Advertisement
ಫೆಬ್ರವರಿಯಲ್ಲಿ ನಡೆದ “ಸ್ಟ್ರಾಂಜಾ ಕಪ್’ ಕೂಟದಲ್ಲಿ ಚಿನ್ನದ ಪದಕ ಗೆದ್ದು ಸಂಭ್ರಮಿಸಿದ್ದ ಮೀನಾ ಕುಮಾರಿ ಮೈಸಮ್ ಜರ್ಮನ್ ಕೂಟದ 54 ಕೆಜಿ ವಿಭಾಗದ ಫೈನಲ್‌ನಲ್ಲಿ ಜಯ ಸಾಧಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 2014ರ ಏಶ್ಯನ್ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತೆ ಮತ್ತು 3 ರಾಷ್ಟ್ರೀಯ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದಿರುವ ಮೀನಾ ಕುಮಾರಿ ಫೈನಲ್‌ನಲ್ಲಿ ಥಾಯ್ಲೆಂಡಿನ ಮೆಚೈ ಬುನ್ಯನುಟ್ ಅವರನ್ನು ಸೋಲಿಸಿದರು.
ಸಾಕ್ಷಿ (57 ಕೆಜಿ), ವಿಲಾವೊ ಬಸುಮತರಿ (64 ಕೆಜಿ) ಫೈನಲ್ ಸ್ಪರ್ಧೆಗಳಲ್ಲಿ ಸೋಲುನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಪಿಂಕಿ ರಾಣಿ (51 ಕೆಜಿ), ಪ್ರವೀಣಾ (60 ಕೆಜಿ) ಕಂಚಿನ ಪದಕ ಜಯಿಸಿದರು. ಈ ಮೂಲಕ ಭಾರತ 5 ಪದಕದೊಂದಿಗೆ ಪ್ರತಿಷ್ಠಿತ ಯುರೋಪಿಯನ್ ಕೂಟವನ್ನು ಕೊನೆಗೊಳಿಸಿದೆ. ಹಾಲಿ ಯೂತ್ ವಿಶ್ವ ಚಾಂಪಿಯನ್ ಸಾಕ್ಷಿ ಅವರ ಗೆಲುವಿನ ಓಟಕ್ಕೆ 2 ಬಾರಿಯ ಕಾಮನ್ವೆಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತೆ ಐರ್ಲೆಂಡಿನ ಮೈಕೆಲಾ ವಾಲ್ಸ್ ಬ್ರೇಕ್ ಹಾಕಿದದರು. ಸಾಕ್ಷಿ 5-0 ಅಂತರದಿಂದ ಸೋತು ಬೆಳ್ಳಿ ಪದಕ ಗೆದ್ದರು. ಇಂಡಿಯಾ ಓಪನ್ ಚಿನ್ನದ ಪದಕ ವಿಜೇತೆ ವಿಲಾವೊ ಅತ್ಯುತ್ತಮ ಪ್ರದರ್ಶನ ನೀಡಿಯೂ ಚೀನದ ಚೆಂಗ್ಯು ಯಾಂಗ್ ವಿರುದ್ಧ ಸೋತರು. ಈ ಕೂಟದಲ್ಲಿ ಭಾರತದ 7 ಬಾಕ್ಸರ್‌ಗಳು ಭಾಗವಹಿಸಿದ್ದರು. ಇವರಲ್ಲಿ ಐವರು ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.