Advertisement

ದೊಡ್ಡಬಾಣಗೆರೆ ಸರ್ಕಾರಿ ಪ್ರೌಢಶಾಲೆಗೆ ಬಣ್ಣದ ಮೆರಗು

04:06 PM Apr 17, 2021 | Team Udayavani |

ಬರಗೂರು: ಸರ್ಕಾರಿ ಶಾಲೆಗಳೆಂದರೆ ತಾತ್ಸಾರಮನೋಭಾವನೆಯಿಂದ ಕೇವಲ ವಿದ್ಯಾಭ್ಯಾಸಕ್ಕೆಮಾತ್ರ ಸೀಮಿತಗೊಳಿಸಿದ ವಿದ್ಯಾರ್ಥಿಗಳನ್ನುಕಾಣುತ್ತಿದ್ದೇವೆ. ಆದರೆ, ಇಲ್ಲೊಂದು ಅಚ್ಚರಿ ಸಂಗತಿಎಂದರೆ ಸರ್ಕಾರಿ ಪ್ರೌಢಶಾಲೆಗೆ ಸುಣ್ಣ,ಬಣ್ಣಗಳೊಂದಿಗೆ ಜನಪದ ಸೊಗಡಿನ ಚಿತ್ತಾರಗಳಸುಂದರ ರೂಪ ನೀಡಿ, ಮಾದರಿ ಶಾಲೆಯಾಗಿಮಾರ್ಪಡಿಸಿದ ದೊಡ್ಡಬಾಣಗೆರೆ ಗ್ರಾಮದ ಕ್ಷೇತ್ರಕ್ಷಮತೆ ತಂಡದ ಹಳೇ ವಿದ್ಯಾರ್ಥಿ ಯುವಕರಕಾರ್ಯವೈಖರಿ ಮೆಚ್ಚಲೇ ಬೇಕಾಗಿದೆ.

Advertisement

ಶಿರಾ ತಾಲೂಕಿನ ಆಂಧ್ರ ಗಡಿ ಭಾಗದದೊಡ್ಡಬಾಣಗೆರೆ ಸರ್ಕಾರಿ ಪ್ರೌಢಶಾಲೆ ಆಂಧ್ರ ಮತ್ತುರಾಜ್ಯದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣನೀಡುವ ಮೂಲಕ ಸರ್ಕಾರಿ ಶಾಲೆಯಲ್ಲಿಯೂಪ್ರತಿಷ್ಠಿತ ಖಾಸಗಿ ಶಾಲೆಗಳಂತೆ ಮಾದರಿ ಶಿಕ್ಷಣನೀಡುತ್ತೇವೆ ಎಂಬುದಕ್ಕೆ ಸತತವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫ‌ಲಿತಾಂಶದಾಖಲಿಸಿಕೊಂಡು ಬಂದಿರುವುದು ಶಿಕ್ಷಣದಗುಣಮಟ್ಟವನ್ನು ಸಾಕ್ಷಿಕರಿಸುತ್ತದೆ.

ನಾನು ಓದಿದ ಶಾಲೆಗೆ ನನ್ನದೊಂದು ಸೇವೆ:ಶಾಸಕ ಡಾ.ಸಿ.ಎಂ.ರಾಜೇಶ್‌ ಗೌಡ ಹಾಗೂ ಡಾ.ತೇಜಸ್ವಿನಿ ರಾಜೇಶ್‌ಗೌಡ ಸಹಭಾಗಿತ್ವದಲ್ಲಿ ಜನಸೇವೆಗೆ ಸಿದ್ಧವಾಗಿರುವ ಕ್ಷೇತ್ರಕ್ಷಮತೆ ತಂಡದಬಹುತೇಕ ಯುವಕರು ದೊಡ್ಡಬಾಣಗೆರೆ ಸರ್ಕಾರಿಶಾಲೆಯಲ್ಲಿ ಕಲಿತು ಉತ್ತಮ ಸ್ಥಾನಮಾನದಲ್ಲಿದ್ದಾರೆ.

