Advertisement

ವಿಶೇಷ ಚೇತನ ಮಕ್ಕಳೊಂದಿಗೆ ಕಾಪು ಕಾಲೇಜಿನ ವಿದ್ಯಾರ್ಥಿಗಳು

03:55 PM Mar 18, 2017 | Team Udayavani |

ಶಿರ್ವ: ಮಾನವೀಯ ಮೌಲ್ಯಗಳು ಮರೆಯಾಗುತ್ತಿರುವ ಕಾರಣ ಸಮಾಜದ ಸ್ವಾಸ್ಥÂ ಹದಗೆಡುತ್ತಿದೆ. ಮಾನವೀಯ ಮೌಲ್ಯಗಳ ವೃದ್ಧಿಯಾದಲ್ಲಿ ಭವಿಷ್ಯದಲ್ಲಿ ಸುಂದರ ಸದೃಢ ದೇಶವನ್ನು ಕಾಣಲು ಸಾಧ್ಯ.ಈ ನಿಟ್ಟಿನಲ್ಲಿ ಕಾಪು ಕಾಲೇಜಿನ ಆಡಳಿತಾಧಿಕಾರಿ ಪ್ರೊ| ವಿ.ಕೆ. ಉದ್ಯಾವರ ಅವರ ಆಶಯದಂತೆ ಕಾಪು ವಿದ್ಯಾ ನಿಕೇತನ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಶಿರ್ವ ಪಾಂಬೂರು ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರದ ವಿಶೇಷ ಚೇತನ ಮಕ್ಕಳ ಶಾಲೆಯ ವಿದ್ಯಾರ್ಥಿಗಳೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾಪು ವಿದ್ಯಾನಿಕೇತನ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಮೇಘನಾ ಹೇಳಿದರು.

Advertisement

ಅವರು ಪಾಂಬೂರು ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರದ ವಿಶೇಷ ಚೇತನ ಮಕ್ಕಳ ಶಾಲೆಗೆ ಕಾಪು ವಿದ್ಯಾನಿಕೇತನ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಭೇಟಿ ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡುತ್ತಿದ್ದರು.ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರ ಶಾಲೆಯ ಆಡಳಿತಾಧಿಕಾರಿ ಜೋಸೆಫ್‌ ನೊರೊನ್ಹಾ ಮಾತನಾಡಿ 135 ವಿಶೇಷ ಚೇತನ ವಿದ್ಯಾರ್ಥಿಗಳು ಶಾಲೆಯಲ್ಲಿ ವಿದ್ಯಾಭ್ಯಾಸದ ತರಬೇತಿ ಪಡೆಯುತ್ತಿದ್ದಾರೆ. ಅದರಲ್ಲಿ 56 ವಿದ್ಯಾರ್ಥಿಗಳು ವಸತಿ ಶಾಲೆಯ ವಿದ್ಯಾರ್ಥಿಗಳು. ರಜಾಕಾಲದಲ್ಲಿ ಕಡ್ಡಾಯವಾಗಿ ಮನೆ ಮಂದಿಯೊಂದಿಗೆ ಕಾಲಕಳೆಯಬೇಕಿರುವ ಈ ವಿಶೇಷ ಮಕ್ಕಳಿಗೆ ಪಾಂಬೂರು ಶಾಲೆಯ ಶಿಕ್ಷಕ ವೃಂದವೇ ಆಸರೆಯಾಗಿದೆ ಎಂದು ಹೇಳಿದರು.

ಮಾನಸ ಕೇಂದ್ರದ ಅಧ್ಯಕ್ಷ ಹೆನ್ರಿ ಮೆನೇಜಸ್‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಚೇತನ ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದವು ಸಂಗೀತ ಕುರ್ಚಿ, ಬಾಲ್‌ಪಾಸ್‌, ನೃತ್ಯ ಸಹಿತ ಇತರ ಆಟೋಟ ಸ್ಪರ್ಧೆಗಳನ್ನು ನಡೆಸಿಕೊಟ್ಟು ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಕಾಲೇಜಿನ ವಿದ್ಯಾರ್ಥಿಗಳು ನೃತ್ಯದ ಮೂಲಕ ವಿಶೇಷ ಚೇತನ ಮಕ್ಕಳನ್ನು ರಂಜಿಸಿದರು. ಹಣ್ಣು ಹಂಪಲು,ಬಿಸ್ಕತ್ತು ಮತ್ತು ಬಿಸಿ ನೀರಿನ ದೊಡ್ಡ ಸ್ಟೀಲ್‌ ಜಾಕ್‌ ಕೊಡುಗೆ‌ಯಾಗಿ ನೀಡಲಾಯಿತು.

ಮಾನಸ ಶಾಲೆಯ ಪ್ರಾಂಶುಪಾಲೆ  ಸಿ| ಅನ್ಸಿಲಾ ಸ್ವಾಗತಿಸಿದರು.ಮಾನಸ ಶಾಲೆಯ ಶಿಕ್ಷಕಿ ಪ್ರೇಮಾ ಕಾರ್ಯಕ್ರಮ ನಿರ್ವಹಿಸಿ, ವಿದ್ಯಾನಿಕೇತನದ ಉಪನ್ಯಾಸಕಿ ದೀಕ್ಷಿತಾ ವಂದಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next