Advertisement
ಕೆಪಿಸಿಸಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಪ್ರಿಯಾಂಕ ಖರ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮನೆ, ಕಚೇರಿ ಮೇಲೆ ಲೋಕಾಯುಕ್ತ ನಡೆಸಿದ ದಾಳಿಯಲ್ಲಿ ಬಯಲಾದ ಹಣವೇ ಇದಕ್ಕೆ ಸಾಕ್ಷಿ.
Related Articles
Advertisement
ಬಿಜೆಪಿ ಜನ ಸಂಕಲ್ಪ ಯಾತ್ರೆ ಅಲ್ಲ; ಇದು ಲಂಚ ಸಂಕಲ್ಪ ಯಾತ್ರೆ ಆಗಿದೆ. ಸ್ವತಃ ಗುತ್ತಿಗೆದಾರರ ಸಂಘ, ಮಾನ್ಯತೆ ಪಡೆದ ಖಾಸಗಿ ಅನುದಾನರಹಿತ ಶಾಲೆಗಳ ಸಂಘ (ರುಪ್ಸಾ) ಖುದ್ದು ಪ್ರಧಾನಿಗೆ ದೂರು ನೀಡಿದ್ದರು. ಇದಲ್ಲದೆ, ಹಿಂದೆ ಮಠಾಧೀಶರೊಬ್ಬರು ಮಠಗಳಿಗೆ ಅನುದಾನ ಪಡೆಯಲು ಸರ್ಕಾರಕ್ಕೆ ಶೇ. 30 ಕಮೀಷನ್ ನೀಡಬೇಕು ಎಂದು ಹೇಳಿದ್ದರು. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮುಖ್ಯಮಂತ್ರಿ ಕಚೇರಿಯ ಹಸ್ತಕ್ಷೇಪದ ಬಗ್ಗೆ ಖುದ್ದು ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಇಂತಹ ಹತ್ತಾರು ಉದಾಹರಣೆಗಳಿವೆ. ಅದೆಲ್ಲದಕ್ಕೂ ಬಿಜೆಪಿ ಅಧ್ಯಕ್ಷರು ಸೇರಿದಂತೆ ಬಿಜೆಪಿ ಮೌನಕ್ಕೆ ಶರಣಾಗಿತ್ತು ಎಂದು ದೂರಿದರು.
“ತಿನ್ನಲ್ಲ ತಿನ್ನಲು ಬಿಡುವುದಿಲ್ಲ’ (ನಾ ಖಾವುಂಗಾ ನಾ ಖಾನೆದೂಂಗಾ) ಎನ್ನುತ್ತಿದ್ದವರು ಈಗ ಏನು ಹೇಳುತ್ತಾರೆ? “ನಾನೂ ತಿನ್ನುತ್ತೇನೆ. ಇತರರಿಗೂ ತಿನ್ನಿಸುತ್ತೇನೆ’ (ಮೈಭೀ ಖಾವುಂಗಾ ಖೀಲಾವುಂಗಾ) ಎಂದು ಹೇಳುತ್ತಾರೆಯೇ’ ಎಂದು ಕೇಳಿದರು.
ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್‌ಬಾಬು, ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ಇದ್ದರು.