Advertisement

ದಲಿತ ಸಂಘಟನೆಗಳು ಒಗ್ಗೂಡಿದಲ್ಲಿ ಹೋರಾಟಕ್ಕೆ ಶಕ್ತಿ

07:43 AM Mar 04, 2019 | |

ಗೌರಿಬಿದನೂರು: ಜಲತಜ್ಞ ಕೆ.ನಾರಾಯಣ ಸ್ವಾಮಿಯವರು ದೀನದಲಿತರ, ದಮನಿತರ ಧ್ವನಿಯಾಗಿ ಸಮಾನತೆಗಾಗಿ ಬಡವರ ಶಿಕ್ಷಣಕ್ಕಾಗಿ ಶ್ರಮಿಸಿದವರು ಎಂದು ಬಾಗೇಪಲ್ಲಿಯ ಗೂಳೂರು ನಿಡುಮಾಮಿಡಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ವೀರಭದ್ರ ಚನ್ನ ಮಲ್ಲ ದೇಶಿಕೇಂದ್ರ ಮಹಾಸ್ವಾಮಿಹೇಳಿದರು.

Advertisement

ಇತ್ತೀಚೆಗೆ ನಿಧನರಾದ ಜಲತಜ್ಞ ಹಾಗೂ ನಿವೃತ್ತ ಜಂಟಿ ನಿರ್ದೇಶಕರಾಗಿದ್ದ ಪ್ರೊ.ಕೆ.ನಾರಾಯಣಸ್ವಾಮಿ ಅವರಿಗೆ ಗೌರಿಬಿದನೂರು ನಗರದ ಡಾ.ಎಚ್‌. ನರಸಿಂಹಯ್ಯ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ನಡೆಕಾರನಿಗೆ ನುಡಿ ನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ನ್ಯಾಯಾಧೀಶ ವಿ.ಹನುಮಂತಪ್ಪ ಮಾತನಾಡಿ, ಕೆ.ರಾಯಣಸ್ವಾಮಿ ಸ್ವಾಮಿಯವರು ಅಂಬೇಡ್ಕರ್‌ ಅವರ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ದಲಿತರ, ಶೋಷಿತರಿಗೆ ಶಿಕ್ಷಣ ಸಮಾನತೆಗಾಗಿ ನಿರಂತರ ಹೋರಾಟ ನಡೆಸಿದರು.

ದಲಿತರಿಗೆ ಶಿಕ್ಷಣ ನೀಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು ಎಂದರು. ದಲಿತ ಸಾಹಿತಿ ದೇವನೂರು ಮಹಾದೇವ ಅವರು ಮಾತನಾಡಿ, ದಶಕಗಳ ಒಡನಾಡಿಯಾಗಿದ್ದ ನಾರಾಯಣ ಸ್ವಾಮಿ, ಅವರ ದಿಗಂಬರ ಕವಿತೆಗಳು, ಕೃತಿಯನ್ನು ಓದುವ ಮೂಲಕ ನನಗೆ ಆತ್ಮೀಯರಾಗಿದ್ದರು ಎಂದರು.

ಕೆ.ನಾರಾಯಣ ಸ್ವಾಮಿ ಅವರ ಶಿಷ್ಯ ದಲಿತ ಮುಖಂಡ ಎಂ ವೆಂಕಟೇಶ್‌,ಪ್ರಗತಿಪರ ಚಿಂತಕ ಪ್ರೊ.ಬಿ.ಗಂಗಾಧರ ಮೂರ್ತಿ, ಕಾರ್ಯಕ್ರಮದಲ್ಲಿ ಸಾಹಿತಿ ಕೋಟಗಾನಹಳ್ಳಿ ರಾಮಯ್ಯ, ಸಿ.ಎಂ. ಮುನಿಯಪ್ಪ, ಪ್ರಗತಿಪರ ಚಿಂತಕ ಎನ್‌. ರಮೇಶ್‌ ಸೇರಿದಂತೆ ಅನೇಕರು ಕೆ. ನಾರಾಯಣ ಸ್ವಾಮಿ ಅವರ ಒಡನಾಟದ ಬಗ್ಗೆ ಮಾತನಾಡಿದರು.

Advertisement

ಹಿಂದುಳಿದ ವರ್ಗಗಳ ಆಯೋಗ ಮಾಜಿ ಅಧ್ಯಕ್ಷ ಸಿ.ಎಸ್‌.ದ್ವಾರಕನಾಥ್‌ ಮಾತನಾಡಿದರು.ಜಿಪಂ ಅಧ್ಯಕ್ಷ ಎಚ್‌ .ವಿ.ಮಂಜು ನಾಥ್‌, ವಾಲ್ಮೀಕ ನಾಯಕ ಸಂಘದ ಅಧ್ಯಕ್ಷ ಬಾಬಣ್ಣ, ಆರ್‌. ಅಶೋಕ್‌ ಕುಮಾರ್‌, ಪಿಚ್ಚಳ್ಳಿ ಶ್ರೀನಿವಾಸ್‌, ಮಾನಸ ಆಸ್ಪತ್ರೆ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ.ಶಶಿಧರ್‌ ಮುನಿರೆಡ್ಡಿ, ಲಕ್ಷ್ಮೀನಾರಾ ಯಣ, ಕೆ.ನಂಜುಂಡಪ್ಪ, ಸೋಮಯ್ಯ, ಚನ್ನಪ್  ನರಸಿಂಹಮೂರ್ತಿ, ಪಿ.ಜಿ.ವಿ.ಗಂಗಪ್ಪ, ನಾಗರಾಜಪ್ಪ, ವೆಂಕಟಸ್ವಾಮಿ, ವಿ. ನಾಗರಾಜು,ನಾರಾಯಣಸ್ವಾಮಿ ಅವರ ಪುತ್ರಿ ಎಚ್‌.ಎನ್‌.ಪದ್ಮ, ಕೆ.ಎಲ್‌.ವೇಣು ಗೋಪಾಲ್‌ ಇದ್ದರು. ದಲಿತ ಮುಖಂಡ ಸಿ.ಜಿ.ಗಂಗಪ್ಪ ಸ್ವಾಗತಿಸಿ ಡಾ.ಕೆ. ಪಿ.ನಾರಾಯಣಪ್ಪ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next