Advertisement

ಸುಳ್ಯದಲ್ಲಿ ಇಳಿದ ಮಳೆ ಅಬ್ಬರ: ಜೋಡುಪಾಲದ್ದೆ ಚಿಂತೆ!

01:01 PM Aug 19, 2018 | |

ಸುಳ್ಯ: ಕಳೆದೆರಡು ದಿನಗಳಿಗೆ ಹೋಲಿಸಿದರೆ ಸುಳ್ಯದಲ್ಲಿ ಮಳೆ ಪ್ರಮಾಣ ಇಳಿಕೆ ಕಂಡಿದೆ. ಆದರೆ ತಾಲೂಕಿನ ಗಡಿ ಭಾಗದ ಸನಿಹದಲ್ಲಿರುವ ಜೋಡುಪಾಲದಲ್ಲಿ ಗುಡ್ಡ ಕುಸಿತದಂತಹ ದುರ್ಘ‌ಟನೆ ಸಂಭವಿಸಿ, ಸಂತ್ರಸ್ತರು ಸುಳ್ಯದತ್ತ ಆಗಮಿಸುತ್ತಿದ್ದಾರೆ. ಭಾಗಮಂಡಲ ಪರಿಸರದಲ್ಲಿ ಮಳೆ ಏರಿಕೆ ಕಂಡರೆ, ಪಯಸ್ವಿನಿ ನದಿ ತಟದಲ್ಲಿ ಪ್ರವಾಹ ಭೀತಿ ಉಂಟಾಗುವ ಸಾಧ್ಯತೆಯಿಂದ ತಾಲೂಕು ಆಡಳಿತ ಈಗಾಗಲೇ ಕಟ್ಟೆಚ್ಚರ ವಹಿಸಿದೆ. ನದಿ ತಟದಲ್ಲಿನ ಮನೆಗಳ ನಿವಾಸಿಗಳಿಗೆ ಎಚ್ಚರಿಕೆ ನೀಡಿದೆ.

Advertisement

ಅರಂತೋಡು, ಕಲ್ಲುಗುಂಡಿ, ಸಂಪಾಜೆ ಗಂಜಿ ಕೇಂದ್ರಕ್ಕೆ ತಾ|ನ ಹಲವಾರು ಸಂಘ-ಸಂಸ್ಥೆಗಳು ಸಹಾಯದ ಹಸ್ತ ಚಾಚಿವೆ. ನೂರಾರು ಮಂದಿ ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ತಾ|ನ ಅಧಿಕಾರಿಗಳು ಸ್ಥಳದಲ್ಲಿಯೇ ಬೀಡುಬಿಟ್ಟಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next