Advertisement

ಟಿ20ಯಲ್ಲಿ 3 ಶತಕ: ಮನ್ರೊ ವಿಶ್ವ ದಾಖಲೆ

10:05 AM Jan 04, 2018 | Team Udayavani |

ಮೌಂಟ್‌ ಮೌಂಗನುಯಿ: ಆರಂಭಿಕ ಆಟಗಾರ ಕಾಲಿನ್‌ ಮನ್ರೊ ಅವರ ವಿಶ್ವದಾಖಲೆ ಶತಕದಿಂದಾಗಿ ನ್ಯೂಜಿಲೆಂಡ್‌ ತಂಡವು ವೆಸ್ಟ್‌ಇಂಡೀಸ್‌ ವಿರುದ್ಧ ನಡೆದ 3ನೇ ಟಿ20 ಪಂದ್ಯದಲ್ಲಿ 119 ರನ್ನುಗಳಿಂದ ‌ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ಸರಣಿಯ ದ್ವಿತೀಯ ಪಂದ್ಯದಲ್ಲಿ ಯಾವುದೇ ಫ‌ಲಿತಾಂಶ ಬಂದಿರಲಿಲ್ಲ. 

Advertisement

ಅಂತಾರಾಷ್ಟ್ರೀಯ  ಟಿ20ಯಲ್ಲಿ 3 ಶತಕ ಬಾರಿಸಿದ ಏಕೈಕ ಆಟಗಾರ ಕಿವೀಸ್‌ನ ಎನಿಸಿಕೊಂಡಿದ್ದಾರೆ. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಅರ್ಧಶತಕ ಹೊಡೆದಿದ್ದ ಮನ್ರೊ ಈ ಪಂದ್ಯದಲ್ಲಿ ಕೇವಲ 53 ಎಸೆತಗಳಿಂದ 104 ರನ್‌ ಚಚ್ಚಿದರು. 

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್‌ 243 /5 (ಮನ್ರೊ 104, ಗಪ್ಟಿಲ್‌ 63, ಬ್ರಾಥ್‌ ವೇಟ್‌ 50ಕ್ಕೆ 2), ವೆಸ್ಟ್‌ಇಂಡೀಸ್‌ 124
ಆಲೌಟ್‌ (ಆಂಡ್ರೆ ಫ್ಲೆಚರ್‌ 46, ಟಿಮ್‌ ಸೌಥಿ 21ಕ್ಕೆ 3, ಟ್ರೆಂಟ್‌ ಬೌಲ್ಟ್ 29ಕ್ಕೆ 2). 

Advertisement

Udayavani is now on Telegram. Click here to join our channel and stay updated with the latest news.

Next