Advertisement

NDA ಗೆದ್ದ ಬಳಿಕ ಕೊಲಿಜಿಯಂ ವ್ಯವಸ್ಥೆ ರದ್ದು: ಉಪೇಂದ್ರ ಕುಶ್ವಾಹ

12:59 AM May 27, 2024 | Team Udayavani |

ಕಾರಕತ್‌: ಎನ್‌ಡಿಎ ಸರಕಾರ ಮತ್ತೆ ಅಧಿಕಾರಕ್ಕೆ ಬರಲಿದ್ದು, ನ್ಯಾಯಾಧೀಶರನ್ನು ನೇಮಿಸುವ ಪ್ರಜಾ ಪ್ರಭುತ್ವ ವಿರೋಧಿ ಕೊಲಿಜಿಯಂ ವ್ಯವಸ್ಥೆಯನ್ನು ರದ್ದುಗೊಳಿ ಸಲಿದೆ ಎಂದು ಮಾಜಿ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಹಾರದ ಕಾರಕತ್‌ನಲ್ಲಿ ಚುನಾವಣ ರ್ಯಾಲಿಯಲ್ಲಿ ಅಮಿತ್‌ ಶಾ ಉಪಸ್ಥಿತಿಯಲ್ಲಿ ಮಾತನಾಡಿದ ಅವರು, ಕೊಲಿಜಿಯಂ ವ್ಯವಸ್ಥೆ ಹಲವು ದೋಷ ಹೊಂದಿದೆ. ಅದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಇದು ದಲಿತರು, ಒಬಿಸಿ ಹಾಗೂ ಮೇಲ್ಜಾತಿಗಳಲ್ಲಿನ ಬಡವರಿಗೆ ಉನ್ನತ ನ್ಯಾಯಾಂಗದಲ್ಲಿ ನ್ಯಾಯಾಧೀಶ ರಾಗುವ ಅವಕಾಶಗಳನ್ನು ಕಸಿದುಕೊಂಡಿದೆ. ನಮ್ಮ ಸುಪ್ರೀಂ ಹಾಗೂ ಹೈಕೋರ್ಟ್‌ನ ಪೀಠಗಳಲ್ಲಿ ಕೆಲವೇ ಕೆಲವು ವಂಶಸ್ಥರು ಪ್ರಾಬಲ್ಯದಲ್ಲಿದ್ದಾರೆ ಎಂದು ಕುಶ್ವಾಹ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next