Advertisement

28ರ ಜಗಳೂರು ಬಂದ್‌ಗೆ ಸಹಕರಿಸಿ: ಎಸ್‌ವಿಆರ್‌

12:27 PM May 27, 2018 | Team Udayavani |

ಜಗಳೂರು: ಸಾಲಮನ್ನಾ ಸೇರಿದಂತೆ ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲ ಬೇಡಿಕೆಗಳನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಈಡೇರಿಸಬೇಕೆಂದು ಒತ್ತಾಯಿಸಿ ಮೇ 28ರಂದು ಪಟ್ಟಣದಲ್ಲಿ ಬಂದ್‌ ಆಚರಿಸಲಾಗುವುದು ಎಂದು
ಶಾಸಕ ಎಸ್‌.ವಿ. ರಾಮಚಂದ್ರ ತಿಳಿಸಿದರು.

Advertisement

ಪಟ್ಟಣದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್‌ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರು.
ಆದರೆ ಈಗ ಇಲ್ಲದ ಸಬೂಬು ಹೇಳುವ ಮೂಲಕ ರೈತರಿಗೆ ಅನ್ಯಾಯ ಮಾಡಲು ಹೊರಟಿದ್ದಾರೆ.  ಜನತೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ದೂರಿದರು. 

ಸಾಲ ಮನ್ನಾದ ಜೊತೆಗೆ ಉಚಿತ ವಿದ್ಯುತ್‌, ವೃದ್ಧಾಪ್ಯ ವೇತನ, ನಿರುದ್ಯೋಗ ಭತ್ಯೆ ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ವಿಧಾನಸೌಧದ ಒಳಗೆ ಹೊರಗೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಸಿದರು. ಸಾಲಮನ್ನಾ ವಿಳಂಬವಾಗಿರುವ ಹಿನ್ನೆಲೆಯಲ್ಲಿ ತಾಲೂಕಿನ
ಉರ‌್ಲಕಟ್ಟೆಯ ರೈತ ಜಯಣ್ಣ ಸಾಲದ ಬಾಧೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂಬ ಮಾಹಿತಿ ಇದೆ. ಆತ ಸುಮಾರು 6 ಲಕ್ಷರೂ. ಸಾಲ ಮಾಡಿದ್ದ ಎನ್ನಲಾಗುತ್ತದೆ. ಇದೇ ರೀತಿ ರಾಜ್ಯದಲ್ಲಿ ಅನೇಕ ರೈತರು ಸಾಲದಿಂದ ನರಳುತ್ತಿದ್ದಾರೆ. 

ಕೂಡಲೇ ಮುಖ್ಯಮಂತ್ರಿಗಳು ಹೇಳಿದಂತೆ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ರೈತರು, ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಬಂದ್‌ನ್ನು ಯಶಸ್ವಿಗೊಳಿಸಬೇಕು. ಜನ, ವ್ಯಾಪಾರಸ್ಥರು ಶಾಂತಿಯುತ ಬಂದ್‌ಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು. ಜಿಪಂ ಸದಸ್ಯರಾದ ಸಿದ್ದಪ್ಪ, ಶಾಂತಕುಮಾರಿ, ಎಸ್‌.ಕೆ. ಮಂಜುನಾಥ್‌, ತಾಪಂ ಸದಸ್ಯರಾದ ಟಿ.ಬಸವರಾಜ್‌, ಶಂಕ್ರನಾಯ್ಕ, ಸಿದ್ದೇಶ್‌, ಪ.ಪಂ ಸದಸ್ಯ ಆರ್‌. ತಿಪ್ಪೇಸ್ವಾಮಿ, ಬಿಜೆಪಿ ತಾಲೂಕು ಅಧ್ಯಕ್ಷ ಡಿ.ವಿ. ನಾಗಪ್ಪ, ಪ್ರಧಾನ ಕಾರ್ಯದರ್ಶಿ ಅಂಜಿನಪ್ಪ, ಮುಖಂಡರಾದ ಬಿಸ್ತುವಳ್ಳಿ ಬಸವರಾಜ್‌ ಬಾಬು, ಮಂಜಣ್ಣ, ಸೋಮನಹಳ್ಳಿ ಶ್ರೀನಿವಾಸ್‌, ಇಂದ್ರೇಶ್‌, ಹನುಮಂತಪ್ಪ, ಶಿವಣ್ಣ ಇದ್ದರು.

ವಿಧಾನ ಪರಿಷತ್‌ ಚುನಾವಣೆಯ ನೀತಿ ಸಂಹಿತೆ ಜೂ. 15ರವರೆಗೂ ಜಾರಿಯಲ್ಲಿದೆ. ನೀತಿ ಸಂಹಿತೆ ಮುಗಿದ ಕೂಡಲೇ ಅಧಿ ಕಾರಿಗಳ ಸಭೆ ನಡೆಸಿ ಆಡಳಿತ ಯಂತ್ರವನ್ನು ಚುರುಕುಗೊಳಿಸಲಾಗುವುದು.

Advertisement

ಕಲುಷಿತವಾಗಿರುವ ಜಗಳೂರು ಕೆರೆಗೆ ಕಾಯಕಲ್ಪ ನೀಡುವ ಕಾರ್ಯಕ್ರಮವನ್ನು ಸದ್ಯದಲ್ಲಿ ರೂಪಿಸಲಾಗುವುದು. ಕ್ಷೇತ್ರದಲ್ಲಿ ಉತ್ತಮ ಮಳೆಯಾಗಿದೆ. ಬೀಜ, ರಸಗೊಬ್ಬರದ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
 ಎಸ್‌.ವಿ. ರಾಮಚಂದ್ರ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next