Advertisement

ಎಲೆಕ್ಷನ್‌ಗಾಗಿ ಕಲೆಕ್ಷನ್‌: ಕೈ ಆರೋಪ

09:09 PM Mar 03, 2023 | Team Udayavani |

ಬೆಂಗಳೂರು: ಬಿಜೆಪಿಯಲ್ಲಿ “ಎಲೆಕ್ಷನ್‌ಗಾಗಿ ಕಲೆಕ್ಷನ್‌’ ನಡೆಯುತ್ತಿದ್ದು ಲೋಕಾಯುಕ್ತ ದಾಳಿಯಲ್ಲಿ ವಶಪಡಿಸಿಕೊಂಡ ಬೃಹತ್‌ ಮೊತ್ತವೇ ಸಾಕ್ಷಿ ಎಂದು ಕಾಂಗ್ರೆಸ್‌ ಗಂಭೀರ ಆರೋಪ ಮಾಡಿದೆ.

Advertisement

ಕೆಪಿಸಿಸಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಪ್ರಿಯಾಂಕ ಖರ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮನೆ, ಕಚೇರಿ ಮೇಲೆ ಲೋಕಾಯುಕ್ತ ನಡೆಸಿದ ದಾಳಿಯಲ್ಲಿ ಬಯಲಾದ ಹಣವೇ ಇದಕ್ಕೆ ಸಾಕ್ಷಿ.

ರಾಜ್ಯ ಸರ್ಕಾರದ ಎಲ್ಲಾ ಕಾಮಗಾರಿಗಳಲ್ಲೂ ಹಣ ಸಂಗ್ರಹ ನಡೆಯುತ್ತಿದೆ. ಹಾಗಾಗಿ, ಕಳೆದ ಆರು ತಿಂಗಳಲ್ಲಿ ಕರೆದ ಟೆಂಡರ್‌ಗಳೆಲ್ಲವನ್ನೂ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.

ಇದೇನಾ ಬಿಜೆಪಿಯ ಪಾರದರ್ಶಕ ಆಡಳಿತ? ಈಚೆಗೆ ಸಂಡೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು “ಪ್ರಧಾನಿ ನರೇಂದ್ರ ಮೋದಿ ಮುಖ ನೋಡಿ ಮತ ಹಾಕಿ’ ಎಂದು ಹೇಳಿದ್ದರ ಹಿಂದಿನ ಸತ್ಯ ಬಹುಶಃ ಇದೇ ಇರಬೇಕು ಎಂದು ಸೂಚ್ಯವಾಗಿ ಹೇಳಿದರು.

ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್‌ಬಾಬು, ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ಇದ್ದರು.

Advertisement

ಬಿಜೆಪಿ ಜನ ಸಂಕಲ್ಪ ಯಾತ್ರೆ ಅಲ್ಲ; ಇದು ಲಂಚ ಸಂಕಲ್ಪ ಯಾತ್ರೆ ಆಗಿದೆ. ಸ್ವತಃ ಗುತ್ತಿಗೆದಾರರ ಸಂಘ, ಮಾನ್ಯತೆ ಪಡೆದ ಖಾಸಗಿ ಅನುದಾನರಹಿತ ಶಾಲೆಗಳ ಸಂಘ (ರುಪ್ಸಾ) ಖುದ್ದು ಪ್ರಧಾನಿಗೆ ದೂರು ನೀಡಿದ್ದರು. ಇದಲ್ಲದೆ, ಹಿಂದೆ ಮಠಾಧೀಶರೊಬ್ಬರು ಮಠಗಳಿಗೆ ಅನುದಾನ ಪಡೆಯಲು ಸರ್ಕಾರಕ್ಕೆ ಶೇ. 30 ಕಮೀಷನ್‌ ನೀಡಬೇಕು ಎಂದು ಹೇಳಿದ್ದರು. ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಮುಖ್ಯಮಂತ್ರಿ ಕಚೇರಿಯ ಹಸ್ತಕ್ಷೇಪದ ಬಗ್ಗೆ ಖುದ್ದು ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಇಂತಹ ಹತ್ತಾರು ಉದಾಹರಣೆಗಳಿವೆ. ಅದೆಲ್ಲದಕ್ಕೂ ಬಿಜೆಪಿ ಅಧ್ಯಕ್ಷರು ಸೇರಿದಂತೆ ಬಿಜೆಪಿ ಮೌನಕ್ಕೆ ಶರಣಾಗಿತ್ತು ಎಂದು ದೂರಿದರು.

“ತಿನ್ನಲ್ಲ ತಿನ್ನಲು ಬಿಡುವುದಿಲ್ಲ’ (ನಾ ಖಾವುಂಗಾ ನಾ ಖಾನೆದೂಂಗಾ) ಎನ್ನುತ್ತಿದ್ದವರು ಈಗ ಏನು ಹೇಳುತ್ತಾರೆ? “ನಾನೂ ತಿನ್ನುತ್ತೇನೆ. ಇತರರಿಗೂ ತಿನ್ನಿಸುತ್ತೇನೆ’ (ಮೈಭೀ ಖಾವುಂಗಾ ಖೀಲಾವುಂಗಾ) ಎಂದು ಹೇಳುತ್ತಾರೆಯೇ’ ಎಂದು ಕೇಳಿದರು.

ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್‌ಬಾಬು, ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next