Advertisement

ತೆಂಗಿನ ಮರವೇರಲು ಕೋರ್ಸ್‌

05:29 AM Oct 07, 2018 | |

ಕೊಟ್ಟಾಯಂ: ಕೇರಳ ಸೇರಿದಂತೆ ತೆಂಗಿನ ಮರಗಳು ಹೆಚ್ಚಾಗಿರುವ ದೇಶದ ಎಲ್ಲಾ ಪ್ರದೇಶಗಳಲ್ಲಿ ಮರವೇರಿ ತೆಂಗಿನಕಾಯಿ ಕೀಳುವುದು ಬಹು ಬೇಡಿಕೆಯ ಕಸುಬು. ಹಾಗಾಗಿ, ಮಹಿಳೆ ಯರನ್ನು ಈ ಕ್ಷೇತ್ರಕ್ಕಾಗಿ ಅಣಿಗೊಳಿಸಿ ಸಲು ಕೊಟ್ಟಾಯಂನ ಅಮಲಗಿರಿಯಲ್ಲಿರುವ “ದ ಬಿಷಪ್‌ ಕುರಿಯಲಚೇರಿ’ (ಬಿಕೆ) ಕಾಲೇಜಿನಲ್ಲಿ ಇದಕ್ಕಾಗಿಯೇ ಒಂದು ಶೈಕ್ಷಣಿಕ ಕೋರ್ಸ್‌ ಆರಂಭಿಸಲು ನಿರ್ಧರಿಸಲಾಗಿದೆ. ಮಹಿಳೆ ಯರ ಜೀವನಕ್ಕೊಂದು ದಾರಿ ಮಾಡಿಕೊಡುವುದೂ ಇದರ ಇನ್ನೊಂದು ಉದ್ದೇಶವಾಗಿದೆ.

Advertisement

ಕೋರ್ಸ್‌ ವೈಶಿಷ್ಟ್ಯತೆ: ಇದೊಂದು ಸರ್ಟಿಫಿಕೇಟ್‌ ಕೋರ್ಸ್‌. ಥಿಯರಿ, ಪ್ರಾಕ್ಟಿಕಲ್‌ ಸೇರಿ ಒಟ್ಟು 30 ಗಂಟೆಗಳ ಬೋಧನಾವಧಿ ಇರಲಿದೆ. ಯಂತ್ರಗಳ ಮೂಲಕ ತೆಂಗಿನ ಮರಗಳನ್ನು ಹತ್ತುವ ಕಲೆಯನ್ನು ಕಲಿಸುವುದರ ಜತೆಗೆ, ತೆಂಗಿನ ಮರಗಳ ಆರೈಕೆಯ ಬಗ್ಗೆಯೂ ತಿಳಿಸಿಕೊಡಲಾಗುತ್ತದೆ. ಬಿಕೆ ಕಾಲೇಜಿನಲ್ಲಿರುವ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌) ಸಹಯೋಗದೊಂದಿಗೆ ಈ ಕೋರ್ಸ್‌ ಶುರುವಾಗಲಿದೆ. ಸದ್ಯಕ್ಕೆ ಪ್ರಾಯೋಗಿಕವಾಗಿ ಈ ಕೋರ್ಸ್‌ ಅನ್ನು ಆರಂಭಿಸಲಾಗುತ್ತಿದೆ. ಅಧಿಕೃತವಾಗಿ ಶುರುವಾದ ಅನಂತರ ಮೊದಲ ಬ್ಯಾಚ್‌ನಲ್ಲಿ ಕನಿಷ್ಠ 100 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡಲು ಕಾಲೇಜು ಆಡಳಿತ ಮಂಡಳಿ ನಿರ್ಧರಿಸಿದೆ.

ಭಾರೀ ಬೇಡಿಕೆ: ಕೇರಳದಲ್ಲಿ ಸದ್ಯದ ಮಟ್ಟಿಗೆ ತೆಂಗಿನ ಮರ ಹತ್ತುವ ನುರಿತ ಕೆಲಸಗಾರರ ಬರವಿದೆ. ಹೀಗಾಗಿ ನುರಿತವರಿಗೆ ಬೇಡಿಕೆ ಜಾಸ್ತಿ. ಇದನ್ನು ಮನಗಂಡ ಕಾಲೇಜಿನ ಆಡಳಿತ ಮಂಡಳಿ ಯುವತಿಯರಿಗೆ ತರಬೇತಿ ನೀಡಿ, ಸ್ವಾವಲಂಬಿಗಳನ್ನಾಗಿಸಲು ಆಲೋಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next