Advertisement

ಕಾನ್ಪುರ: ಅಮೋನಿಯ ಗ್ಯಾಸ್‌ ಬ್ಲಾಸ್ಟ್‌, ಕುಸಿದ ಕಟ್ಟಡದಡಿ 25 ಮಂದಿ

05:29 PM Mar 15, 2017 | udayavani editorial |

ಕಾನ್ಪುರ : ಇಲ್ಲಿನ ಶಿವರಾಜಪುರ ಪ್ರದೇಶದಲ್ಲಿ ಅಮೋನಿಯ ಗ್ಯಾಸ್‌ ಸೋರಿಕೆಯಿಂದ ಸ್ಫೋಟ ಉಂಟಾದ ಪ್ರಯುಕ್ತ ಕೋಲ್ಡ್‌ ಸ್ಟೋರೇಜ್‌ ಕಟ್ಟಡವೊಂದು ಕುಸಿದು ಅದರೊಳಗೆ ಸುಮಾರು 25 ಮಂದಿ ಸಿಲುಕಿ ಕೊಂಡಿರುವುದಾಗಿ ವರದಿಯಾಗಿದೆ.

Advertisement

ಇಲ್ಲಿನ ಝೀರೋ ರಸ್ತೆಯಲ್ಲಿ ಕೋಲ್ಡ್‌ ಸ್ಟೋರೇಜ್‌  ಕಟ್ಟಡದೊಳಗೆ  ಅಮೋನಿಯಾ ಸೋರಿಕೆ ಉಂಟಾದಾಗ ಭಾರೀ ದೊಡ್ಡ ಸ್ಫೋಟ ಉಂಟಾಯಿತು. ಇದರಿಂದ ಸ್ಥಳೀಯರು ಭಯಭೀತರಾದರು. 

ಘಟನೆ ನಡೆದ ಒಡನೆಯೇ ಸ್ಥಳೀಯಾಡಳಿತೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸಮರೋಪಾದಿಯ ರಕ್ಷಣಾ ಕಾರ್ಯವನ್ನು ಕೈಗೊಂಡರು.  ಅವಶೇಷಗಳಡಿ ಸಿಲುಕಿಕೊಂಡಿರುವವರನ್ನು ಹೊರತೆಗೆಯುವ ಕೆಲಸ ಭರದಿಂದ ನಡೆಯುತ್ತಿದ್ದು ಈ ತನಕ ಯಾವುದೇ ಜೀವಹಾನಿ ಆಗಿರುವ ವರದಿಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ .

Advertisement

Udayavani is now on Telegram. Click here to join our channel and stay updated with the latest news.

Next