Advertisement
ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಸ್ಥಳೀಯ ಶಾಸಕ ಮತ್ತು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಇದನ್ನೆಲ್ಲ ಕಣ್ತುಂಬಿಕೊಂಡು, ಪುಳಕಿತರಾದರು. ಪವಿತ್ರ ಮೃತ್ತಿಕೆಯನ್ನು ಸಚಿವರಿಗೆ ಹಸ್ತಾಂತರಿಸಿದ ಕ್ಷೇತ್ರದ ನಾಗರಿಕರು ಧನ್ಯತೆಯ ಭಾವವನ್ನು ಅನುಭವಿಸಿದರು.
Related Articles
Advertisement
ದೇವಸ್ಥಾನಗಳಲ್ಲಿ ನಿರೀಕ್ಷೆಗೂ ಹೆಚ್ಚಿನ ಜನರು ತಾವು ತಂದಿದ್ದ ಪವಿತ್ರ ಮೃತ್ತಿಕೆಯ ಕುಂಭಗಳನ್ನು ಸಚಿವರಿಗೆ ಒಪ್ಪಿಸಿದರು. ಈ ಸಾಲಿನಲ್ಲಿ ಅರ್ಚಕರು, ಮಹಿಳೆಯರು, ಜನಸಾಮಾನ್ಯರು, ಬಡಾವಣೆಗಳ ಪ್ರಮುಖರೆಲ್ಲ ಇದ್ದರು.
ಕೊನೆಯ ಚರಣದಲ್ಲಿ ಮೃತ್ತಿಕೆ ಸಂಗ್ರಹವು ಮಲ್ಲೇಶ್ವರಂ ವೃತ್ತದಲ್ಲಿರುವ ಕುವೆಂಪು ಪ್ರತಿಮೆಯ ಬಳಿಯಿಂದ ಆರಂಭವಾಯಿತು. ಮಲ್ಲೇಶ್ವರಂನ ದೇವಸ್ಥಾನಗಳ ಒಕ್ಕೂಟದ ಮುಖ್ಯಸ್ಥರಾದ ಹರೀಶ್ ಪಂಡಿತ್ ಅವರ ನೇತೃತ್ವದಲ್ಲಿ ಎಲ್ಲ ದೇಗುಲಗಳ ಅರ್ಚಕರು, ಭಕ್ತಾದಿಗಳು, ಆಡಳಿತ ಮಂಡಳಿಯವರು, ಮಹಿಳೆಯರು, ಸಾರ್ವಜನಿಕರು, ವ್ಯಾಪಾರಿಗಳು, ಪ್ರಮುಖರು ಮೃತ್ತಿಕೆಯನ್ನು ಅಶ್ವತ್ಥನಾರಾಯಣ ಅವರಿಗೆ ಪ್ರದಾನ ಮಾಡಿದರು. ಕೋದಂಡರಾಮಪುರ, ಲಕ್ಷ್ಮೀನಾರಾಯಣ ಪುರ ಇತ್ಯಾದಿಗಳ ಭಾಗದ ಎಲ್ಲಾ ಬಿಬಿಎಂಪಿ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರು ಕೂಡ ಅಭಿಯಾನದಲ್ಲಿ ಮೃತ್ತಿಕೆಯನ್ನು ಕೊಟ್ಟರು.
ಇಲ್ಲಿಂದ ಸಂಪಿಗೆ ರಸ್ತೆಯುದ್ದಕ್ಕೂ ಸಾಗಿದ ಮೆರವಣಿಗೆಯು ಬಳಿಕ 18ನೇ ಅಡ್ಡರಸ್ತೆಯಲ್ಲಿರುವ ಗೋಕಾಕ್ ಚಳವಳಿ ಸ್ಮರಣಾರ್ಥ ಉದ್ಯಾನದಲ್ಲಿ ಸಂಪನ್ನಗೊಂಡಿತು. ಅಷ್ಟು ಹೊತ್ತಿಗಾಗಲೇ ಕತ್ತಲು ಕವಿದಿದ್ದರೂ ನೆರೆದಿದ್ದ ಜನರ ಮೊಗದಲ್ಲಿ ಕೆಂಪೇಗೌಡರ ಸ್ಮರಣೆಯ ತರಂಗಗಳು ಸುತ್ತಲಿನ ವಾತಾವರಣವನ್ನು ಆವರಿಸಿಕೊಂಡಿದ್ದವು.
ಮೆರವಣಿಗೆಯಲ್ಲಿ ಬಿಜೆಪಿ ಮುಖಂಡರಾದ ಮಂಜುನಾಥ ರಾಜು, ಜಯಪಾಲ್, ಡಾ.ವಾಸು, ಕೇಶವಮೂರ್ತಿ, ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆಯ ಸಮೀವುಲ್ಲಾ ಮುಂತಾದ ಪ್ರಮುಖರು ಬಿರುಸಿನಿಂದ ಹೆಜ್ಜೆ ಹಾಕಿದರು.