Advertisement
ಒಮ್ಮೆ ರಬೈ ಎಡ್ಲರ್ ಲಂಡನ್ನಿನ ಕಾರ್ಡಿನಲ್ (ಕ್ರೆಸ್ತ ಧರ್ಮಗುರು) ಆಗಿದ್ದ ವೋಗನ್ ಎಂಬವವರ ಜೊತೆ ಯಾವುದೋ ಸಮಾರಂಭದಲ್ಲಿ ಒಟ್ಟಿಗೆ ಊಟಕ್ಕೆ ಕೂರುವ ಸಂದರ್ಭ ಎದುರಾಯಿತು. ಈ ಯಹೂದ್ಯರಲ್ಲಿ ಹಂದಿಮಾಂಸ ತಿನ್ನುವುದು ಸಂಪೂರ್ಣ ನಿಷಿದ್ಧ. ಇದನ್ನು ತಿಳಿದಿದ್ದ ವೋಗನ್, ರಬೈಯವರ ಕಡೆ ತಿರುಗಿ ಎಡ್ಲರ್ ಅವರೇ, ನಿಮ್ಮ ಊಟದ ತಾಟಿಗೆ ಹ್ಯಾಮ್ (ಹಂದಿಯ ಕೊಬ್ಬಿನ ತೆಳುವಾದ ಪದರ) ಬಡಿಸುವ ವಿಶೇಷ ಸಂದರ್ಭ ನನಗೆಂದು ಬರುವುದೋ ಏನೋ ಎಂದು ಕಾಯುತ್ತಿದ್ದೇನೆ ಎಂದು ಕಿಚಾಯಿಸಿದರು. ಇವರ ಮಾತಿಗೆ ರಬೈ ಸಿಟ್ಟಿಗೇಳಲಿಲ್ಲ, ಜಗಳಕ್ಕೂ ಇಳಿಯಲಿಲ್ಲ. ಬದಲಾಗಿ ಹೀಗೆ ಉತ್ತರ ಕೊಟ್ಟರು- ಅದಕ್ಕೆ ಕಾಯುವುದೇಕೆ! ನಿಮ್ಮ ಮದುವೆಯ ಊಟದಲ್ಲಿ ನನಗೆ ನಿಮ್ಮ ಕೈಯಾರೆ ತೃಪ್ತಿಯಾಗುವಷ್ಟು ಬಡಿಸಿಬಿಡಿ. ನಿಮ್ಮ ನೆರವೇರುತ್ತದೆ ಎಂದರು ರಬೈ ಎಡ್ಲರ್.
Advertisement
ತಿರುಗುಬಾಣ
06:07 PM Sep 16, 2019 | mahesh |