Advertisement

ಕಾಲೇಜು ಪ್ರಾಧ್ಯಾಪಕರಿಗೆ ವಾರಕ್ಕೆ40 ತಾಸು ಕಾರ್ಯಭಾರ ಕಡ್ಡಾಯ 

07:43 AM Sep 24, 2017 | |

ಬೆಂಗಳೂರು: ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಪ್ರಾಧ್ಯಾಪಕರು ವಾರದಲ್ಲಿ 40 ತಾಸುಗಳ ಕಾರ್ಯಭಾರ ನಡೆಸಿ, ಅದನ್ನು ಕಡ್ಡಾಯವಾಗಿ ದಿನಚರಿ ಪುಸ್ತಕದಲ್ಲಿ ಬರೆಯಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಸೂಚಿಸಿದೆ.

Advertisement

ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿಯಮದಂತೆ ಸರ್ಕಾರಿ ಪದವಿ ಕಾಲೇಜಿನ ಬೋಧಕರು ವಾರಕ್ಕೆ 40 ತಾಸುಗಳ ಕಾರ್ಯಭಾರ ಮಾಡಬೇಕು. ಆದರೆ, ಪ್ರಾಧ್ಯಾಪಕರು, ಸಹ ಮತ್ತು ಸಹಾಯಕ ಪ್ರಾಧ್ಯಾಪಕರು ನೇರ ಬೋಧನೆ ಮತ್ತು ಪ್ರಾಯೋಗಿಕ ತರಗತಿ ಹೊರತುಪಡಿಸಿ ಬೇರೆ ಯಾವುದೇ ಕಾರ್ಯಭಾರ ನಿರ್ವಹಿಸುತ್ತಿಲ್ಲ ಹಾಗೂ ಅದನ್ನು ಕಾಲೇಜಿನ ವೇಳಾಪಟ್ಟಿ, ಉಪನ್ಯಾಸಕರ ದಿನಚರಿಯಲ್ಲಿ ನಮೂದಿಸುತ್ತಿಲ್ಲ ಎಂಬುದರ ಬಗ್ಗೆ ವಿದ್ಯಾರ್ಥಿಗಳಿಂದ ದೂರು ಬಂದಿದೆ. ಜತೆಗೆ ಪ್ರಾಧ್ಯಾಪಕರು, ಸಹ ಮತ್ತು ಸಹಾಯಕ ಪ್ರಾಧ್ಯಾಪಕರು ಮನೆಪಾಠ (ಟ್ಯೂಟೋರಿಯಲ್‌) ನಡೆಸುತ್ತಿರುವ ಬಗ್ಗೆ ಇಲಾಖೆಯ ಅಧಿಕಾರಿಗಳು ಕಾಲೇಜು ತಪಾಸಣೆ ನಡೆಸಿದ ಸಂದರ್ಭದಲ್ಲಿ  ತಿಳಿದುಬಂದಿದೆ.

ಉಪನ್ಯಾಸಕರು ತೆಗೆದುಕೊಳ್ಳುವ ಟ್ಯೂಟೋರಿಯಲ್‌ ತರಗತಿಗಳ ವಿವರಗಳನ್ನು ಕಾಲೇಜಿನ ವೇಳಾಪಟ್ಟಿ ಹಾಗೂ ಉಪನ್ಯಾಸಕರ ವೈಯಕ್ತಿಕ ವೇಳಾಪಟ್ಟಿಯಲ್ಲಿ ಕಡ್ಡಾಯವಾಗಿ ದಾಖಲಿಸಿಕೊಂಡಿರಬೇಕು. ಈ ಬಗ್ಗೆ ವಿದ್ಯಾರ್ಥಿಗಳಿಗೆ ಮನ್ಸೂಚನೆ ನೀಡಲು ಮಾಹಿತಿಯನ್ನು ನೋಟಿಸ್‌ ಬೋರ್ಡ್‌ನಲ್ಲಿ ಪ್ರಕಟಿಸಬೇಕು ಎಂದು ನಿರ್ದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next