Advertisement
ಶಿಕ್ಷಣ ಇಲಾಖೆ ಸಹಿತವಾಗಿ ರಾಜ್ಯದ ಎಲ್ಲ ಇಲಾಖೆಗಳ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬಂದಿ ವರ್ಗದವರ ಜಾತಿವಾರು ಮತ್ತು ಪ್ರವರ್ಗವಾರು ಮಾಹಿತಿಯನ್ನು ಒದಗಿಸುವಂತೆ ಆಯೋಗದಿಂದ ಎಲ್ಲ ಇಲಾಖೆಗೂ ಪತ್ರ ಬರೆಯಲಾಗಿದೆ. ಅದರಂತೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು ತನ್ನ ವ್ಯಾಪ್ತಿಯಲ್ಲಿರುವ ಹಿಂದುಳಿದ ವರ್ಗಗಳಿಗೆ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಬೋಧಕ, ಬೋಧಕೇತರ ಸಿಬಂದಿಯ ಮಾಹಿತಿ ಸಂಗ್ರಹಕ್ಕೆ ಹಿಂದುಳಿದ ವರ್ಗಗಳ ಆಯೋಗ ಮುಂದಾಗಿದೆ.
ಸರಕಾರಿ ಪದವಿ ಕಾಲೇಜಿನಲ್ಲಿರುವ ವಿದ್ಯಾರ್ಥಿಗಳು ಹಾಗೂ ಅಧಿಕಾರಿ, ಬೋಧಕ, ಬೋಧಕೇತರ ಸಿಬಂದಿ ವರ್ಗದ ಜಾತಿವಾರು ಹಾಗೂ ಪ್ರವರ್ಗವಾರು ಮಾಹಿತಿ ಯನ್ನು ನಿರ್ದಿಷ್ಟ ನಮೂನೆಯಲ್ಲಿ ಅ. 15ರೊಳಗೆ ಸಲ್ಲಿಸ ಬೇಕು. ವಿದ್ಯಾರ್ಥಿಗಳಿಗೆ ಸಂಬಂಧಿಸಿ 2011-12ನೇ ಸಾಲಿನಿಂದ ಈವರೆಗಿನ ಮಾಹಿತಿ ಲಭ್ಯವಿಲ್ಲದೇ ಇರುವುದಿಂದ ಕಾಲೇಜುಗಳಲ್ಲಿ ಲಭ್ಯವಿರುವ ಅಂಕಿ-ಅಂಶಗಳಿಗೆ ಅನುಗುಣ ವಾಗಿ ನಿರ್ದಿಷ್ಟ ಮಾಹಿತಿ ಒದಗಿಸುವಂತೆ ನಿರ್ದೇಶಿಸಿದೆ. ಸಂವಿಧಾನ ಹಾಗೂ ನ್ಯಾಯಾಲಯಗಳ ಆಶಯದಂತೆ ಎಲ್ಲ ಇಲಾಖೆಗಳಿಂದ ಈ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ಆಯೋಗದ ಮೂಲಗಳು ಹೇಳಿವೆ.
Related Articles
Advertisement
ರಾಜ್ಯದ ಯಾವ ಯಾವ ಇಲಾಖೆಯಲ್ಲಿ ಯಾವ ಜಾತಿಯವರು ಎಷ್ಟು ಪ್ರಮಾಣದಲ್ಲಿದ್ದಾರೆ ಎಂಬ ನಿಖರ ಮಾಹಿತಿ ಪಡೆಯುವ ಪ್ರಕ್ರಿಯೆ ಆರಂಭಿಸಿದ್ದೇವೆ. ಮುಂದೆ ಹೇಗೆ ಇದನ್ನು ಬಳಕೆ ಮಾಡಬೇಕು ಎಂಬುದನ್ನು ಯೋಚಿಸಲಿದ್ದೇವೆ.– ಜಯಪ್ರಕಾಶ ಹೆಗ್ಡೆ, ಅಧ್ಯಕ್ಷ , ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