Advertisement
ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಇದರ ಯೋಜನೆಯಡಿ ಕಾರ್ಕಳ ಪೊಲೀಸ್ ಠಾಣೆ ಬಳಿ ನಿರ್ಮಾಣಗೊಂಡ 92.20 ಕೋ.ರೂ. ವೆಚ್ಚದ ನೂತನ ಪೊಲೀಸ್ ವಸತಿಗೃಹ ಉದ್ಘಾಟಿಸಿ ಅವರು ಮಾತನಾಡಿದರು.
Related Articles
ರಾಜ್ಯದಲ್ಲಿ ಗೃಹ 20-20 ಯೋಜನೆಯಡಿ ಪೊಲೀಸರಿಗೆ 11 ಸಾವಿರ ಮನೆಗಳ ನಿರ್ಮಾಣವಾಗಿದೆ. ಶೇ.48 ಪೊಲೀಸರಿಗೆ ವಸತಿ ನೀಡಿದಂತಾಗಿವೆ. ಅನ್ಯ ರಾಜ್ಯಗಳಿಗೆ ಹೋಲಿಸಿದರೆ ಪೊಲೀಸರಿಗೆ ವಸತಿ ಸೌಲಭ್ಯ ಒದಗಿಸುವಲ್ಲಿ ರಾಜ್ಯ ಅಗ್ರ ಸ್ಥಾನದಲ್ಲಿದೆ. ಪೊಲೀಸ್ ಗೃಹ 20-25 ಯೋಜನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದ್ದು, ರಾಜ್ಯದಲ್ಲಿ 10,400 ಮನೆಗಳು ನಿರ್ಮಾಣವಾಗಲಿವೆ. ಶೇ.64 ರಷ್ಟು ಈಡೇರಲಿದೆ. ಎಪ್ರಿಲ್‌ನಿಂದ ಆರಂಭವಾಗಲಿದ್ದು, ಮುಂದಿನ 5 ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ ಎಂದರು.
Advertisement
ಡ್ರಗ್ ಯಶಸ್ವಿ ನಿಯಂತ್ರಣ ಡ್ರಗ್ಸ್ ವಿರುದ್ಧ ಸಮರ ಸಾರಿದ್ದೇವೆ. 10 ವರ್ಷಗಳಲ್ಲಿ ಎಷ್ಟು ಡ್ರಗ್ಸ್ ಸೀಜ್ ಆಗಿತ್ತೂ ಅಷ್ಟನ್ನು ಕೇವಲ 10 ತಿಂಗಳಲ್ಲಿ ಪತ್ತೆ ಹಚ್ಚಿದ್ದೇವೆ. ಸಿಂಥೆಟಿಕ್ ಡ್ರಗ್ಸ್ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಭಯೋತ್ಪಾದನೆ ಇತ್ಯಾದಿ ಚಟುವಟಿಕೆಗೆ ಇದು ಕಾರಣ ವಾಗುತ್ತಿತ್ತು. ಡಾರ್ಕ್ ವೆಬ್ ಅನ್ನು ಪೊಲೀಸರು ಭೇದಿಸಿದ್ದು, ಗರಿಷ್ಠ ಪ್ರಮಾಣದಲ್ಲಿ ಕೇಸ್ ದಾಖಲಿಸಲಾಗಿದೆ. ವಿದೇಶ ದಿಂದ ಡ್ರಗ್ಸ್ ರಾಜ್ಯಕ್ಕೆ ಬರುವುದು ನಿಯಂತ್ರಣಕ್ಕೆ ಬಂದಿದೆ ಎಂದರು. ಬೆಂಗಳೂರಿನಲ್ಲಿ ಸಮಗ್ರ ಎಫೀಶಿಯಲ್ ಲ್ಯಾಬ್ ಕೇಂದ್ರ ಹೊಂದಿದೆ. ಮುಂದೆ ಮಂಗಳೂರು, ಬೆಳಗಾವಿ ಸೇರಿದಂತೆ 4 ಕಡೆ ಲ್ಯಾಬ್ ತೆರೆಯಲಾಗುವುದು. ಎಲ್ಲ ಜಿಲ್ಲೆಗಳಲ್ಲಿ ಸೈನ್ ಸ್ಟೇಶನ್‌ಗೆ ಸೈಬರ್ ತಜ್ಞರನ್ನು ನೇಮಕಗೊಳಿಸಲಾಗುವುದು. ಸೈಬರ್ ನಿಯಂತ್ರಣ, ಡ್ರಗ್ಸ್ ಪತ್ತೆ ಎಲ್ಲದಕ್ಕೂ ಇದರಿಂದ ಅನುಕೂಲ ವಾಗಲಿದೆ ಎಂದರು. ಅಧ್ಯಕ್ಷತೆ ವಹಿಸಿದ ಶಾಸಕ ವಿ. ಸುನಿಲ್‌ಕುಮಾರ್ ಅವರು ಮಾತನಾಡಿ ಕಾರ್ಕಳ ಅಭಿವೃದ್ಧಿಗೆ ತಾ| ಆಸ್ಪತ್ರೆ, ಶಿಕ್ಷಣಾಧಿಕಾರಿಗಳ ಕಚೇರಿ, ದೇವರಾಜು ಅರಸು ಭವನ, ಗ್ರಂಥಾಲಯ ಹೀಗೆ ಸರಕಾರಿ ಇಲಾಖೆ ಕಟ್ಟಡಗಳ ನಿರ್ಮಾಣ, ಎಣ್ಣೆಹೊಳೆ ಏತ ನೀರಾವರಿ ಯೋಜನೆ ಜತೆಗೆ ಹತ್ತು ಹಲವು ಯೋಜನೆಗಳನ್ನು ಸರಕಾರದಿಂದ ಕಾರ್ಕಳದ ಕಡೆಗೆ ತರುವ ಪ್ರಯತ್ನ ನಡೆಸಿ ದ್ದೇನೆ. ಇನ್ನೂ ಹಲವು ಯೋಜನೆಗಳು ಅನುಷ್ಠಾನದ ಹಂತದಲ್ಲಿವೆ ಎಂದರು. ರಾಜ್ಯ ಗೇರು ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ತಾ.