Advertisement

ನಿಗದಿತ ದರಕ್ಕಿಂತ ಹೆಚ್ಚು ನೀರಿನ ಶುಲ್ಕ ಸಂಗ್ರಹ

06:07 PM Feb 11, 2022 | Team Udayavani |

ಇಂಡಿ: 24×7 ಕುಡಿಯುವ ನೀರಿನ ದರವನ್ನು 56 ರೂಪಾಯಿ ಮಾತ್ರ ಪಡೆಯಬೇಕೆಂದು ಪುರಸಭೆಯ ಆದೇಶವಿದ್ದರೂ ಪ್ರತಿ ತಿಂಗಳು 150 ರೂ. ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

Advertisement

ಕಂದಾಯ ಇಲಾಖೆ ಬೆಂಗಳೂರ ಅವರು ಸರಕಾರದ ಮಾರ್ಗಸೂಚಿ ಪ್ರಕಾರ ಅರ್ಥಿಕ ಇಲಾಖೆಯ ನೀಡಿರುವ ಸಹಮತಿಯ ಅನ್ವಯ ಗೃಹ ಸಂಪರ್ಕಕ್ಕೆ ಕುಡಿಯುವ ನೀರಿನ ದರ 56 ರೂ.ಮಾಡಬೇಕೆಂದು 2019ರಲ್ಲಿ ನಿಗದಿಪಡಿಸಿದೆ. ಇದಕ್ಕೆ ಪ್ರತಿಯಾಗಿ ಇಂಡಿಯ ಆಗಿನ ಕಂದಾಯ ಉಪವಿಭಾಗಾಧಿಕಾರಿ ರಾಹುಲ್‌ ಸಿಂಧೆ ಅವರು ನೀರಿನ 56 ರೂ. ನಿಗದಿಪಡಿಸಿ ಆಗಸ್ಟ್‌ 2021ರಂದು ಆದೇಶ ಹೊರಡಿಸಿದ್ದರು. ಆದೇಶ ಪುರಸಭೆಗೆ ಕಳುಹಿಸಿ ಆರು ತಿಂಗಳು ಗತಿಸಿದರೂ ಪುರಸಭೆಯವರು ಇನ್ನೂ ಕುಡಿಯುವ ನೀರಿನ ಶುಲ್ಕ ಪ್ರತಿ ತಿಂಗಳು 150 ರೂ.ತೆಗೆದುಕೊಳ್ಳುತ್ತಿದ್ದಾರೆ.

ಕಂದಾಯ ಉಪವಿಭಾಗಾಧಿಕಾರಿಗಳ ಆದೇಶ ಪಾಲನೆ ಮಾಡದ ಪುರಸಭೆ ಅಧಿಕಾರಿಗಳ ವಿರುದ್ಧ ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು. ನೀರಿನ ದರ ಕಡಿಮೆ ಮಾಡಿ ಬಡ ಜನಾಂಗಕ್ಕೆ ಅನುಕೂಲ ಮಾಡಿಕೊಡಬೇಕು. ಕುಡಿಯುವ ನೀರಿನ ದರ 56 ರೂ. ಮಾಡದಿದ್ದರೆ ಮಾರ್ಚ್‌ 1ರಿಂದ ಧರಣಿ ಸತ್ಯಾಗ್ರಹ ನಡೆಸಲಾಗುವುದು. -ಚಂದ್ರಶೇಖರ ಹೊಸಮನಿ, ತಾಲೂಕಾಧ್ಯಕ್ಷ

ಮಾದಿಗ ದಂಡೋರ ಸಮಿತಿ ಇಂಡಿ. ಸ್ಥಳೀಯ ಪುರಸಭೆಯಿಂದ ನೀರಿನ ದರ 56 ರೂಪಾಯಿ ಮಾಡಬೇಕೆಂದು ರಾಜ್ಯಪತ್ರದಲ್ಲಿ ಸೇರಿಸುವ ಪ್ರಕ್ರಿಯೆ ನಡೆದಿದೆ. ಮಾರ್ಚ್‌ 1ರಿಂದ ದರ ಬದಲಾವಣೆಯಾಗಬಹುದು. -ಕೆ.ಲಕ್ಷ್ಮೀಶ, ಮುಖ್ಯಾಧಿಕಾರಿ ಪುರಸಭೆ ಇಂಡಿ

Advertisement

Udayavani is now on Telegram. Click here to join our channel and stay updated with the latest news.

Next