Advertisement

ಪ್ರೀತಿಯ ಕಚಗುಳಿಯಿಡುವ ಹುಚ್ಚುಕೋಡಿ ಮನಸ್ಸು

03:43 PM Jul 04, 2021 | Team Udayavani |

ಹುಚ್ಚುಕೋಡಿ ಮನಸ್ಸು ಅದು ಹದಿನಾರನೆಯ ವಯಸ್ಸು’ ಎಂಬಂತೆ ಈ ಹದಿಹರೆಯದ ವಯಸ್ಸೇ ಹೀಗೆ ಹುಚ್ಚುಕುದುರೆಯ ರೀತಿ ಮನಸ್ಸು ಓಡುತ್ತಿರುತ್ತದೆ,ನೂರಾರು ಕ್ರಶ್ ಗಳು, ಪ್ರಪೋಸ್ ಗಳು ಬರುತ್ತವೆ. ಅದನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವವರಿದ್ದಾರೆ ಕೆಲವರು ಇದರ ಕಡೆ ತಲೆ ಕೆಡಿಸಿಕೊಳ್ಳದೆ ಇರುತ್ತಾರೆ.

Advertisement

ಅದೊಂದು ನಾ ಕಂಡಿರುವಂತ ಅಪರಿಚಿತದಲ್ಲಿ ಪರಿಚಯದ ಕಥೆ. ಒಂದೇ ಪ್ರೀತಿ, ಆದರೇ, ನೋಡುವ ಕಣ್ಣಿಗೆ ಅದು ನೂರಾರು ಮುಖ. ಅಂದು ಮಳೆಗಾಲದಲ್ಲಿ ಪ್ರಾರಂಭವಾದ ಕಾಲೇಜಿನ ಮೊದಲನೆಯ ದಿನ ,ಎಲ್ಲರಿಗೂ ಅವರವರ ಕ್ಲಾಸ್ ಗಳನ್ನು ಹುಡುಕುವ ತವಕ, ಹೊಸ ಹೊಸ ಆಗುವ ಗೆಳೆತನವಿದು. ಕಾಲೇಜಿನ ಯಾವುದೋ ಕ್ಲಾಸ್, ಗೊತ್ತಿಲ್ಲದ ಲೆಚ್ಚರ್ಸ್ ಗಳ ಪರಿಚಯ ಆಗುವ ದಿನವಿದು.

ಆರಂಭ ಅಷ್ಟೇ, ಮುಂಗಾರು ಮಳೆಯ ಸಿಂಚನ ಧರೆಗೆ ಆಗುತ್ತಿತ್ತು. ಒಬ್ಬರನ್ನೊಬ್ಬರು ಪರಿಚಯಿಸಿಕೊಳ್ಳವ ಸಮಯ. ತರಗತಿಯಲ್ಲಿ ಕುಳಿತಾಗ ಕಿಟಕಿಯಿಂದ ಹೊರಗೆ ನೋಡುವುದಕ್ಕೆ ಅದೇನೋ ಮಜಬೂತು. ಆ ಸಮಯದಲ್ಲಿ ಇಬ್ಬರು ಕುಳ್ಳ -ಕುಳ್ಳಿ ಒಂದೇ ಛತ್ರಿಯ ಅಡಿ  ಒಟ್ಟಿಗೆ ಹಾದು ಹೋದರು. ಗುಡ್ ಫ್ರೆಂಡ್ಸ್ ಇರಬೋದು ಎಂದು ನನ್ನ ಗೆಳತಿಯ ಬಳಿ ಹೇಳಿದೆ.

ಇದನ್ನೂ ಓದಿ :   ಇಂಗ್ಲೆಂಡ್ ನಲ್ಲಿ ಭಾರತ ತಂಡಕ್ಕೆ ಸರಣಿ ಜಯಿಸುವ ಉತ್ತಮ ಅವಕಾಶವಿದೆ: ಇಯಾನ್ ಚಾಪೆಲ್

ಹೀಗೆ ಪ್ರತಿನಿತ್ಯವು ಅವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟಿರುವುದನ್ನು ನಾನು ನೋಡಿತ್ತಿರಲಿಲ್ಲ. ಊಟ ಒಟ್ಟಿಗೆ, ಲೈಬ್ರರಿ ,ಕ್ಯಾಂಟೀನ್ ಗಲ್ಲಿ ಎಲ್ಲೆಲ್ಲೂ ಅವರಿಬ್ಬರನ್ನು ನೋಡುತಿದ್ದೇ ಆಗ ತಿಳಿದ ವಿಷಯ ಅವರಿಬ್ಬರು ಪ್ರೇಮಿಗಳು ಎಂದು. ಅವರಿಬ್ಬರನ್ನು ಮಾತನಾಡಿಸಲು ಏನೋ ಒಂತರ ಮುಜುಗರ ಯಾಕೆಂದರೆ ಅವರು ನನಗೆ ಅಪರಿಚಿತರು.

