ಹೊಸದಿಲ್ಲಿ: ಶನಿವಾರ ಸಂಜೆ ತಣ್ಣನೆಯ ಗಾಳಿ ಬೀಸುವ ಹೊತ್ತು… ದಿಲ್ಲಿಯ ಆಗಸದಲ್ಲಿ ಬಣ್ಣ ಬಣ್ಣದ ಚಿತ್ತಾರಗಳು ಮೂಡಿದ್ದವು, ಸಾವಿರಾರು ಡ್ರೋನ್‌ಗಳು ಬಾನಂಗಳದಲ್ಲಿ ಮಿಂಚುಹುಳಗಳಂತೆ ಮಿಂಚುತ್ತಿದ್ದವು, ಬೆಳಕಿನ ಬಿಂದುಗಳು ನಾನಾ ರೂಪಗಳನ್ನು ಪಡೆದು ನೆರೆದವರಲ್ಲಿ ಮಿಂಚಿನ ಸಂಚಾರ ಮೂಡಿಸುತ್ತಿದ್ದವು…
ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸುತ್ತಿರುವ ಈ ವರ್ಷ ದಿಲ್ಲಿಯ ವಿಜಯ್‌ಚೌಕ್‌ನಲ್ಲಿ ಶನಿವಾರ ನಡೆದ “ಬೀಟಿಂಗ್ ದಿ ರಿಟ್ರೀಟ್’ನಲ್ಲಿ ಕಂಡುಬಂದ ಮನಮೋಹಕ ದೃಶ್ಯಾವಳಿಗಳಿವು.
ಇದನ್ನೂ ಓದಿ:ಕಾವೇರಿ ಕಾಲಿಂಗ್: ಕಳೆದ ಎರಡು ವರ್ಷಗಳಲ್ಲಿ 2.1 ಕೋಟಿ ಗಿಡ ನೆಟ್ಟರು
ಇದೇ ಮೊದಲ ಬಾರಿಗೆ “ಅಬೈಡ್ ವಿತ್ ಮಿ’ ಹಾಡಿಗೆ ಕೊಕ್ ನೀಡಲಾಗಿತ್ತು. ಅದರ ಬದಲಿಗೆ “ಏ ಮೇರೆ ವತನ್ ಕೆ ಲೋಗೋ’ ಹಾಡು ಅನುರಣಿಸಿತು. ಮೇಕ್ ಇನ್ ಇಂಡಿಯಾ ಥೀಮ್‌ನಡಿ ಕಾರ್ಯಕ್ರಮ ನಡೆಯಿತು. 10 ನಿಮಿಷಗಳ ಕಾಲ ಸಾವಿರ ಡ್ರೋನ್‌ಗಳ ಶೋ ನಡೆಯಿತು. ಈ ಮೂಲಕ ಪ್ರಸಕ್ತ ವರ್ಷದ ಗಣರಾಜ್ಯೋತ್ಸವಕ್ಕೆ ವರ್ಣರಂಜಿತ ತೆರೆಬಿದ್ದಿದ್ದು, ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ನಿರ್ಗಮನ ಪಥಸಂಚಲನಕ್ಕೆ ಸಾಕ್ಷಿಯಾದರು.