Advertisement
ಈ ಬಾರಿ ಮಳೆ ಜನವರಿಯವರೆಗೂ ಸುರಿದಿದ್ದರಿಂದ ಚಳಿಯ ಪ್ರಮಾಣ ಕಡಿಮೆಯಾಗಿತ್ತು. ಶನಿವಾರ ಬಳಿಕ ಮತ್ತೆ ಚಳಿಯ ವಾತಾವರಣ ಕಂಡು ಬಂದಿತ್ತು. ಮಂಗಳೂರಿನಲ್ಲಿ ರವಿವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಕನಿಷ್ಠ ತಾಪಮಾನ 19.3 ಡಿ.ಸೆ. ದಾಖಲಾಗಿತ್ತು. ಇದು ಸಾಮಾನ್ಯ ತಾಪಮಾನಕ್ಕಿಂತ ಮೂರು ಡಿ.ಸೆ. ಕಡಿಮೆಯಾಗಿತ್ತು. ಗ್ರಾಮಾಂತರ ಪ್ರದೇಶಗಳಲ್ಲಿ ಬೆಳಗ್ಗೆ 9 ಗಂಟೆಯವರೆಗೂ ಚಳಿಯ ವಾತಾವರಣವಿತ್ತು. ದಿನದ ಗರಿಷ್ಠ ತಾಪಮಾನ 34.3 ಡಿ.ಸೆ. ದಾಖಲಾಗಿತ್ತು.
ರವಿವಾರ 19 ಡಿ.ಸೆ. ಕನಿಷ್ಠ ತಾಪಮಾನ ಮತ್ತು 33 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿತ್ತು. ಸುಳ್ಯದಲ್ಲಿ ಕನಿಷ್ಠ ತಾಪಮಾನ 18 ಡಿ.ಸೆ.ಗೆ ಇಳಿದಿತ್ತು. ಕೊಡಗು: ಭಾರೀ ಚಳಿ
ಕೊಡಗಿನಲ್ಲಿ ಕಳೆದ ಕೆಲವು ದಿನಗಳಿಂದ ಚಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಡಿಕೇರಿಯಲ್ಲಿ ರವಿವಾರ 10.1 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು. ಇಲ್ಲಿನ ಕನಿಷ್ಠ ತಾಪಮಾನ ಇನ್ನೂ ಕುಸಿಯುವ ಸಂಭವ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆಗುಂಬೆಯಲ್ಲಿ ರವಿವಾರ 11.4 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.
Related Articles
ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಇನ್ನೂ ಮೂರ್‍ನಾಲ್ಕು ದಿನ ಚಳಿ ಮುಂದುವರಿಯಲಿದೆ. ಮಂಗಳೂರಿನಲ್ಲಿ ಫೆ. 10, 11, 12ರಂದು ಕನಿಷ್ಠ ತಾಪಮಾನ 20 ಡಿ.ಸೆ. ಆಸುಪಾಸಿನಲ್ಲಿರುವ ಸಾಧ್ಯತೆ ಇದ್ದರೆ, ಫೆ. 13, 14ರಂದು 19 ಡಿ.ಸೆ.ಗೆ ಇಳಿಯುವ ಸಂಭವ ಇದೆ. ಉಡುಪಿ ಜಿಲ್ಲೆಯಲ್ಲಿಯೂ ಬಹುತೇಕ ಇದೇ ವಾತಾವರಣ ಇರಲಿದೆ.
Advertisement