Advertisement
ಕಾಂಗ್ರೆಸ್ ಕಾರ್ಯಕರ್ತರ ನೇತೃತ್ವದಲ್ಲಿ ಮರಳೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಆರ್.ಧ್ರುವನಾರಾಯಣ ಹ್ಯಾಟ್ರಿಕ್ ಗೆಲುವು ಸಾಧಿಸುವಂತೆ ಜೈಕಾರ ಹಾಕುತ್ತಾ ದೇವಸ್ಥಾನದಿಂದ ಮುಖ್ಯ ರಸ್ತೆಯ ಮೂಲಕ ಮನೆ ಮನೆಗೆ ತೆರಳಿ ಕರ ಪತ್ರವನ್ನು ವಿತರಿಸಿ ಮತಯಾಚನೆ ಮಾಡಿದರು.
Related Articles
Advertisement
ಡಿಎನ್ ನಟರಾಜು, ಪಕ್ಷ ತೊರೆದು ಬಿಜೆಪಿಗೆ ಸೇರುತ್ತಾರೆ ಎಂದು ವದಂತಿ ಇದ್ದು ಅವರು ಪಕ್ಷ ಬಿಡದಂತೆ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಮನವೊಲಿಸುವ ಪ್ರಯತ್ನ ಮಾಡಿದ್ದು ಅವರು ಜ್ಯಾತ್ಯತೀತ ಕಾಂಗ್ರೆಸ್‌ಪಕ್ಷ ಬಿಟ್ಟು ಕೋಮುವಾದಿ ಪಕ್ಷಕ್ಕೆ ಸೇರುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಮನೆ ಮನೆಗೆ ತೆರಳಿ ಮತಯಾಚನೆ: ನಗರದ 31 ವಾರ್ಡ್‌ಗಳಿದ್ದು ಎಲ್ಲಾ ವಾರ್ಡ್‌ಗಳಲ್ಲಿ ಮಾಜಿ ಶಾಸಕರಾದ ಎಸ್.ಜಯಣ್ಣ, ಎಸ್.ಬಾಲರಾಜು, ಎ.ಆರ್.ಕೃಷ್ಣಮೂರ್ತಿ ನೇತೃತ್ವದಲ್ಲಿ ಪ್ರತಿ ದಿನ 3 ರಿಂದ 4 ವಾರ್ಡ್‌ಗಳಲ್ಲಿ ಮತ ಪ್ರಚಾರ ಕೈಗೊಂಡು ಪಕ್ಷದ ಅಭ್ಯರ್ಥಿಪರ ಮತಯಾಚನೆ ಮಾಡುವರು ಎಂದು ಹೇಳಿದರು. ಮರಳೇಶ್ವರ ದೇವಾಲಯದಿಂದ ಸಮಂತಗೆರೆ ಬಡಾವಣೆವರೆಗೆ ಪಾದಯಾತ್ರೆ ಮಾಡಿದ ಸಂಸದರು ಮನೆ ಮನೆಗೆ ತೆರಳಿ ಕರ ಪತ್ರ ನೀಡಿ ಕಾಂಗ್ರೆಸ್ ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.
ಮಾಜಿ ಶಾಸಕರಾದ ಎಸ್.ಜಯಣ್ಣ, ಎಸ್.ಬಾಲರಾಜು, ಎ.ಆರ್.ಕೃಷ್ಣಮೂರ್ತಿ, ನಗರಸಭಾ ಸದಸ್ಯರಾದ ಶಾಂತರಾಜು, ರಾಘವೇಂದ್ರ, ಮಂಜುನಾಥ, ಸುರೇಶ್, ಮಾಜಿ ಸದಸ್ಯರಾದ ಹರ್ಷ, ಮಲ್ಲಿಕಾರ್ಜುನ, ಸೆಸ್ಕ್ ಮಾಜಿ ನಿದೇರ್ಶಕ ಡಿ.ಸಿದ್ದರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೆಶ್, ಮುಖಂಡರಾದ ಕೊಪ್ಪಳಿ ಮಹದೇವನಾಯಕ, ಕರವೇ ಅಧ್ಯಕ್ಷ ಮತೀನ್, ಗೌರಾವಾಧ್ಯಕ್ಷ ಪ್ರಭಾಕರ್ ಮತ್ತು ಮುಖಂಡರು ಇತರರು ಇದ್ದರು.