Advertisement
ಸಿದ್ದರಾಮಯ್ಯ ಎಂಬ ಶಕ್ತಿಯೇ ಅದ್ಭುತ. ಕೆಲವೇ ಕೆಲವರು ರಾಜಕೀಯವಾಗಿ ಅವರನ್ನು ವಿರೋಧಿಸಿದರೂ ಅಂತರಾಳಲ್ಲಿ ಪಕ್ಷಾತೀತವಾಗಿ ಗೌರವಿಸುವ, ಆದರದಿಂದ ಕಾಣುವ ದೊಡ್ಡ ಪಡೆಯೇ ನಾಡಿನಲ್ಲಿದೆ.
ಇಂತಹ ನಾಯಕರು, ನಮ್ಮ ಬಾದಾಮಿ ಕ್ಷೇತ್ರದ ಶಾಸಕರಾಗಿದ್ದರು ಎಂಬುದು ನಮಗೆಲ್ಲ ದೊಡ್ಡ ಹೆಮ್ಮೆ ಮತ್ತು ಗೌರವ ತಂದಿತ್ತು. ಆದರೆ, ಬಾದಾಮಿ ಶಾಸಕರಾಗಿದ್ದಾಗಲೇ ನಾಡಿನ ಮುಖ್ಯಮಂತ್ರಿ ಆಗಬೇಕೆಂಬ ನಮ್ಮ ಬಯಕೆ ಈಡೇರದಿದ್ದರೂ, ಬಾಗಲಕೋಟೆ ಜಿಲ್ಲೆಯ ಬಗ್ಗೆ, ಬಾದಾಮಿ ಕ್ಷೇತ್ರದ ಬಗ್ಗೆ ಅವರಿಗೆ ಅತೀವ ಕಾಳಜಿ. ಕೇವಲ ಬಾದಾಮಿ ಅಷ್ಟೇ ಅಲ್ಲ, ಕರುನಾಡಿನ ಪ್ರತಿ ಹಳ್ಳಿ, ನಗರ-ಪಟ್ಟಣಗಳ ಸಮಗ್ರ ಮಾಹಿತಿ, ಕುಂದು-ಕೊರತೆ ಆಲಿಸುವ ಹೃದಯವಂತರವರು.
Related Articles
Advertisement
ಮಾತು ತಪ್ಪದ ಮಹಾನ್ ನಾಯಕ: ಸಿದ್ದರಾಮಯ್ಯ ಅವರು ಆಗದೇ ಇರುವುದನ್ನು ಮಾತಾಡಲ್ಲ. ಕೊಟ್ಟ ಮಾತು ತಪ್ಪಿದ್ದು ಅವರ ರಾಜಕೀಯ ಜೀವನದಲ್ಲಿಯೇ ಇಲ್ಲ. ಇದನ್ನು ಪ್ರಸ್ತುತ 5 ಗ್ಯಾರಂಟಿ ಯೋಜನೆಗಳೇ ಸಾರಿ ಹೇಳುತ್ತವೆ. ಮೊನ್ನೆಯ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನಾಡಿನ ಜನ, ಸಿದ್ದರಾಮಯ್ಯ ಅವರ ಮೇಲೆ ಹಾಗೂ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಟ್ಟು, ಸ್ಪಷ್ಟ ಬಹುಮತದ ಸರಕಾರ ರಚನೆಗೆ ಕಾರಣರಾದರು. ಜನರಿಗೆ ಕೊಟ್ಟ ಮಾತಿನಂತೆಯೇ ನಡೆದುಕೊಳ್ಳುತ್ತಿದ್ದಾರೆ. ಕನ್ನಡದ ಕಟ್ಟಾಳು: ಸಿದ್ದರಾಮಯ್ಯ ಅವರಿಗೆ ಕನ್ನಡ ಭಾಷೆ-ಸಂಸ್ಕೃತಿಯ ಬಗ್ಗೆ ಅಪಾರ ಪ್ರೀತಿ-ಗೌರವ ಕೂಡ. ಕನ್ನಡ ಭಾಷೆಯ ಮೇಲೂ ಅಷ್ಟೇ ಹಿಡಿತ ಕೂಡ ಹೊಂದಿದವರು. ಬಾಲ್ಯದಲ್ಲೇ ಕಲಿತ ಕನ್ನಡ ವ್ಯಾಕರಣವನ್ನು ಇಂದಿಗೂ ಮರೆಯದವರು. ಇಂತಹ ಕನ್ನಡದ ಕಟ್ಟಾಳು, ನಾಡಿನ ಮುಖ್ಯ ಮಂತ್ರಿಯಾಗಿರುವುದು ಸಮಸ್ತ ಕನ್ನಡಿಗರಿಗೂ ಹೆಮ್ಮೆ.
ಆರ್ಥಿಕ ಸಮತೋಲನದ ತಜ್ಞ: ಡಿಸಿಎಂ, ಸಿಎಂ ಆಗಿ ಅವರು ಈವರೆಗೆ ಮಂಡಿಸಿದ ಬಜೆಟ್‌ಗಳಲ್ಲಿ ನಾಡಿನ ಸಮಗ್ರ ಅಭಿವೃದ್ಧಿ, ಬಡವರ ಪರವಾದ ಯೋಜನೆಗಳು, ಅನ್ನ, ಆರೋಗ್ಯ, ಶಿಕ್ಷಣ, ಮೂಲ ಭೂತ ಸೌಲಭ್ಯ ಹೀಗೆ ಪ್ರತೀ ಕ್ಷೇತ್ರಗಳಿಗೂ ಆದ್ಯತೆ ಕೊಟ್ಟಿದ್ದಾರೆ. ರಾಜ್ಯಕ್ಕೆ ಆರ್ಥಿಕ ಹೊರೆ ಮಾಡದ ಆಯವ್ಯಯ ಮಂಡನೆ ಅವರ ಹಿರಿಮೆ.ಇಂತಹ ಸಮಾಜವಾದಿ, ಸಮಾಜಮುಖೀ ನಾಯಕರನ್ನು ಪಡೆದ ನಾವೇ ಧನ್ಯರು. ನಮ್ಮ ನಾಯಕರು ಇಂದು 75 ವರ್ಷ ಪೂರೈಸಿ, 76ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅವರಿಗೆ ದೇವರು ಆಯುಷ್ಯ, ಆರೋಗ್ಯ, ನಾಡಿನ ಸಮಗ್ರ ಅಭಿವೃದ್ಧಿಗೆ ಮತ್ತಷ್ಟು ಶಕ್ತಿ ಕೊಡಲೆಂದು ಹೃದಯಂತರಾಳದಿಂದ ಹಾರೈಸುತ್ತೇನೆ.