Advertisement

ಹಳೆಯಂಗಡಿಯಲ್ಲಿ ಸರಕಾರಿ ಬಸ್ ಗಳ ನಡುವೆ ಅಪಘಾತ: 12 ಮಂದಿ ಪ್ರಯಾಣಿಕರಿಗೆ ಗಾಯ

12:47 PM Oct 05, 2020 | keerthan |

ಹಳೆಯಂಗಡಿ: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಕೆನರಾ ಬ್ಯಾಂಕ್ ಎದುರುಗಡೆ ಸರಕಾರಿ ಬಸ್ಸುಗಳ ನಡುವೆ ಅಪಘಾತ ನಡೆದಿದ್ದು, ಹನ್ನೆರಡು ಜನ ಗಾಯಗೊಂಡ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.

Advertisement

ಉಡುಪಿಯಿಂದ ಮಂಗಳೂರು ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಹಳೆಯಂಗಡಿ ಬಳಿ ಮಂಗಳೂರು ಡಿಪೋ ಸರಕಾರಿ ಬಸ್ಸಿನ (ಕೆ ಎ 19 ಎಫ್ 3376) ಹಿಂಭಾಗಕ್ಕೆ ಉತ್ತರ ಕರ್ನಾಟಕದ ಸರಕಾರಿ ಬಸ್ (ಕೆ17 f19 28) ಢಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ಮಂಗಳೂರು ಡಿಪೋ ಬಸ್ಸು ಹೆದ್ದಾರಿಯಿಂದ ಚರಂಡಿಗೆ ಸರಿದಿದ್ದು, ಸ್ಥಳೀಯ ರಿಕ್ಷಾ ಚಾಲಕ ಯೋಗೀಶ್ ಎನ್ನುವವರ  ತಕ್ಷಣ ಸ್ಥಳಕ್ಕೆ  ಆ್ಯಂಬುಲೆನ್ಸ್ ತರಿಸಿ ಗಾಯಾಳುಗಳು ಅಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದರು, ಗಾಯಾಳುಗಳ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಅಪಘಾತದ ರಭಸಕ್ಕೆ 2 ಬಸ್ಸುಗಳಿಗೆ ಹಾನಿಯಾಗಿದ್ದು, ಸ್ಥಳಕ್ಕೆ ಸುರತ್ಕಲ್ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next