Advertisement

ಕೊಲಿಜಿಯಂ ಚರ್ಚೆ ಬಹಿರಂಗ ಸಲ್ಲ

10:01 AM Nov 01, 2019 | sudhir |

ಹೊಸದಿಲ್ಲಿ: “ಉನ್ನತ ನ್ಯಾಯಾಂಗಕ್ಕೆ ನೇಮಕದ ವೇಳೆ ತಿರಸ್ಕೃತಗೊಂಡ ಕೆಲವು ಹೆಸರುಗಳ ಕುರಿತು ಸುಪ್ರೀಂ ಕೋರ್ಟ್‌ ಕೊಲೀಜಿಯಂನಲ್ಲಿ ನಡೆಯುವ ಚರ್ಚೆಗಳು ಹಾಗೂ ಸಮಾಲೋಚನೆಗಳನ್ನು ಬಹಿರಂಗ ಪಡಿಸಲು ನಾನು ಇಚ್ಛಿಸುವುದಿಲ್ಲ. ಏಕೆಂದರೆ, ಇದು ರಹಸ್ಯದ ಪ್ರಶ್ನೆಯಲ್ಲ, ಬದಲಿಗೆ ಖಾಸಗಿತನದ ಹಕ್ಕಿನ ಪ್ರಶ್ನೆ’ ಎಂದು ಸುಪ್ರೀಂ ಕೋರ್ಟ್‌ನ ನಿಯೋಜಿತ ಸಿಜೆಐ ಎಸ್‌.ಎ.ಬೋಬೆx ಅಭಿಪ್ರಾಯ ಪಟ್ಟಿದ್ದಾರೆ. ಕೊಲಿಜಿಯಂ ಕಾರ್ಯವೈಖರಿ ಪಾರದರ್ಶಕತೆ ಹೊಂದಿರಬೇಕು ಎಂಬ ಆಗ್ರಹದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, “ಕೊಲಿಜಿಯಂನಲ್ಲಿ ನಡೆದ ಚರ್ಚೆಗಳು ನಾಗರಿಕರಿಗೆ ಗೊತ್ತಾಗಬೇಕು ಎಂಬ ಏಕೈಕ ಉದ್ದೇಶದಿಂದ ಕೆಲವು ವ್ಯಕ್ತಿಗಳ ಘನತೆಯೊಂದಿಗೆ ರಾಜಿ ಮಾಡಿಕೊಳ್ಳುವುದು ಸರಿಯಲ್ಲ’ ಎಂದೂ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next