Advertisement

ಗಾಂಜಾ ಸಂಗ್ರಹ: ಇಬ್ಬರ ಬಂಧನ

03:17 PM Sep 23, 2020 | Suhan S |

ಹನೂರು: ಎರಡು ಪ್ರತ್ಯೇಕ ಘಟನೆಯಲ್ಲಿ ಗಾಂಜಾ ಸಂಗ್ರಹಣೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, 2 ಲಕ್ಷ ರೂ.ಗೂ ಅಧಿಕ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ರಾಜ್ಯದ ಗಡಿಯಂಚಿನ ಜಲ್ಲಿಪಾಳ್ಯ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಗ್ರಾಮದ ವೀರಪ್ಪನ್‌ (74) ಹಾಗೂ ಶೇಷುರಾಜ್‌ (52) ಬಂಧಿತ ಆರೋಪಿಗಳು. ಈ ಇಬ್ಬರು ಮಾರಾಟ ಮಾಡುವ ಸಲುವಾಗಿ ತಮ್ಮ ಮನೆಯಲ್ಲಿ ಅಕ್ರಮವಾಗಿ ಗಾಂಜಾ ಸಂಗ್ರಹಣೆ ಮಾಡಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಉಪವಿಭಾಗದ ಡಿವೈಎಸ್ಪಿ ನಾಗರಾಜು ಮತ್ತು ರಾಮಾಪುರ ಪಿಎಸ್‌ಐ ಮನೋಜ್‌ ಕುಮಾರ್‌ ಹಾಗೂ ಸಿಬ್ಬಂದಿ ದಾಳಿ ನಡೆಸಿದರು.

ದಾಳಿಯ ವೇಳೆ ಆರೋಪಿ ವೀರಪ್ಪನ್‌ನ ಮನೆಯಲ್ಲಿ 1.290 ಕೆ.ಜಿ. ಒಣ ಗಾಂಜಾ ಹಾಗೂ ಮತ್ತೋರ್ವ ಆರೋಪಿ ಶೇಷುರಾಜ್‌ ಮನೆಯಲ್ಲಿ 1.400 ಕೆ.ಜಿ ಗಾಂಜಾ ದೊರೆತಿದೆ. ಇಬ್ಬರ ಮನೆಯಲ್ಲಿ ಒಟ್ಟಾರೆ 2.16 ಲಕ್ಷ ರೂ. ಮೌಲ್ಯದ ಗಾಂಜಾ ಪತ್ತೆಯಾಗಿದೆ. ಈ ಸಂಬಂಧ ರಾಮಾಪುರ ಠಾಣೆ ಪೊಲೀಸರು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ. ದಾಳಿಯಲ್ಲಿ ಎಎಸ್‌ಐ ಸಿದ್ದಪ್ಪ, ರಘು, ನಂಜುಂಡ, ಅಣ್ಣಾದೊರೈ, ನಾಗೇಂದ್ರ, ಪ್ರಕಾಶ್‌, ಕಿರಣ್‌, ಶಿವಮೂರ್ತಿ, ಶಿವರಾಜು, ಶಕೀವುಲ್ಲಾ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next