Advertisement

ಗಾಲ್ಫ್ ಕ್ಲಬ್‌ನಲ್ಲಿ ಹಕ್ಕಿಗಳ ಕಲರವ

01:37 PM May 07, 2019 | Suhan S |

ಭಟ್ಕಳ: ತಾಲೂಕಿನ ಕಾಯ್ಕಿಣಿ ಬಳಿ ಹಿರಿಯ ಉದ್ಯಮಿ ಆರ್‌ಎನ್‌ ಶೆಟ್ಟಿ ನಿರ್ಮಿಸಿರುವ ಗಾಲ್ಫ್ ಕ್ಲಬ್‌ನಲ್ಲಿ ಬಗೆಬಗೆಯ ಹಕ್ಕಿಗಳ ಕಲರವ ಜೋರಾಗಿದೆ.

Advertisement

ದಶಕದ ಹಿಂದೆ ಉದ್ಘಾಟನೆಗೊಂಡ ಆರ್‌ಎನ್‌ಎಸ್‌ ಗಾಲ್ಫ್ ಕ್ಲಬ್‌ ಆವರಣ ಬೆಳಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಸಂಪೂರ್ಣ ಹಕ್ಕಿಗಳಿಂದಲೇ ತುಂಬಿರುತ್ತದೆ. ನವಿಲುಗಳು, ಬೆಳ್ಳಕ್ಕಿ, ಕೊಕ್ಕರೆ, ಗಿಡುಗ, ಮೈನಾಹಕ್ಕಿ, ಕೋಗಿಲೆಗಳು ಇನ್ನೂ ಹಲವಾರು ಜಾತಿಯ ಹಕ್ಕಿಗಳ ತಾಣವಾಗಿದೆ. ದೂರದ ಊರುಗಳಿಂದ, ನಗರ ಪ್ರದೇಶಗಳಿಂದ ಬರುವ ಪ್ರವಾಸಿಗರಿಗೆ ಹಕ್ಕಿಗಳನ್ನು ನೋಡುವುದೇ ಒಂದು ಸಂಭ್ರಮ. ಹಲವರು ಈ ಗಾಲ್ಫ್ ಅತಿಥಿ ಗೃಹಕ್ಕೆ ಹಕ್ಕಿಗಳ ಕಲರವವನ್ನು ಸವಿಯಲೆಂದೇ ಆಗಮಿಸುತ್ತಾರೆ.

ಬೆಳಗ್ಗೆಯ ಆರು ಗಂಟೆಯ ಸುಮಾರು ಗಾಲ್ಫ್ ಕ್ಲಬ್‌ ಕಡೆಗೆ ಬಂದರೆ ನೂರಾರು ನವಿಲುಗಳು ತಮ್ಮ ಮೇವನ್ನು ಅರಸುತ್ತಿರುತ್ತವೆ. ನವಿಲುಗಳು ನೃತ್ಯ ಮಾಡಲು ಕೂಡಾ ಇದೇ ಸಮಯವನ್ನು ಆರಿಸಿಕೊಳ್ಳುವುದರಿಂದ ಅದನ್ನು ನೋಡುವುದೇ ಚೆಂದ. ಇನ್ನು ಬೆಳ್ಳಕ್ಕಿಗಳು ಕೂಡಾ ಸಾಕಷ್ಟು ಸಂಖ್ಯೆಯಲ್ಲಿರುವುದರಿಂದ ಬೇರೆ ಬೇರೆ ಹಕ್ಕಿಗಳ ಕಲರವ ಕಿವಿಗೆ ಇಂಪನ್ನು ಕೊಟ್ಟರೆ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ಸಂಜೆಯ ಸಮಯವಂತೂ ನವಿಲುಗಳ ನೃತ್ಯ ನೋಡುವುದೇ ಚಂದ. ನೂರಾರು ಸಂಖ್ಯೆಯಲ್ಲಿ ಬರುವ ನವಿಲುಗಳು ತಮ್ಮಷ್ಟಕ್ಕೆ ತಾವೇ ಸ್ವಚ್ಛಂದವಾಗಿ ವಿಹರಿಸುತ್ತಾ ತಮಗಾಗಿಯೇ ಹಾಕಲಾದ ಕಾಳುಗಳನ್ನು ಹೆಕ್ಕಿ ಹೆಕ್ಕಿ ತಿನ್ನುತ್ತಿರುತ್ತವೆ. ಹಕ್ಕಿಗಳ ಕಲರವ ಆರ್‌.ಎನ್‌.ಎಸ್‌. ಗಾಲ್ಫ್ ಕ್ಲಬ್‌ನ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಈ ಕ್ಲಬ್‌ ಈಗ ದಶಮಾನೋತ್ಸವದ ಹೊಸ್ತಿಲಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next