Advertisement

ಕಲರ್ ಡ್ರೆಸ್ ಇರುವಾಗ ಒಂದೇ ಬಣ್ಣದ ಬಟ್ಟೆ ಯನ್ನು ಧರಿಸುತ್ತಿದ್ದರು.ಒಬ್ಬರೊನೊಬ್ಬರು ತುಂಬಾ ನಂಬಿಕೊಂಡು ಅರ್ಥೈಸಿಕೊಂಡು ಇದ್ದರು. ಇದೆ ಅಲ್ವಾ ಪ್ರೀತಿ ಎಂದರೆ.ಎಂಥವಿರಾಗಾದರೂ ಇವರಿಬ್ಬರನ್ನು ನೋಡಿದಾಗ ಪ್ರೀತಿ ಮಾಡಬೇಕು ಎನ್ನಿಸುತ್ತಿದೆ. ಆದರೆ ಇವರಿಬ್ಬರನ್ನು ನೋಡುವುದೇ ಮನಸ್ಸಿಗೆ ಮುದ. ಅದೆಷ್ಟೋ ಸಲ ಜಗಳ ಆಡಿದ್ದನ್ನು ನೋಡಿದ್ದೇನೆ ಮತ್ತೆ ಕೈ ಕೈ ಹಿಡಿದುಕೊಂಡು ಹೋಗೋದು  ನೋಡಿ ದೃಷ್ಟಿ ಕೂಡ ತೆಗೆದಿದ್ದೇನೆ.

ಹಾಗೆ ನೋಡುತ್ತಾ ನೋಡುತ್ತಾ ಕಾಲೇಜಿನ ಕೊನೆಯ ದಿನ  ಸೀನಿಯರ್ಸ್ ಗೆ ರಿಫ್ರೆಷ್ಮೆಂಟ್ ಡೇ ಬಂದೆ ಬಿಟ್ಟಿತು. ಆಗ ಜ್ಯೂನಿಯರ್ಸ್ ಸೀನಿಯರ್ಸ್ ಹೇಗೆಲ್ಲ ರೆಡಿ ಆಗಿದ್ದಾರೆ ಎಂದು ನೋಡುವ ತವಕ, ಆದರೆ ನಾನು ಮಾತ್ರ ಆ ಕುಳ್ಳ -ಕುಳ್ಳಿ ಪ್ರೇಮಿಗಳನ್ನು ಹುಡುಕುತ್ತಿದ್ದೆ. ಕಾಲೇಜಿನ ಮೂಲೆ ಮೂಲೆಯಲ್ಲಿ ಹುಡುಕಿದೆ ಎಲ್ಲಿ ಹುಡುಕಿದರೂ ಇವರಿಬ್ಬರನ್ನು ನಾ ಕಾಣೆ. ಕ್ಯಾಂಟೀನ್, ಪಾರ್ಕ್, ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ ಸೀನಿಯರ್ಸ್ ಗುಂಪುಗಳನ್ನೆಲ್ಲ ಹುಡುಕಿದೆ ಎಲ್ಲೂ ಕಾಣದೆ ಸಪ್ಪೆ ಮೋರೆಯನ್ನು ಕ್ಲಾಸ್ ಅತ್ತ ಕಾಲ್ಕಿತ್ತೆ ಅಷ್ಟರಲ್ಲಿ ಒಂದು ಡಿಪಾರ್ಟ್ ಮೆಂಟ್ ನಲ್ಲಿ ತನ್ನ ಲೆಕ್ಚರ್ಸ್ ಜೊತೆಗೆ    ಅವರಿಬ್ಬರು ಪ್ರೇಮಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು.

ಒಮ್ಮೆಲೆ ನನ್ನ ಸಪ್ಪೆಮೂರೆಯು ಖುಷಿಯೊಳಗೀಡಾಯಿತು.ಹುಡುಗ ಪಂಚೆ ಶರ್ಟ್ ,ಹುಡುಗಿ ಸೀರಿಯನ್ನು ತೊಟ್ಟಿದ್ದಳು.ಇಬ್ಬರು ಕೂಡ ಒಂದೇ ಬಣ್ಣದ ಬಟ್ಟೆಯನ್ನು ಧರಿಸಿ   ನೋಡಲು ವದು-ವರನಂತೆ ಕಾಣುತ್ತಿದ್ದರು.ಏನಾದ್ರು ಆಗಲಿ ಇವತ್ತು ಮಾತ್ರ ಅವರಿಬ್ಬರನ್ನು ಮಾತನಾಡಿಸಲ್ಲೇ ಬೇಕು ಎಂದು ನಿರ್ಧರಿಸಿ ,ಅಲ್ಲೇ ನಿಂತೆ.