ಪಂ. ಅಧ್ಯಕ್ಷೆ ಸೌಭಾಗ್ಯಾ ಮಡಿವಾಳ, ಪುರಸಭೆ ಅಧ್ಯಕ್ಷೆ ಸುಮಾ ಕೇಶವ್, ಜಿಲ್ಲಾಧಿಕಾರಿ ಐ. ಜಗದೀಶ್, ಜಿ.ಪಂ ಇಒ ನವೀನ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಶ್ಚಿಮ ವಲಯ ಪೊಲೀಸ್ ಮಹಾನಿರ್ದೇಶಕ ದೇವಜ್ಯೋತಿ ಪ್ರಸ್ತಾವನೆಗೈದರು, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ ಸ್ವಾಗತಿಸಿದರು. ವೃತ್ತ ನಿರೀಕ್ಷಕ ಸಂಪತ್‌ಕುಮಾರ್ ವಂದಿಸಿದರು. ನಿರಂಜನ ಜೈನ್ ನಿರೂಪಿಸಿದರು. ನೂತನ ಗೃಹದ ಕೀಗಳನ್ನು ಪೊಲೀಸ್ ರಾಜೇಶ್ ದಂಪತಿಗೆ ಹಾಗೂ ಎಎಸ್‌ಐ ರುಕ್ಮಿಣಿಯವರು ಪ್ರಾಯೋಗಿಕವಾಗಿ ಹಸ್ತಾಂತರಿಸಿದರು. ಗೃಹ ಸಚಿವರಿಗೆ ಪೊಲೀಸ್ ಇಲಾಖೆಯಿಂದ ಗೌರವ ಸಲ್ಲಿಸಲಾಯಿತು. ಸಚಿವರು ಶಿಲಾಫಲಕ ಅನಾವರಣಗೊಳಿಸಿದರು. ಡಿವೈಎಸ್ಪಿ ಭರತ್ ರೆಡ್ಡಿ, ಗ್ರಾಮಾಂತರ ಠಾಣೆ ಎಸ್‌ಐ ತೇಜಸ್ವಿ, ಹೆಬ್ರಿ ಠಾಣೆ ಎಸ್‌ಐ ಸುಮಾ, ಅಧಿಕಾರಿಗಳು, ಪೊಲೀಸ್ ಸಿಬಂದಿ, ಅವರ ಕುಟುಂಬಸ್ಥರು ಉಪಸ್ಥಿತರಿದ್ದರು. ಹೆಬ್ರಿಗೆ ಠಾಣೆ ಬಜೆಟ್‌ನಲ್ಲಿ ಸೇರ್ಪಡೆ
ಶಾಸಕ ವಿ. ಸುನಿಲ್ ಕುಮಾರ್ ಹೆಬ್ರಿ ತಾ|ಗೆ ಪೊಲೀಸ್ ಠಾಣೆ ಹಾಗೂ ಅಗ್ನಿ ಶಾಮಕ ಠಾಣೆ ಬೇಡಿಕೆಯನ್ನು ಸಚಿವರ ಮುಂದಿಟ್ಟರು. ಮನವಿಗೆ ಉತ್ತರಿಸಿದ ಗೃಹ ಸಚಿವರು ಬಜೆಟ್‌ನಲ್ಲಿ ಪ್ರಸ್ತಾವಿಸುವುದಾಗಿ ಹೇಳಿದರು. ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಕೆಲವೊಂದು ಮಾನದಂಡಗಳಿದ್ದು. ಹೆಬ್ರಿ ತಾಲೂಕಿಗೆ ಫಯರ್ ಸಬ್ ಸ್ಟೇಶನ್ ನೀಡುವ ಬಗ್ಗೆ ಭರವಸೆಯಿತ್ತರು. ಶಾಸಕರ ಕೆಲಸ ಕಾರ್ಯಗಳನ್ನು ಸಚಿವರು ಶ್ಲಾಘಿಸಿದರು. 1 ಸಾವಿರ ಪೊಲೀಸ್ ಹುದ್ದೆ ನೇಮಕ
ಪೊಲೀಸ್ ಸಿಬಂದಿ ಕೊರತೆ ನೀಗಿಸಲು ಕಳೆದ ವರ್ಷ 1 ಸಾವಿರ ಪೊಲೀಸ್ ಹುದ್ದೆ ನೇಮಕಗೊಳಿಸ ಲಾಗಿತ್ತು. ಮುಂದಿನ 3 ವರ್ಷದಲ್ಲಿ 16 ಸಾವಿರ ಪೊಲೀಸರ ನೇಮಕಾತಿ ಮಾಡಲಿದ್ದೇವೆ. ಮಹಿಳೆಯರೆ ಶೇ. 25 ಹಾಗೂ ಕ್ರೀಡಾ ಕ್ಷೇತ್ರಕ್ಕೆ ಶೇ.2 ಮೀಸಲಿರಿಸಲಾಗಿದೆ. ನೇಮಕಾತಿ ಪಾರದರ್ಶಕವಾಗಿ ನಡೆಯಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.