿದರು. ಈ ಹಿಂದೆ ಶ್ವೇತಭವನದಲ್ಲೇ ನಾವಿಬ್ಬರು ಭೇಟಿಯಾಗಿದ್ದೆವು. ಆಗಿನಿಂದ ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಆದೆವು. ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ನಾವಿಬ್ಬರು ಇದೇ ರೀತಿಯಲ್ಲಿ ಸಂಬಂಧ ಮುಂದುವರಿಸಿಕೊಂಡು ಹೋಗುತ್ತೇವೆ ಎಂದರು.