ಅವರಿಬ್ಬರು ಡಿಪಾರ್ಟ್ ಮೆಂಟ್ ನಿಂದ ಹೊರಬoದ ಕೂಡಲೇ ಅಲ್ಲೇ ಇದ್ದ ನನಗೆ ಇಬ್ಬರು ಸ್ಮೈಲ್ ಮಾಡಿದರು. ಅವರಿಗೆ ಪ್ರತಿ ಸ್ಪಂದಿಸಿ, ಸೂಪರ್ ಕಾಣುತ್ತಿದ್ದಿರ ಇಬ್ಬರು , ಎಂದು ಹೇಳಿ ದೃಷ್ಟಿ ತೆಗೆದೆ. ಅವರು ಥ್ಯಾಂಕ್ ಯು ಪುಟ್ಟ ಎಂದು ಸಮೈಲ್ ಮಾಡಿ ಅಲ್ಲಿಂದ ತೆರಳಿದರು.

ಅಂದು ನನಗೆ ದೊಡ್ಡ ಅವಾರ್ಡ್ ಅನ್ನೇ ತೆಗೆದು ಕೊಂಡ ರೀತಿಯಲ್ಲಿ ಸಂತೋಷವಾಯಿತು. ನನ್ನ ಗೆಳತಿಯಲ್ಲೂ ಪುಳಕದಿಂದ , ಸಂತಸದಿಂದ ಕೊನೆಗೂ ಮಾತನಾಡಿಸೇ ಬಿಟ್ಟೆ ಎಂದು ಹೇಳಿದೆ.

ಕೊನೆಗೂ ಸೀನಿಯರ್ಸ್  ಕಾಲೇಜಿನಿಂದ ಬೀಳ್ಕೊಡುವ ದಿನ ಆಯಿತು. ಅಂದು ಸಂಜೆ ಆ ಅಪರಿಚಿತವಾದ ಪರಿಚಯದ ಜೋಡಿಗೆ ‘ಆಲ್ ದ ಬೆಸ್ಟ್ ಫಾರ್ ಯುವರ್ ಫ್ಯೂಚರ್’ ಎಂದು ಹೇಳಿ ಮುಗುಳ್ನಗುತ್ತ ಈಚೆ ಬರಬೇಕಾದರೆ ನನಗೆ ತಿಳಿಯದಂತೆ ಕಣ್ಣಂಚು ಒದ್ದೆ ಆಗಿತ್ತು. ಆ ನನ್ನ ಫೇವರಟ್ ಜೋಡಿ ಎಲ್ಲಿದ್ದಾರೆಂದು ಎಂದು ಗೊತ್ತಿಲ್ಲ, ನಾನಾಗ ಅವರನ್ನು ನೋಡಿದಾಗ ಪಡುತಿದ್ದ ಖುಷಿಯನ್ನು ನೆನೆಸಿಕೊಂಡರೆ ಈಗಲೂ ಅವರಿಬ್ಬರು ನಮ್ಮ ಕಾಲೇಜಿನಲ್ಲಿ ಇರಬೇಕಿತ್ತು ಎಂದು ಅನ್ನಿಸುತ್ತದೆ.

ಪ್ರೀತಿ ಎಂದರೇ ಹಾಗೆ ಅಲ್ವಾ..? ಅದು ಅನುಭವಕ್ಕೂ ಚೆಂದ, ನೋಡುವವರಿಗೂ ಕೂಡ ಚೆಂದ. ಪ್ರೀತಿಯ ಮುಸುಕಿನ ಸಣ್ಣ ಸಿಟ್ಟಿನ ಬೈಗಳು, ಐದೇ ಯದು ನಿಮಿಷಕ್ಕೆ ಮಾತಿನಿಂದ ದೂರವಾಗುವ ಸಿಟ್ಟು, ಮತ್ತೆ ಅಷ್ಟೇ ಪ್ರೀತಿಯಿಂದ ‘ನೀನೇ ಬೇಕು’ ಭಾವದಪ್ಪುಗೆ ಎಷ್ಟು ಚೆಂದ. ಚೆಂದಕ್ಕಿಂತ ಚೆಂದ.

ಹರ್ಷಿತಾ ಹೆಬ್ಬಾರ್

ಎಸ್ ಡಿ ಎಂ ಕಾಲೇಜು ಉಜಿರೆ.

ಇದನ್ನೂ ಓದಿ : ದೇಶಾದ್ಯಂತ ಹಬ್ಬಿರುವ F2P ವಂಚಕರು: ಏನಿದು ಫ್ರಾಡ್ ಟು ಫೋನ್ ನೆಟ್ ವರ್ಕ್ ?

Advertisement

Udayavani is now on Telegram. Click here to join our channel and stay updated with the latest news.

Next