ಇಂತಹ ಶಾಲೆಗೆ ಸೇವೆ ಮಾಡಬೇಕೆಂಬಉದ್ದೇಶದಿಂದ ಶಾಲೆಗೆ ಜನಪದ ಪರಂಪರೆ,ವಿದ್ಯಾರ್ಥಿಗಳಲ್ಲಿ ದೇಶ ಭಕ್ತಿ ಮೂಡಿಸುವ ದೇಶಪ್ರೇಮಿಗಳ ಚಿತ್ತಾರ, ತಂತ್ರಜ್ಞಾನ ಕ್ಷೇತ್ರದ ಮಾಹಿತಿ,ಪರಿಸರ ಕಾಳಜಿ ಮಹತ್ವ ಸೇರಿದಂತೆ ಆಕರ್ಷನೀಯಬಣ್ಣದ ಚಿತ್ತಾರ ಶಾಲೆಗೆ ಹೊದಿಸಿರುವುದುಶಾಲೆಯ ಶೈಕ್ಷಣಿಕ ಮೆರಗಿಗೆ ಕಳಸವಿಟ್ಟಂತಾಗಿದೆ.3.20 ಲಕ್ಷ ರೂಪಾಯಿ ವೆಚ್ಚದಲ್ಲಿ 14 ಕೊಠಡಿಗಳಿಗೆನುರಿತ ಕಲಾವಿದರು, ಸ್ವಯಂ ಆಸಕ್ತಿಯುಳ್ಳಯುವಕರ ತಂಡ 2 ದಿನಗಳಲ್ಲಿ ಬಣ್ಣದ ಚಿತ್ತಾರಮೂಡಿಸಿ ಮಾದರಿ ಸರ್ಕಾರಿ ಶಾಲೆ ಮಾಡಿದಕ್ಷೇತ್ರ ಕ್ಷಮತೆ ತಂಡದ ಕಾರ್ಯ ವೈಖರಿಗೆ ಜನಮೆಚ್ಚುಗೆ ಗಳಿಸಿದೆ.ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವೈ.ಶಾಂತಪ್ಪ, ಮಾತನಾಡಿ, ಸೇವೆ ಮಾಡುವ ದೃಷ್ಟಿಹೊಂದಿರುವ ಯುವಕ ತಂಡದೊಂದಿಗೆ ಕ್ಷೇತ್ರಕ್ಷಮತೆ ಧ್ಯೇಯ ವಾಕ್ಯದೊಂದಿಗೆ ಸ್ವಂತ ವೆಚ್ಚದಲ್ಲಿಸಮಾಜಮುಖೀ ಚಿಂತನೆಯೊಂದಿಗೆ ಮುನ್ನಡೆಯುತ್ತಿರುವ ಶಾಸಕ ರಾಜೇಶ್‌ಗೌಡ ಕಾರ್ಯದಕ್ಷತೆಇತರರಿಗೆ ಮಾದರಿ.

ಸಮಾಜಕ್ಕೆ ಭವಿಷ್ಯದ ಪ್ರಜೆಗಳನ್ನು ಕೊಡಿಗೆಯಾಗಿ ನೀಡುವ ಸರ್ಕಾರಿಶಾಲೆಗಳು ಭವ್ಯವಾಗಿದ್ದರೆ ಮಕ್ಕಳ ಭವಿಷ್ಯಸುಂದರವಾಗಿ ರೂಪುಗೊಳ್ಳಲಿದೆ ಎಂದರು.

Advertisement

ಸಮಾಜದ ಕಟ್ಟ ಕಡೆಯ ವ್ಯಕ್ತಿಗೂಸರ್ಕಾರದ ಸೌಲಭ್ಯಲಭ್ಯವಾಗಬೇಕೆಂಬ ಉದ್ದೇಶದೊಂದಿಗೆಕ್ಷೇತ್ರಕ್ಷಮತೆ ಅಭಿಯಾನ ಪ್ರಾರಂಭಿಸಿದ್ದೇವೆ.ಗುಣಮಟ್ಟದ ಶಿಕ್ಷಣ ನೀಡುವಂತ ಸರ್ಕಾರಿಶಾಲೆಗಳು ವೈಭವಯುವವಾಗಿರಬೇಕೆಂಬಸದುದ್ದೇಶದೊಂದಿಗೆ ಈ ಶಾಲೆಗೆ ಸುಂದರರೂಪ ನೀಡಿದ್ದೇವೆ. ಶಿರಾ ತಾಲೂಕಿನಲ್ಲಿಮತ್ತಷ್ಟು ಶಾಲೆಗಳನ್ನು ಇದೇ ಮಾದರಿಮಾಡುವ ಗುರಿ ಹೊಂದಲಾಗಿದೆ.

ಡಾ.ಸಿ.ಎಂ.ರಾಜೇಶ್‌ಗೌಡ, ಶಾಸಕ

ವೀರಭದ್ರಸ್ವಾಮಿ ಬರಗೂರು

Advertisement

Udayavani is now on Telegram. Click here to join our channel and stay updated with the latest news.

Next