Advertisement

1,145ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ: ವರದಿ ಬಂದಿದ್ದು ನಾಲ್ವರದ್ದು

03:55 PM Nov 18, 2020 | Suhan S |

ಬಾಗೇಪಲ್ಲಿ: ಕೋವಿಡ್‌ ಪರೀಕ್ಷೆ ಫ‌ಲಿತಾಂಶ ಸಕಾಲಕ್ಕೆ ಬಾರದ ಕಾರಣದಿಂದ ಅಂತಿಮ ವರ್ಷದ ಪದವಿಯ 1145 ವಿದ್ಯಾರ್ಥಿಗಳ ಪೈಕಿ ಫ‌ಲಿತಾಂಶ ಬಂದಿರುವ ನಾಲ್ಕು ವಿದ್ಯಾರ್ಥಿಗಳಿಗೆ ಮಾತ್ರ ಪಟ್ಟಣದ ನ್ಯಾಷನಲ್‌ ಕಾಲೇಜಿಗೆ ಪ್ರವೇಶ ಭಾಗ್ಯ ದೊರೆತಿದ್ದು, ಉಳಿದವರಿಗೆ ಕಾಲೇಜು ಪ್ರವೇಶ ಸಿಕ್ಕಿಲ್ಲ ಎಂದು ಪ್ರಾಂಶುಪಾಲಡಾ.ರಾಮಯ್ಯ ತಿಳಿಸಿದ್ದಾರೆ.

Advertisement

ವಾಪಸ್ಸಾದ ವಿದ್ಯಾರ್ಥಿಗಳು: ಸರ್ಕಾರದ ಆದೇಶದಂತೆ ನ.12 ಮತ್ತು 13 ರಂದು ಬಾಗೇಪಲ್ಲಿ ಪಟ್ಟಣದ ನ್ಯಾಷನಲ್‌ ಕಾಲೇಜಿನ ಪ್ರಥಮ, ದ್ವಿತೀಯ ಹಾಗೂ ಅಂತಿಮ ವರ್ಷದ ಒಟ್ಟು 1145 ಪದವಿ ವಿದ್ಯಾರ್ಥಿಗಳಿಗೆ ಕೋವಿಡ್‌ ಪರೀಕ್ಷೆ ಮಾಡಲಾಗಿತ್ತು. ಆದರೆ ಇದುವರೆಗೂ ನಾಲ್ವರ ಫ‌ಲಿತಾಂಶ ನೆಗೆಟಿವ್‌ ಬಂದಿದ್ದು, ಉಳಿದವರ ಫ‌ಲಿತಾಂಶ ಬಾರದ ಕಾರಣ ಮೊದಲ ದಿನ ಕಾಲೇಜಿಗೆ ಆಗಮಿಸಿದ್ದ ಸುಮಾರು250ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಪಸ್‌ ಹೋದರು. ಕಾಲೇಜಿನ ಕೊಠಡಿಗಳ ಒಳ ಮತ್ತು ಹೊರಗೆ ಕ್ರಿಮಿನಾಶಕ ಔಷಧಿ ಸಿಂಪಡಣೆ ಮಾಡಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರಾಂಶುಪಾಲ ರಾಮಯ್ಯ ಮತ್ತು ಉಪಪ್ರಾಂಶುಪಾಲ ಸೋಮಶೇಖರ್‌ ಕಟ್ಟು ನಿಟ್ಟಿನ ಕ್ರಮಕೈಗೊಂಡಿದ್ದಾರೆ.

ವಿದ್ಯಾರ್ಥಿಗಳ ಹರ್ಷ: ಕಳೆದ ಎಂಟು ತಿಂಗಳಿನಿಂದ ಕಾಲೇಜು ಇರಲಿಲ್ಲ. ಆನ್‌ಲೈನ್‌ ವ್ಯವಸ್ಥೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಮ ರ್ಪಕವಾಗಿ ತಲುಪುತ್ತಿರಲಿಲ್ಲ. ವಿದ್ಯುತ್‌ ವ್ಯತ್ಯಯ, ನೆಟ್‌ವರ್ಕ್‌ ಸಮಸ್ಯೆ ಮತ್ತು ಎಲ್ಲರಿಗೂ ಸ್ಮಾರ್ಟ್‌ಫೋನ್‌ಗಳು ಇಲ್ಲದ ಕಾರಣ ಹಾಗೂ ಹಣಕಾಸು ಸಮಸ್ಯೆಯಿಂದ ವಿದ್ಯಾಭ್ಯಾಸ ಬಹುತೇಕ ಕುಂಠಿತವಾಗಿತ್ತು ಎನ್ನಬಹುದು. ಈಗ ಮೊದಲು ಇದ್ದಂತೆ ವ್ಯವಸ್ಥೆ ಮಾಡಲಾಗಿದ್ದು, ಜಡ್ಡುಗಟ್ಟಿದ ಮಾನಸಿಕ ವ್ಯವಸ್ಥೆಯಿಂದ ಈಗ ಸಂತೋಷದಿಂದ ಸ್ನೇತರೊಂದಿಗೆ ಬೆರೆತು, ವ್ಯಾಸಂಗ ಮಾಡುವುದು ಸಂತೋಷವೆನಿಸುತ್ತದೆ ಎಂದು ಕಾಲೇಜಿಗೆ ಆಗಸಿದ್ದ ದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದು, ಸರ್ಕಾರ ತೆಗೆದುಕೊಂಡಿರುವ ನಿರ್ದಾರ ಸ್ವಾಗತಾರ್ಹ ಎಂದಿದ್ದಾರೆ.

ಸರ್ಕಾರದ ಮಾರ್ಗಸೂಚಿ ಪ್ರಕಾರಕಾಲೇಜಿನ ಕೊಠಡಿಗಳಲ್ಲಿ ಕ್ರಿಮಿನಾಶಕ ಔಷಧಿ ಸಿಂಪಡಣೆ, ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿದೆ.ಕೋವಿಡ್‌-19 ವರದಿ ನೆಗೆಟಿವ್‌ ಬಂದವರಿಗೆ ಮಾತ್ರ ಕಾಲೇಜಿನೊಳಗೆ ಪ್ರವೇಶ.-ಡಾ.ರಾಮಯ್ಯ, ಪ್ರಾಂಶುಪಾಲರು, ನ್ಯಾಷನಲ್‌ ಕಾಲೇಜು, ಬಾಗೇಪಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next