Advertisement
ಶುಕ್ರವಾರ ಇಲ್ಲಿನ ಎಚ್‌ಟಿಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಚಳ್ಳಕೆರೆ ನಗರದ ಕ್ಲಸ್ಟರ್ ಮಟ್ಟದ ಪೋಷಕರ ಮತ್ತು ಸಮನ್ವಯ ಸಮಿತಿ ಸದಸ್ಯರ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ಸರ್ಕಾರ ಶೈಕ್ಷಣಿಕ ಬೆಳವಣಿಗೆ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಅನೇಕ ಉತ್ತಮ ಯೋಜನೆಗಳನ್ನು ನೀಡಿ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಗಮನ ನೀಡುತ್ತಿದೆ ಎಂದರು.
ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ, ಪೋಷಕರು ಹಾಗೂ ಸಮನ್ವಯ ಸಮಿತಿ ಸದಸ್ಯರು ಸಹಕಾರ ನೀಡಬೇಕು. ವಿದ್ಯಾರ್ಥಿಗಳ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದು ಹೇಳಿದರು.
ಅಕ್ಷರ ಫೌಂಡೇಷನ್ ಜಿಲ್ಲಾ ನೋಡಲ್ ಅಧಿಕಾರಿ ಕರ್ಣಿ ಮಾತನಾಡಿ, ಪ್ರತಿನಿತ್ಯ ಬೋಧಿಸುವ ಶಿಕ್ಷಕರು ವಿದ್ಯಾರ್ಥಿಗಳ ಶೈಕ್ಷಣಿಕ ಚಲನವಲನಗಳ ಬಗ್ಗೆ ಗಮನ ನೀಡುವುದು ಸ್ವಾಭಾವಿಕ. ಆದರೆ, ಶಾಲೆ ಸಮಯ ಮೀರಿದ ನಂತರ ಮನೆಯಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳ ಕಾರ್ಯಚಟುವಟಿಕೆಗಳ ಬಗ್ಗೆ ಪೋಷಕರು ಗಮನಹರಿಸಬೇಕು. ಪೋಷಕರ ಸಹಕಾರದಿಂದ ಮಾತ್ರ ಶಿಕ್ಷಕರು ತಮ್ಮ ಕಾರ್ಯವನ್ನು ಯಶಸ್ಸಿಯಾಗಿ ಪೂರೈಸಲು ಸಾಧ್ಯ. ಒಟ್ಟಿನಲ್ಲಿ ಶಿಕ್ಷಣದ ಸರ್ವತೋಮುಖ ಬೆಳವಣಿಗೆಗೆ ಎಲ್ಲ ರೀತಿಯಿಂದಲೂ ಸಹಕಾರವನ್ನು ಬಯಸಲಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಎಚ್. ರಾಜಣ್ಣ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ನೀಡುವ ಶಿಕ್ಷಣ ಮೌಲ್ಯಯುತವಾಗಿದ್ದು,
ಸಮಸ್ಯೆಗಳು ಇದ್ದಲ್ಲಿ ವಿದ್ಯಾರ್ಥಿಗಳೇ ಶಿಕ್ಷಕರಿಂದ ಕಂಡುಕೊಳ್ಳಬೇಕಿದೆ. ವಿದ್ಯಾರ್ಥಿಗಳು ಹೆಚ್ಚು ಕ್ರಿಯಾಶೀಲವಾಗಿ ಅಭ್ಯಾಸದಲ್ಲಿ ನಿರತನಾದಾಗ ಮಾತ್ರ ಶಿಕ್ಷಕರ ಬೋಧನೆ ಸಫಲವಾಗುತ್ತದೆ. ಪೋಷಕರು ಅತಿ ಹೆಚ್ಚು ಆತ್ಮವಿಶ್ವಾಸದಿಂದ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸುತ್ತಿದ್ದು, ಇವರ ಸಂಕಷ್ಟಗಳು ನಿವಾರಣೆಯಾಗಬೇಕಾದಲ್ಲಿ ಪರಿಶ್ರಮದ ಕಠಿಣ ಅಭ್ಯಾಸವನ್ನು ಎಲ್ಲಾ ವಿದ್ಯಾರ್ಥಿಗಳು ಮಾಡಬೇಕು ಎಂದು ಹೇಳಿದರು.
Related Articles
Advertisement